ಮಂಗಳೂರು: ಸ್ವಾತಂತ್ರ್ಯ ಬಂದು 75 ವರ್ಷವಾದರೂ ಬ್ರಿಟೀಷರು ಬಿಟ್ಟು ಹೋದ ಒಡೆದು ಆಳುವ ನೀತಿ ಇನ್ನೂ ನಿಂತಿಲ್ಲ, ಮೆಕಾಲೆ ಪದ್ದತಿಗಳು ಈವಾಗಲೂ ಜೀವಂತವಾಗಿವೆ.
ಇದೆಲ್ಲವನ್ನು ಮೆಟ್ಟಿ ನಿಲ್ಲಲು ಹಿಂದೂ ಯುವ ಸೇನೆಯಂತಹ ಸಂಘಟನೆಗಳು ಸಮಾಜದ ಒಳಿತಿಗಾಗಿ ನಿಸ್ವಾರ್ಥವಾಗಿ ಶ್ರಮಿಸುತ್ತಿರುವುದು ಮಾದರಿ ಕಾರ್ಯ ಎಂದು ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎಸ್. ಗಣೇಶ್ ರಾವ್ ಅಭಿಪ್ರಾಯ ಪಟ್ಟರು.
ಹಿಂದೂ ಯುವ ಸೇನೆ ಆಶ್ರಯದಲ್ಲಿ ನಡೆಯುವ ಗಣೇಶೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿ, ಮಂಗಳೂರು ಗಣಪ ನಾಡಿಗೆ ಸುಭೀಕ್ಷೆ ತರಲಿ ಎಂದವರು ಆಶಿಸಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು.
ಅಭೀಷ್ ಬಿಲ್ಡರ್ಸ್‌ನ ಮಾಲಕ ಪುಷ್ಪರಾಜ್ ಜೈನ್ ಅತಿಥಿಯಾಗಿದ್ದರು. ಮಂಗಳೂರು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಬಿ. ಶಶಿಕಾಂತ್ ನಾಗ್ವೇಕರ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೌಟಪದವು, ಉಪಾಧ್ಯಕ್ಷರುಗಳಾದ ಉಮೇಶ್ ಪೈ, ನಾಗರಾಜ ಆಚಾರ್ಯ, ಕೊರಗಪ್ಪ ಶೆಟ್ಟಿ ಆಕಾಶಭವನ, ಸುಕುಮಾರ್ ಸುರತ್ಕಲ್, ವಸಂತ್ ಉರ್ವಸ್ಟೋರ್, ಲಕ್ಷ್ಮಣ್ ಜೋಗಿ ಮೂಡುಶೆಡ್ಡೆ, ಸೂರಜ್ ಅತ್ತಾವರ, ಉದ್ಯಮಿ ಜನಾರ್ದನ ಅರ್ಕುಳ, ಹಿಂದೂ ಯುವ ಸೇನಾ ಪ್ರಧಾನ ಕಾರ್ಯದರ್ಶಿ ಪದ್ಮನಾಭ ನಾವೂರು, ಜಿಲ್ಲಾಧ್ಯಕ್ಷ ವೀರಪ್ಪ ಮೂಡುಶೆಡ್ಡೆ, ಕಾರ್ಯದರ್ಶಿ ರವಿಚಂದ್ರ ಎಕ್ಕೂರು ಉಪಸ್ಥಿತರಿದ್ದರು.
ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ ಪ್ರಸ್ತಾವನೆಗೈದರು. ನ್ಯಾಯವಾದಿ ದಿನಕರ ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ಧರ್ಮೇಂದ್ರ ಎಂ.ಪಿ. ವಂದಿಸಿ, ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ ನಿರೂಪಿಸಿದರು.
ಮಂಗಳೂರು,ಗಣೇಶೋತ್ಸವ,