Advertisement

Mangaluru: ಚತುಷ್ಪಥದಿಂದ ಪದವು ಗ್ರಾಮ ಕೊಕ್‌?ರಾ. ಹೆ. ಪ್ರಾಧಿಕಾರ ಚಿಂತನೆ

03:40 PM Nov 17, 2023 | Team Udayavani |

ಮಹಾನಗರ: ಕುಲಶೇಖರ- ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆಗೆ ಸಂಬಂಧಿಸಿದಂತೆ ಅತೀ ಹೆಚ್ಚಿನ “ಭೂ
ಮೌಲ್ಯಮಾಪನ’ದ ಕಾರಣ ನೀಡಿ ಪದವು ಗ್ರಾಮವನ್ನೇ ಈ ಯೋಜನೆಯಿಂದ ಹೊರಗಿಡುವ ಸಾಧ್ಯತೆ ಗೋಚರಿಸಿದೆ.

Advertisement

ಕೆಲವು ತಿಂಗಳುಗಳಿಂದ ಸೂಕ್ತ ಭೂ ಪರಿಹಾರವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಈ ಯೋಜನೆಯಡಿ ಬರುವ ಹಲವು ಗ್ರಾಮಸ್ಥರು ಹೋರಾಟ ನಡೆ ಸುತ್ತಾ ಬಂದಿದ್ದಾರೆ. ಕೆಲವು ಗ್ರಾಮಗಳ ಭೂಮಾಲಕರು ಪರಿಹಾರವನ್ನು ಪಡೆದುಕೊಂಡಿದ್ದರೆ, ಹಲವು ಮಂದಿ ಪರಿಹಾರದಲ್ಲಿ ತಾರತಮ್ಯ ತೋರಲಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಪರವಾಗಿಯೇ ತೀರ್ಪು ಬಂದಿತ್ತು. ಅದರಂತೆ ಕೆಲವು ಗ್ರಾಮಗಳಿಗೆ ಭೂಮಾ ಲಕರಿಗೆ ಪರಿಹಾರ ವಿತರಿಸಲಾಗಿದೆ. ಆದರೆ ಪದವು ಗ್ರಾಮಸ್ಥರಿಗೆ ಮಾತ್ರ ಅನಿಶ್ಚಿತತೆ ಮುಂದುವರಿದಿತ್ತು. ಪ್ರಸ್ತುತ ಈ ಗ್ರಾಮದ 114 ಮಂದಿಗೆ 286 ಕೋಟಿ ರೂ. ಮೊತ್ತದ ಪ್ರಥಮ
ಪ್ರಾಶಸ್ತ್ಯದ ಪರಿಹಾರ ಪ್ಯಾಕೇಜ್‌ 3ಜಿ ಅವಾರ್ಡ್‌ ಮಾಡಲಾಗಿದೆ.

ಇಷ್ಟು ದೊಡ್ಡ ಮೊತ್ತ ನೀಡಲಾಗದು ಎಂಬ ಅಭಿಪ್ರಾಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಂದಿದ್ದು, ಪದವು ಗ್ರಾಮದಲ್ಲಿ ಯೋಜನೆ ಕೈಬಿಟ್ಟು ಉಳಿದ ಕಡೆಗಳಲ್ಲಿ ಕಾಮಗಾರಿ ಮುಂದುವರಿಸುವ ಸಾಧ್ಯತೆ ಇದೆ. ಯೋಜನೆಯಂತೆ ಕುಲಶೇಖರದಿಂದ ಸಾಣೂರು ಅಂತರ 45 ಕಿ.ಮೀ. ಭಾಗವನ್ನು ಚತುಷ್ಪಥಗೊಳಿಸ ಬೇಕಿದೆ. ಇದರಲ್ಲಿ ಪದವು ಬಿಟ್ಟರೆ ಸುಮಾರು 2.5 ಕಿ.ಮೀ. ಕಡಿಮೆಯಾಗಲಿದೆ.

ಬೈತುರ್ಲಿಯಿಂದ ಮುಂದೆ ಕುಡುಪು ಗ್ರಾಮದಿಂದ ಮೊದಲ್ಗೊಂಡು, ಬಳಿಕ ತಿರುವೈಲು ಗ್ರಾಮದ ಮೂಲಕ ಹೆದ್ದಾರಿ ವಿಸ್ತರಣೆ ಮುಂದುವರಿಯಲಿದೆ. ವೆಚ್ಚ ತೀರಾ ದುಬಾರಿ ನಾವು 2017ರಲ್ಲಿ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ವೇಳೆಯಲ್ಲೇ ಪದವು ಗ್ರಾಮದಲ್ಲಿ ಆಳದಿಂದಲೇ ಮಣ್ಣು ತುಂಬಿಸಬೇಕಾಗಿ ಬರುವ ಕಾರಣ ವೆಚ್ಚ ತೀರಾ ದುಬಾರಿಯಾಗಬಹುದು ಎಂದು ತಿಳಿಸಿದ್ದೆವು,

ಆಗ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ, ಅದರ ಬಗ್ಗೆ ನೀವು ಚಿಂತಿಸುವುದು ಬೇಡ, ಅದೆಲ್ಲ ನಿಮಗ್ಯಾಕೆ ಎಂದು ಅಸಡ್ಡೆಯಿಂದ ಮಾತನಾಡಿದ್ದರು, ಈಗ ಅವರು ಹಣ ಇಲ್ಲ ಎನ್ನುತ್ತಾರೆ ಎನ್‌ಎಚ್‌ 169 ಭೂಮಾಲಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್‌ ಅವರು.

Advertisement

ಡಿನೋಟಿಫೈ ?
ಪದವು ಗ್ರಾಮಕ್ಕೂ ಈಗಾಗಲೇ 3 ಜಿ ನೋಟಿμಕೇಶನ್‌ ಆಗಿರುವುದರಿಂದ ಇನ್ನು ಮುಂದೆ ಯೋಜನೆಯಿಂದ ಕೈಬಿಟ್ಟರೆ ಅದನ್ನು ಡಿನೋಟಿಫೈ ಮಾಡುವ ಕೆಲಸ ಮಾಡಬೇಕಾಗಬಹುದು, ಯಾವುದಕ್ಕೂ ನ್ಯಾಯಾಲಯದಲ್ಲಿ ವಿಚಾರಣೆಯನ್ನು ನೋಡಿಕೊಳ್ಳಬೇಕು ಎನ್ನುತ್ತಾರೆ ಥಾಮಸ್‌. ಪದವು ಗ್ರಾಮದಲ್ಲಿ ಭೂಮಿ ಕಳೆದುಕೊಳ್ಳುವ 114 ಭೂಮಾಲಕರಿದ್ದಾರೆ. 286 ಕೋಟಿ ರೂ. ವೆಚ್ಚದಲ್ಲಿ ಪರಿಹಾರ, ಕಣಿವೆ ತುಂಬುವ ವೆಚ್ಚ ಕೂಡ ಸೇರಿದೆ. 2016ರಲ್ಲಿ ಸೆಂಟ್ಸ್‌ಗೆ 3.5 ಲಕ್ಷ ರೂ. ಇದ್ದ ದರ 2018ರಲ್ಲಿ 9 ಲಕ್ಷ ರೂ. ಗೇರಿದೆ, ಈಗ 12.95 ಲಕ್ಷ ರೂ. ಆಗಿದೆ, ಇದಕ್ಕೆ ಪ್ರಾಧಿಕಾರದ ವಿಳಂಬ ಧೋರಣೆಯೇ ಕಾರಣ ಎನ್ನುವುದು ಅವರ ಅಭಿಪ್ರಾಯ.

ಖಚಿತವಾಗಿ ಹೇಳಿಲ್ಲ
ಪದವು ಗ್ರಾಮವನ್ನು ಕೈಬಿಡುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಏನನ್ನೂ ಖಚಿತವಾಗಿ ಹೇಳಿಲ್ಲ, ಪ್ರ ಯೆ ಮುಂದೆಯೂ ಹೋಗುತ್ತಿಲ್ಲ, ಅವಾರ್ಡ್‌ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ದ್ದಾರೆ, ಆ ಅರ್ಜಿ ಹಿಂದಕ್ಕೆ ತೆಗೆಯೋದಾಗಿ ಹೇಳಿದ್ದರು. ಆದರೆ ಅದನ್ನು ಮಾಡಿಲ್ಲ,
ಮುಲ್ಲೆ ಮುಗಿಲನ್‌,
ಜಿಲ್ಲಾಧಿಕಾರಿ , ದ.ಕ.

ಈ ವಿಚಾರ ನ್ಯಾಯಾಲಯದಲ್ಲಿದೆ ‌ಸದ್ಯ ಈ ವಿಚಾರ ನ್ಯಾಯಾಲಯದಲ್ಲಿ ಇದೆ. ಆದೇಶ ಬಂದ ಬಳಿಕ ನಮ್ಮ ಹಿರಿಯ ಅಧಿಕಾರಿಗಳು ಯಾವ ತೀರ್ಮಾನಕ್ಕೆ ಬರುತ್ತಾರೆ ಗೊತ್ತಿಲ್ಲ, ಸದ್ಯಕ್ಕೆ ಪದವು ಗ್ರಾಮ ಬಿಟ್ಟು ಬೇರೆ ಕಡೆಗಳಲ್ಲಿ ಕಾಮಗಾರಿ ಮುಂದುವರಿಯುತ್ತದೆ.
-ಅಬ್ದುಲ್ಲಾ ಜಾವೇದ್‌ ಆಜ್ಮಿ,
ಯೋಜನ ನಿರ್ದೇಶಕ, ಎನ್‌ ಎಚ್‌ಎಐ

*ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next