Advertisement
ಮಾರಾಟ ಮಾಡುವ ಉದ್ದೇಶದಿಂದ ಅಬಕಾರಿ ಕಾಯಿದೆಗೆ ವಿರುದ್ಧವಾಗಿ ದಾಸ್ತಾನಿರಿಸಿದ್ದ ಅಂದಾಜು 64,500 ರೂ. ಮೌಲ್ಯದ 47.250 ಲೀ. ಮದ್ಯವನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆಯವರು ಮನೆಯ ಮೇಲೆ ದಾಳಿ ನಡೆಸಿ ಮದ್ಯವನ್ನು ವಶಪಡಿಸಿಕೊಂಡಿರುವ ಎರಡನೇ ಪ್ರಕರಣ ಇದಾಗಿದೆ. ಶನಿವಾರ ಮಧ್ಯರಾತ್ರಿ ಕೊಡಿಯಾಲಬೈಲ್ ಕಂಬಳಕ್ರಾಸ್ ಬಳಿಯ ಮನೆಯೊಂದಕ್ಕೆ ದಕ್ಷಿಣ ವಲಯ-1ರ ಅಬಕಾರಿ ಉಪನಿರೀಕ್ಷಕ ಹರೀಶ ಪಿ. ನೇತೃತ್ವದಲ್ಲಿ ದಾಳಿ ನಡೆಸಿ ಡಿಫೆನ್ಸ್ ಮದ್ಯ, ಗೋವಾ ಮದ್ಯ, ಬಿಯರ್ ವಶಪಡಿಸಿಕೊಳ್ಳಲಾಗಿತ್ತು.
ಮತ್ತೂಂದು ಪ್ರಕರಣದಲ್ಲಿ ರವಿವಾರ ಮಧ್ಯಾಹ್ನ ನಗರದ ವೆಲೆನ್ಸಿಯಾ ಬಳಿ ಶ್ಯಾಮಸುಂದರ ಅವರು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ 11.250 ಲೀ. ಡಿಫೆನ್ಸ್ ಮದ್ಯವನ್ನು ವಾಹನ ಸಹಿತ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಜಂಟಿ ಆಯುಕ್ತ ಡಾ| ಸಿ.ಎಚ್. ಬಾಲಕೃಷ್ಣ ಆದೇಶ ದ.ಕ. ಜಿಲ್ಲಾ ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ನಿರ್ದೇಶನದಂತೆ ದಕ್ಷಿಣ ವಲಯ-2ರ ಅಬಕಾರಿ ನಿರೀಕ್ಷಕಿ ಕಮಲಾ ಎಚ್.ಎನ್. ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಸಿಬಂದಿ ಸುನೀಲ್ ಬೈಂದೂರು, ಬಸವರಾಜ್ ತೋರೆ, ನವೀನ ನಾಯ್ಕ ಬಿ., ರಘುರಾಮ್ ಪಾಲ್ಗೊಂಡಿದ್ದರು.