Advertisement
ಈ ರೂಟ್‌ನಲ್ಲಿ ಹೊಸ ಬಸ್ ಓಡಿಸಲು ಕೆಎಸ್ಸಾರ್ಟಿಸಿ ಇಂಗಿತ ವ್ಯಕ್ತಪಡಿಸಿದೆ. ಆದರೆ ಪರವಾನಿಗೆಗೆ ಸಿಗಬೇಕಾದರೆ ಈ ಕುರಿತು (ಆರ್‌ಟಿಎ)ಯಲ್ಲಿ ನಿರ್ಧಾರ ಆಗಬೇಕು. ಆದರೆ ಮಂಗಳೂರಿನಲ್ಲಿ ಕಳೆದ ಒಂದು ವರ್ಷದಿಂದ ಆರ್‌ಟಿಎ ಸಭೆ ನಡೆದಿಲ್ಲ. ಇದರಿಂದಾಗಿ ಹೊಸ ಪರ್ಮಿಟ್ ನೀಡಲು ಇನ್ನೂ ಸಾಧ್ಯವಾಗಿಲ್ಲ.
ಮಂಗಳೂರು-ಮೂಡುಬಿದಿರೆ-ಕಾರ್ಕಳ ನಡುವಣ ಬಸ್ ಸಂಚಾರಕ್ಕೆ ಸಂಬಂಧಿಸಿದ ಪರವಾನಿಗೆ ನೀಡಲು ಆರ್‌ಟಿಎ ಸಭೆಯಲ್ಲಿ ನಿರ್ಧರಿಸಬೇಕು. ಆರ್‌ಟಿಎ ಸಭೆಗೆ ಈಗಾಗಲೇ ದಿನ ನಿಗದಿ ಮಾಡಿದರೂ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಗೆ ಮುಂದೂಡಲಾಗಿದೆ. ಪರವಾನಿಗೆ ಕುರಿತು ಅಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.
-ಶ್ರೀಧರ್ ಮಲ್ಲಾಡ್, ಮಂಗಳೂರು ಆರ್‌ಟಿ
Related Articles
ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಾರ್ಗವಾಗಿ 8 ಬಸ್ 56 ಟ್ರಿಪ್ ಕಾರ್ಯಾಚರಣೆಗೆ ನ್ಯಾಯಾಲಯದಿಂದ ಅನುಮತಿ ದೊರಕಿದೆ. ಆದರೆ, ಆರ್‌ಟಿಎ ಸಭೆಯಲ್ಲಿ ಪರವಾನಿಗೆ ಸಿಗಬೇಕು. ಪರವಾನಿಗೆ ದೊರಕಿದ ಕೂಡಲೇ ಬಸ್ ಓಡಿಸಲು ಕೆಎಸ್ಸಾರ್ಟಿಸಿ ತಯಾರಿದೆ. ಈ ರೂಟ್‌ಗಳಲ್ಲಿ ಹೊಸ ಬಸ್ ಓಡಿಸಲು ನಿರ್ಧರಿಸಿದ್ದೇವೆ.
-ರಾಜೇಶ್ ಶೆಟ್ಟಿ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
Advertisement
ವರ್ಷದಿಂದ ನಡೆಯದ ಆರ್‌ಟಿಎ ಸಭೆವಾಹನಗಳಿಗೆ ಹೊಸ ಪರವಾನಿಗೆ, ರೂಟ್, ಸಮಯ ಬದಲಾವಣೆ ಸಹಿತ ವಿವಿಧ ಬೇಡಿಕೆ ಇತ್ಯರ್ಥಕ್ಕೆ ಸಾಮಾನ್ಯವಾಗಿ ಕಾಲಕಾಲಕ್ಕೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ ನಡೆಯುತ್ತದೆ. ಆದರೆ ಮಂಗಳೂರಿನಲ್ಲಿ ಕಳೆದ ಒಂದು ವರ್ಷದಿಂದ ಆರ್‌ಟಿಎ ಸಭೆ ನಡೆದಿಲ್ಲ. ಅದರಲ್ಲೂ ಬಸ್ ಪರವಾನಿಗೆಗೆ ಸಂಬಂಧಿಸಿ ಕೊನೆಯ ಸಭೆ ನಡೆದಿದ್ದು, 2022ರ ಜನವರಿ ತಿಂಗಳಿನಲ್ಲಿ. ಸಭೆ ನಡೆಸಲು ಹಲವು ತಿಂಗಳಿನಿಂದ ಒತ್ತಡ ಇದ್ದರೂ ಕೆಲವು ಬಾರಿ ಸಭೆ ನಿಗದಿಗೊಂಡು ಮೊಟಕುಗೊಂಡಿತ್ತು. ಇದೀಗ ಸೆ. 26ರಂದು ಸಭೆಗೆ ನಿರ್ಧರಿಸಲಾಗಿತ್ತು. ಆದರೆ ಸದ್ಯ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಕಾರಣ, ಆರ್‌ಟಿಎ ಸಭೆಯಲ್ಲಿ ಮತ್ತೆ ಒಂದು ತಿಂಗಳ ಮಟ್ಟಿಗೆ ಮುಂದೂಡಲಾಗಿದೆ.