Advertisement

Mangaluru ವಿಮಾನ ನಿಲ್ದಾಣ: ಡಿಸೆಂಬರ್‌ನಲ್ಲಿ 2.03 ಲಕ್ಷ ಪ್ರಯಾಣಿಕರು

12:39 AM Jan 02, 2024 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ನಿರ್ವಹಣೆಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಡಿಸೆಂಬರ್‌ನಲ್ಲಿ ದಾಖಲೆಯ 2.03 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಲಾಗಿದೆ.

Advertisement

ಡಿ. 31ರಂದು ಒಂದೇ ದಿನ ದಾಖಲೆಯ 7,548 ಪ್ರಯಾಣಿಕರನ್ನು ನಿರ್ವಹಿಸಿದೆ. ಇದು ಈ ಹಿಂದಿನ ನ. 25ರ ದಾಖಲೆಯನ್ನು (7,468) ಹಿಂದಿಕ್ಕಿದೆ. ಡಿ. 31ರ 7,548 ಪ್ರಯಾಣಿಕರೂ ಸೇರಿದಂತೆ ವಿಮಾನ ನಿಲ್ದಾಣ ಡಿಸೆಂಬರ್‌ನಲ್ಲಿ 12 ದಿನಗಳ ಕಾಲ 7,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಲಾಗಿದೆ.

ಡಿ. 9-10, 16-17, 23-25 ಮತ್ತು 30-31ರ ವಾರಾಂತ್ಯದಲ್ಲಿ ಅತೀ ಹೆಚ್ಚಿನ ಪ್ರಯಾಣಿಕರು ನಿಲ್ದಾಣಕ್ಕೆ ಬಂದಿಳಿದಿದ್ದು ಮಾತ್ರವಲ್ಲದೆ ನಿಲ್ದಾಣದಿಂದ ಇತರೆಡೆಗೆ ಪ್ರಯಾಣಿಸಿದ್ದಾರೆ. ಕ್ರಿಸ್ಮಸ್‌ ಹಿಂದಿನ 3 ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕ್ರಮವಾಗಿ 7,089, 7,220 ಮತ್ತು 7,034 ಪ್ರಯಾಣಿಕರ ನಿರ್ವಹಣೆ ಮಾಡಲಾಗಿದೆ.
2020ರ ಅ. 31ರ ಕಮರ್ಷಿಯಲ್‌ ಆಪರೇಷನ್‌ ಡೇಟ್‌ (ಸಿಒಡಿ) ಅನಂತರ 2023ರ ನವೆಂಬರ್‌ನಲ್ಲಿ 1.78 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿತ್ತು.

ಚಳಿಗಾಲದ ವೇಳಾಪಟ್ಟಿ ಜಾರಿ ಯಾದ ಅ. 29ರಿಂದ ಏರ್‌ ಟ್ರಾಫಿಕ್‌ ಮೂವ್‌ಮೆಂಟ್‌ (ಎಟಿಎಂ)ನಲ್ಲಿ ಸಾಮಾನ್ಯ ಹೆಚ್ಚಳ ಗಮನಿಸಲಾಗಿದೆ. ಡಿಸೆಂಬರ್‌ನಲ್ಲಿ 1,388 ಎಟಿಎಂಗಳು ದಾಖಲಾಗಿದ್ದು, ಇದರಲ್ಲಿ 1,096 ದೇಶೀಯ ಚಲನೆಗಳು ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next