ಸುವ ಅಪಾಯ ಹೆಚ್ಚು. ಒಂದಷ್ಟು ಹೆಚ್ಚುವರಿ ಎಚ್ಚ ರಿಕೆ ವಹಿಸಿದರೆ ಮಳೆಯ ಲ್ಲಿಯೂ ಸುರಕ್ಷಿತ ಸಂಚಾರ ಸಾಧ್ಯ. ಅದಕ್ಕೆ ಕೆಲವು ಸಲಹೆಗಳು ಇಲ್ಲಿವೆ.
Advertisement
*ರಸ್ತೆಯಲ್ಲಿ ಗುಂಡಿಗಳಿದ್ದರೆ ಅವುಗಳು ನೀರು ತುಂಬಿ ಕಾಣಿಸುವುದಿಲ್ಲ. ನಿಧಾನವಾಗಿ ಜಾಗರೂಕತೆಯಿಂದ ವಾಹನಚಾಲನೆ ಮಾಡಬೇಕು. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ತುಂಬಾ ಎಚ್ಚರವಾಗಿರಬೇಕು.
Related Articles
ವಾಹನ ಚಲಾಯಿಸುವ ಸಾಧ್ಯತೆ ಹೆಚ್ಚು. ಈ ಬಗ್ಗೆ ದ್ವಿಚಕ್ರ ವಾಹನ ಚಾಲಕರು, ಇತರ ವಾಹನ ಚಾಲಕರು ಜಾಗರೂಕತೆ ವಹಿಸಬೇಕು.
Advertisement
*ರಸ್ತೆ ಮೇಲೆ ಮಳೆ ನೀರು ಬಿದ್ದರೆ ರಸ್ತೆ ಯಲ್ಲಿರಬಹುದಾದ ಎಣ್ಣೆಯ ಅಂಶಗಳು ಹರಡಿ ದ್ವಿಚಕ್ರ ವಾಹನ ಗಳು ಸ್ಕಿಡ್ ಆಗುವ ಸಾಧ್ಯತೆ ಇರುತ್ತದೆ. ಅಂತಹ ಅಂಶಗಳು ಕಂಡ ಕೂಡಲೇ ವಾಹನ ನಿಧಾನಗೊಳಿಸುವುದೇ ಸುರಕ್ಷಿತ.
*ಮಳೆ ಬರುವಾಗ ಕೊಡೆ ತರದೆ ರಸ್ತೆ ದಾಟುವವರು, ಮಳೆಯಿಂದ ಎಲ್ಲಿಯಾದರೂ ರಕ್ಷಣೆ ಪಡೆದುಕೊಳ್ಳಲು ರಭಸದಿಂದ ಹೆಜ್ಜೆ ಹಾಕುವವರು ಹೆಚ್ಚು. ಪಾದಚಾರಿಗಳು ಮತ್ತು ವಾಹನ ಚಾಲಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು.
*ಸಾಮಾನ್ಯವಾಗಿ ಮಳೆಗಾಲ ಸಂಚಾರ ನಿರ್ವಹಣೆ ಪೊಲೀಸರಿಗೂ ಸವಾಲು. ಮಳೆಯ ನಡುವೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವುದು ಅಸಾಧ್ಯ. ಹಾಗಾಗಿ ಕೆಲವು ವಾಹನಗಳು ಎಲ್ಲೆಂದರಲ್ಲಿ ನುಗ್ಗುವ ಅಪಾಯವಿರುತ್ತದೆ.
*ದ್ವಿಚಕ್ರ ವಾಹನ ಸವಾರರು ರೈನ್ ಕೋಟ್, ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸುವುದು ಸುರಕ್ಷಿತ. ರೈನ್‌ಕೋಟ್ ತಂದಿಲ್ಲ, ಮಳೆ ಬರುವ ಸಾಧ್ಯತೆ ಇದೆ ಎಂಬ ಆತಂಕದಿಂದ ನಿಯಂತ್ರಣ ಕಳೆದುಕೊಂಡು ಅತೀವೇಗ ದಿಂದ ವಾಹನ ಚಲಾಯಿಸುವುದು ಅಪಾಯಕಾರಿ.
*ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಮರದ ಕೆಳಗೆ ಅಥವಾ ರಸ್ತೆಬದಿಯ ಕಟ್ಟಡದ ಕೆಳಗೆ ವಾಹನ ನಿಲ್ಲಿಸಿ ಅದರಲ್ಲಿ ಕುಳಿತುಕೊಳ್ಳುವುದು ಅಪಾಯಕಾರಿ.
*ಮಳೆಗಾಲವೆಂಬ ಕಾರಣಕ್ಕಾದರೂ ವಾಹನಗಳ ಫಿಟ್ ನೆಸ್ ತಪಾಸಣೆ ಮಾಡಿಸಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.
*ರಸ್ತೆಯ ಮೇಲೆ ಕೆಸರು ನೀರು ಶೇಖರಣೆಯಾಗಿ ಸ್ಕಿಡ್ ಆಗುವ ಸಾಧ್ಯತೆ ಇರುತ್ತದೆ.