Advertisement
2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವ ಘೋಷಣೆ ಮಾಡಲಾಗಿತ್ತು. ಅದರಂತೆ ಅಮೃತ್ ಭಾರತ್ ಸ್ಟೇಶನ್ ಸ್ಕೀಂನಡಿ ಮಂಗಳೂರು ಜಂಕ್ಷನ್ 19.32 ಕೋ.ರೂ., ಬಂಟ್ವಾಳ ರೈಲು ನಿಲ್ದಾಣ 26.18 ಕೋ.ರೂ. ಮತ್ತು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ 23.73 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಯಾಗಲಿದೆ. ವರ್ಷದೊಳಗೆ ಈ ಮೂರು ನಿಲ್ದಾಣಗಳು ಸಂಪೂರ್ಣ ಹೊಸ ಸ್ವರೂಪ ಪಡೆಯಲಿವೆ.
ರೈಲು ನಿಲ್ದಾಣದ ಆದಾಯ, ನಿಲ್ದಾಣವನ್ನು ಬಳಸುತ್ತಿರುವ ಪ್ರಯಾಣಿಕರ ಸಂಖ್ಯೆ, ನಿಲ್ದಾಣ ವ್ಯಾಪ್ತಿಯ ಧಾರ್ಮಿಕ ಸ್ಥಳಗಳು, ಪ್ರವಾಸೋದ್ಯಮ ಮೊದಲಾದ ವಿಷಯ ಮತ್ತು ಬೆಳವಣಿಗೆಯನ್ನು ಗಮನಿಸಿ, ಅಭಿವೃದ್ಧಿಗೆ ಇರುವ ಅವಕಾಶಗಳನ್ನು ಆಧರಿಸಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ನಿಲ್ದಾಣವನ್ನು ಕೇವಲ ಪ್ರಯಾಣಿಕರ ಆಗಮನ- ನಿರ್ಗಮನಕ್ಕೆ ಸೀಮಿತವಾಗಿರಿಸದೆ ನಗರವನ್ನು ಕೇಂದ್ರೀಕರಿಸಿ ಹೆಚ್ಚಿನ ಸೌಲಭ್ಯಗಳನ್ನು ನಿಲ್ದಾಣದಲ್ಲಿ ಒದಗಿಸಿ ಅಭಿವೃದ್ಧಿ ಪಡಿಸುವುದು ಯೋಜನೆಯ ಉದ್ದೇಶ. ಸ್ವಾತಂತ್ರÂದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರೈಲ್ವೇ ಸಚಿವಾಲಯದ ವತಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 508 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸುವ “ಅಮೃತ್ ಭಾರತ್ ನಿಲ್ದಾಣ ಯೋಜನೆ’ (ಎಬಿಎಸ್‌ಎಸ್)ಗೆ ಚಾಲನೆ ನೀಡಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ಈ ಎಲ್ಲ ರೈಲು ನಿಲ್ದಾಣಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಏನೆಲ್ಲ ಅಭಿವೃದ್ಧಿ ?
ಪ್ರಸ್ತುತ ಇರುವ ರೈಲು ನಿಲ್ದಾಣದ ಕಟ್ಟಡವನ್ನು ಹಾಗೇ ಉಳಿಸಿಕೊಂಡು ಪಾರಂಪರಿಕ ಶೈಲಿಯ ಸ್ಪರ್ಶದೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತದೆ. ಪ್ರವೇಶದ್ವಾರ, ಗ್ರಾನೈಟ್ ಫ್ಲೋರಿಂಗ್, ಸುತ್ತಲಿನ ಪ್ರದೇಶದ ಅಭಿವೃದ್ಧಿಯ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ, ಬಸ್ ಬೇ ನಿರ್ಮಾಣ, ದ್ವಿಚಕ್ರ ಹಾಗೂ ಚತುಷcಕ್ರ ವಾಹನಗಳಿಗೆ ಪಾರ್ಕಿಂಗ್, ಹೊಸ ಪಾರ್ಸೆಲ್ ಕಚೇರಿ ಮತ್ತು ಎಸಿ ವೇಟಿಂಗ್ ಹಾಲ್, ಎಸ್ಕಲೇಟರ್, ವೈಫೈ ವ್ಯವಸ್ಥೆ ಇತ್ಯಾದಿ ನಿರ್ಮಾಣವಾಗಲಿವೆ.
Related Articles
– ನಳಿನ್ ಕುಮಾರ್ ಕಟೀಲು,ಸಂಸದ
Advertisement