Advertisement

Mangaluru: ಫ್ಲ್ಯಾಟ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ ನಿರ್ವಹಣ ವೆಚ್ಚ: ನ್ಯಾಯಾಲಯ ಆದೇಶ

08:45 PM Sep 03, 2024 | Team Udayavani |

ಮಂಗಳೂರು: ಬಹುಮಹಡಿ ಕಟ್ಟಡಗಳ ಫ್ಲ್ಯಾಟ್‌ಗಳಿಗೆ ಅವುಗಳ ವಿಸ್ತೀರ್ಣಕ್ಕೆ ತಕ್ಕಂತೆ ಮಾಸಿಕ ನಿರ್ವಹಣ ವೆಚ್ಚ ವಸೂಲಿ ಮಾಡಬೇಕು ಎಂದು ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಆದೇಶ ನೀಡಿದೆ.

Advertisement

ಮಂಗಳೂರು ನಗರದ ಕೊಟ್ಟಾರದ ಬಳಿ ಇರುವ ಬಹುಮಹಡಿ ಕಟ್ಟಡವೊಂದರದಲ್ಲಿ 2018ರಿಂದ 2021ರ ವರೆಗೆ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಕಟ್ಟಡ ಮಾಲಕರು ತಮ್ಮ ಫ್ಲ್ಯಾಟಿನ ವಿಸ್ತೀರ್ಣಕ್ಕೆ ಅನುಸಾರವಾಗಿ ಮತ್ತು ಅವಿಭಜಿತ ಹಕ್ಕಿಗನುಗುಣವಾಗಿ ಮಾಸಿಕ ನಿರ್ವಹಣ ವೆಚ್ಚ ಪಾವತಿಸುತ್ತಿದ್ದರು. ಆದರೆ 2021ರಲ್ಲಿ ಕಟ್ಟಡದ ಅಸೋಸಿಯೇಷನ್‌ ಎಲ್ಲ ಫ್ಲ್ಯಾಟ್‌ ಮಾಲಕರು ಏಕರೂಪದ ಮಾಸಿಕ ನಿರ್ವಹಣ ವೆಚ್ಚ ಕೊಡಬೇಕಾಗಿ ನಿರ್ಣಯವನ್ನು ತೆಗೆದುಕೊಂಡಿತ್ತು. ಈ ನಿರ್ಣಯದ ವಿರುದ್ಧ ಒಂದು ಫ್ಲ್ಯಾಟ್‌ನ ಮಾಲಕ ಚಂದ್ರಹಾಸ ಅಮೀನ್‌ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ವಾದಿ ಮತ್ತು ಪ್ರತಿವಾದಿಗಳು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಸಾಕ್ಷಿ ವಿಚಾರಣೆಯನ್ನು ಪರಿಗಣಿಸಿ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ 1972ನೇ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಆ್ಯಕ್ಟ್ ಪ್ರಕಾರ ಮಾಲಕರು ತಮ್ಮ ಫ್ಲ್ಯಾಟ್‌ನ ವಿಸ್ತೀರ್ಣ ಅಥವಾ ಶೇಕಡಾವಾರು ಅವಿಭಜಿತ ಹಕ್ಕುಗಳ ಸಾರವಾಗಿ ಮಾಸಿಕ ನಿರ್ವಹಣ ವೆಚ್ಚ ಪಾವತಿಸಲು ಬದ್ಧರು ಎಂದು ಆ. 21ರಂದು ಆದೇಶ ನೀಡಿದೆ. ಅಲ್ಲದೆ ಎಲ್ಲ ಫ್ಲ್ಯಾಟ್‌ಗಳ ಮಾಲಕರು ಏಕರೂಪದ ವಂತಿಗೆಯನ್ನು ನೀಡಬೇಕೆಂದು ಅಸೋಸಿಯೇಷನ್‌ ಮಾಡಿದ ನಿರ್ಣಯವನ್ನು ನ್ಯಾಯಾಲಯ ವಜಾಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next