Advertisement
ಮುಂಬೈ ಮತ್ತು ಮಂಗಳೂರಿನ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್‌ಗಳ ಚೇರ್‌ವೆುನ್ ಮತ್ತು ಆಡಳಿತ ನಿರ್ದೇಶಕ ರವಿ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿ, ಗ್ರಾಹಕರ ಕನಸಿಗೆ ಅನುಗುಣವಾಗಿ ಗುಣಮಟ್ಟದ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಲ್ಲಿ ಹೆಸರು ಮಾಡಿರುವ ಭಾರ್ಗವಿ ಬಿಲ್ಡರ್ಸ್‌ನಿಂದ ನಿರ್ಮಾಣವಾಗಿರುವ ಕೈಲಾಶ್ ಪ್ರಾಜೆಕ್ಟ್‌ನಲ್ಲಿ ಗುಣನಾಥನ ಫ್ಲ್ಯಾಟ್ ಅತ್ಯಂತ ಆಕರ್ಷಕವಾಗಿ ಮೂಡಿಬಂದಿದೆ ಎಂದರು.
Related Articles
Advertisement
ಅರವಿಂದ ಬೋಳಾರ್ ವಿಶೇಷ ಆಕರ್ಷಣೆಕೈಲಾಶ್ ಪ್ರಾಜೆಕ್ಟ್‌ನ ವಿಶೇಷ ಆಕರ್ಷಣೆ ಗುಣನಾಥ ತನ್ನ ಪತ್ನಿ ಶಿಲ್ಪ ಗುಣನಾಥ ಅವರ ಜತೆ ಹೊಸ ಫ್ಲ್ಯಾಟ್‌ಗೆ ಗೃಹಪ್ರವೇಶಗೈದರು. ಬಳಿಕ ಮಾತನಾಡಿದ ಗುಣನಾಥ (ಚಲನಚಿತ್ರ ನಟ ಅರವಿಂದ ಬೋಳಾರ್) ಕೈಲಾಶ್‌ನ ಫ್ಲ್ಯಾಟ್ ಹೊಂದುವ ಎಲ್ಲರಿಗೂ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಮೂಡಿದ ಆಲೋಚನೆಯಂತೆ, ದುಬೈನಿಂದ ಹಿಂತಿರುಗಿದ ಗುಣನಾಥನಿಗೆ ಅಲ್ಲಿನ ಜೀವನಶೈಲಿಗೆ ಪೂರಕವಾದ ಮನೆಯೊಂದನ್ನು ಒದಗಿಸುವುದು ಈ ಕೈಲಾಶ್ ಪ್ರಾಜೆಕ್ಟ್‌ನ ಪರಿಕಲ್ಪನೆ. ಕೈಲಾಶ್ ಪ್ರಾಜೆಕ್ಟ್ 131 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಗ್ರಾಹಕರ ಅನಿಸಿಕೆ, ಅಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡು ಅವರ ಬೇಡಿಕೆಗಳಿಗೆ ಅನುಗುಣವಾಗಿ ಫ್ಲ್ಯಾಟ್‌ಗಳಿಗೆ ರೂಪುರೇಷೆ ನೀಡಲಾಗುತ್ತಿದೆ ಎಂದು ಪಾಜೆಕ್ಟ್ ಮುಖ್ಯಸ್ಥರಾದ ಗುರುದತ್ ಶೆಣೈ ಅವರು ಹೇಳಿದರು. ಕೈಲಾಶ್ ಅಪಾರ್ಟ್‌ಮೆಂಟ್‌ನ ಅತ್ಯಾಧುನಿಕ ಸೌಲಭ್ಯಗಳು
* ರೂಫ್ಟಾಪ್‌ನಲ್ಲಿ ಇನ್‌ಫಿನಿಟಿ ಸ್ವಿಮ್ಮಿಂಗ್ ಪೂಲ್
*ಮಿನಿ ಥಿಯೇಟರ್
* ಏರ್ ಕಂಡಿಯಶನ್‌ಯುಕ್ತ ಜಿಮ್ನೇಶಿಯಂ
* ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಿಗೆ ವ್ಯವಸ್ಥೆ
*ಮಕ್ಕಳ ಆಟದ ಜಾಗ
* ಗ್ರಂಥಾಲಯ
* ಯೋಗ ಪೆವೆಲಿಯನ್
*ವಿಶಾಲವಾದ ಸಂದರ್ಶಕರ ಲಾಬಿ
* ಸೋಲಾರ್ ಪ್ಯಾನೆಲ್‌ಗಳು
* ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ
* ಮೂರು ಸ್ವಯಂಚಾಲಿತ ಎಲಿವೇಟರ್‌ಗಳು
* ಕಾರು ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ