Advertisement

Mangaluru Airport; 9.92 ಲಕ್ಷ ರೂ. ಮೌಲ್ಯದ ಇ-ಸಿಗರೇಟ್‌ ಬಿಡಿಭಾಗ ಸಾಗಾಟ ಯತ್ನ

09:54 PM Mar 02, 2024 | Team Udayavani |

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ದುಬಾೖಯಿಂದ ಆಗಮಿಸಿದ ಪ್ರಯಾಣಿಕನನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಆತನಲ್ಲಿ 9,92,940 ರೂ. ಮೌಲ್ಯದ ಇ ಸಿಗರೇಟ್‌ಗೆ ಸಂಬಂಧಿಸಿದ ವಿವಿಧ ವಸ್ತುಗಳು ಪತ್ತೆಯಾಗಿವೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಮೂಲದ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. ತಪಾಸಣೆ ವೇಳೆ ಆತನ ಬ್ಯಾಗ್‌ನಲ್ಲಿ 240 ಪ್ಯಾಕೆಟ್‌ ನ್ಯಾಚುರಲ್‌ ಅಮೆರಿಕನ್‌ ಸ್ಪಿರಿಟ್‌, 20 ಪ್ಯಾಕೆಟ್‌ ಕ್ಯಾಲಿಬರ್ನ್ ಪಿಒಡಿ ಕಾಟ್ರಿಡ್ಜ್, 20 ಪ್ಯಾಕೆಟ್‌ ಕ್ಯಾಲಿಬರ್ನ್ ಎ2 ರಿಲೈಯೆಬಲ್‌ ಪಿಒಡಿ, 20 ಪ್ಯಾಕೆಟ್‌ ಕ್ಯಾಲಿಬರ್ನ್ ಎ2 ಸೈಡ್‌ ರಿಫಿಲ್ಲಿಂಗ್‌ ಪಿಒಡಿ ಮತ್ತು 20 ಪ್ಯಾಕೆಟ್‌ ಕ್ಯಾಲಿಬರ್ನ್ ಜಿ3 ರಿಫಿಲ್ಲೆಬಲ್‌ ಪಿಒಡಿ ಪತ್ತೆಯಾಗಿದೆ. ಇವೆಲ್ಲ ಇ-ಸಿಗರೇಟ್‌ನ ವಿವಿಧ ಬಿಡಿ ಭಾಗಳಾಗಿವೆ. ಕಸ್ಟಮ್ಸ್‌ ಅಧಿಕಾರಿಗಳು ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next