Advertisement

ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ 1.25 ಕೋ.ರೂ. ವಂಚನೆ

12:43 AM Dec 15, 2022 | Team Udayavani |

ಮಂಗಳೂರು : ನಕಲಿ ದಾಖಲೆಗಳನ್ನು ಸೃಷ್ಟಿಸಿ 1 ಕೋ.ರೂ. ಮೌಲ್ಯದ ಚಿನ್ನಾಭರಣ ಹಾಗೂ 25 ಲ.ರೂ. ಗೃಹ ಸಾಲ ಪಡೆದು ವಂಚಿಸಿರುವ ಬಗ್ಗೆ ನಗರದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ರೀಟಾ ಪೇರಿಸ್‌ ದೂರು ನೀಡಿದವರಾಗಿದ್ದು ಅವರ ಪುತ್ರಿ ನಿಖೀತಾ ಪೇರಿಸ್‌ ಮತ್ತು ಗೋಡ್ವಿನ್‌ ಫೆರ್ನಾಂಡಿಸ್‌ ಆರೋಪಿಗಳಾಗಿದ್ದಾರೆ.

ರೀಟಾ ಪೇರಿಸ್‌ ಮತ್ತು ಅವರ ಪುತ್ರ ಅಮಿತ್‌ ಪೇರಿಸ್‌ ವಿದೇಶದಲ್ಲಿದ್ದು ರೀಟಾ ಪೇರಿಸ್‌ ಅವರ ಪುತ್ರಿ ನಿಕಿತಾ ಪೇರಿಸ್‌ ಮುದರಂಗಡಿಯ ಗೋಡ್ವಿನ್‌ ಫೆರ್ನಾಂಡಿಸ್‌ನ ಜತೆ ಸೇರಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ನಕಲಿ ಜಿಪಿಎ ಸೃಷ್ಟಿ
ಉಡುಪಿಯ ವಕೀಲರಿಂದ ನಕಲಿ ಜಿಪಿಎ ತಯಾರಿಸಲಾಗಿದೆ. ರೀಟಾ ಪೇರಿಸ್‌ ಮತ್ತು ಅಮಿತ್‌ ಪೇರಿಸ್‌ ಅವರ ನಕಲಿ ಸಹಿ ಮಾಡಿ ಬ್ಯಾಂಕ್‌ ಮ್ಯಾನೇಜರ್‌ಗೆ ದಾಖಲಾತಿ ನೀಡಿ ಫ್ಲ್ಯಾಟಿನ ಮೇಲೆ 25 ಲ.ರೂ. ಗೃಹಸಾಲ ಪಡೆದಿದ್ದಾರೆ. ಅನಂತರ ನಕಲಿ ಸಹಿ ಮಾಡಿದ ದಾಖಲೆಯನ್ನು ನೀಡಿ ವಾಮಂಜೂರಿನ ಬ್ಯಾಂಕ್‌ ಖಾತೆಯ ಲಾಕರ್‌ನಲ್ಲಿದ್ದ ರೀಟಾ ಪೇರಿಸ್‌ ಅವರಿಗೆ ಸೇರಿದ 1 ಕೋ.ರೂ. ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ ನಕಲಿ ಸಹಿ ಮಾಡಿ ರೀಟಾ ಪೇರಿಸ್‌ ಅವರ ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿ ವಂಚಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next