Advertisement

Mangaluru: ಒಣ ತ್ಯಾಜ್ಯ ಸಂಸ್ಕರಣೆ: ಡಿಪಿಆರ್‌ಗೆ ರಾಜ್ಯ ಸರಕಾರದ ತಾಂತ್ರಿಕ ಅನುಮೋದನೆ

12:50 PM Sep 10, 2024 | Team Udayavani |

ಮಹಾನಗರ: ಮಂಗಳೂರು ಮಹಾಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ವಿಲೇವಾರಿ ಮಾಡಲು ಮೆಟೀರಿಯಲ್‌ ರಿಕವರಿ ಫೆಸಿಲಿಟಿ (ಎಂಆರ್‌ಎಫ್‌) ಘಟಕವನ್ನು ಸ್ಥಾಪಿ ಸುವ ನಿಟ್ಟಿನಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯಿಂದ ಕಳುಹಿಸಲಾಗಿದ್ದ ವಿಸ್ತೃತ ಯೋಜನ ವರದಿಗೆ ರಾಜ್ಯ ಸರಕಾರದಿಂದ ತಾಂತ್ರಿಕ ಅನುಮೋದನೆ ಲಭಿಸಿದೆ. ಮುಂದಿನ ಹಂತವಾಗಿ ಶೀಘ್ರ ಟೆಂಡರ್‌ ನಡೆದು ಘಟಕ ನಿರ್ಮಾಣ ವಾಗುವ ನಿರೀಕ್ಷೆಯಿದೆ.

Advertisement

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 60 ವಾರ್ಡ್‌ಗಳಲ್ಲಿ ಪ್ರತಿ ದಿನ 330 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ 300 ಟನ್‌ನಷ್ಟು ಹಸಿಕಸ ನಿತ್ಯ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ಗೆ ರವಾನೆಯಾಗುತ್ತಿದೆ. ಶೇ.70ರಷ್ಟು ಹಸಿ ಕಸ -ಒಣ ಕಸ ನಗರದಲ್ಲಿ ಪ್ರತ್ಯೇಕಿಸಲಾಗುತ್ತಿದ್ದು, ವಾರದಲ್ಲಿ ಒಂದು ದಿನ ಒಣ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಪ್ರಸ್ತುತ ನಗರದಲ್ಲಿ ಜಾರಿಯಲ್ಲಿದೆ. ಪಚ್ಚನಾಡಿಯಲ್ಲಿ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದ್ದು, ಒಣ ತ್ಯಾಜ್ಯವನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆಯಾದರೂ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಆದ್ದರಿಂದ ವೈಜ್ಞಾನಿಕ ವಿಧಾನದ ಮೂಲಕ ವಿಲೇವಾರಿಗೆ ಪಚ್ಚನಾಡಿ ಸುಸಜ್ಜಿತ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ.

11.04 ಕೋ. ರೂ. ಯೋಜನ ವೆಚ್ಚ
ದೇಶದಲ್ಲಿ ತಾಜ್ಯ ವಿಲೇವಾರಿ ಪ್ರಕ್ರಿಯೆ ದೊಡ್ಡ ಸಮಸ್ಯೆಯಾಗಿದ್ದು, ಘನ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಕ್ರಮ ವಹಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಸಮರ್ಪಕವಾಗಿ ನಿರ್ವಹಿಸದಿದ್ದರೆ ರಾಜ್ಯ ಸರಕಾರಗಳಿಗೆ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ. ಕೇಂದ್ರದ ಸೂಚನೆಯಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಎಂಆರ್‌ಎಫ್‌ ಘಟಕ ನಿರ್ಮಾಣ ವಾಗುತ್ತಿದೆ. ಮಂಗಳೂರಿನಲ್ಲಿ ಒಟ್ಟು 11.04 ಕೋ.ರೂ. ಯೋಜನ ಮೊತ್ತದಲ್ಲಿ ಘಟಕ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಪಾಲಿನ ಅನುದಾನ 5.10 ಕೋ.ರೂ. ಬಾಕಿ ಉಳಿದ 5.94 ಅನುದಾನವನ್ನು ಮಹಾ ನಗರ ಪಾಲಿಕೆ ಒದಗಿಸಬೇಕು. ಈ ಪಾಲನ್ನು 15ನೇ ಹಣಕಾಸು ಯೋಜ ನೆಯ ಅನುದಾನದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಇರುವ ಶೇ.30ರ ನಿಧಿಯಿಂದ ಹೊಂದಿಸಿಕೊಳ್ಳಲು ಅವಕಾಶವಿದೆ ಎನ್ನುತ್ತಾರೆ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು.

6 ತಿಂಗಳುಗಳಲ್ಲಿ ಘಟಕ ನಿರ್ಮಾಣ
ರಾಜ್ಯದ ಎಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಎಂಆರ್‌ಎಫ್‌ ಘಟಕಗಳ ನಿರ್ಮಾಣಕ್ಕೆ ನಿರ್ಮಾಣದಕ್ಕೆ ರಾಜ್ಯ ಸರಕಾರ ಸೂಚನೆ ನೀಡಿತ್ತು. ಅದರಂತೆ ಮಂಗಳೂರು ಮಹಾನಗರ ಪಾಲಿಕೆಯಿಂದ ಸಲ್ಲಿಸಲಾಗಿರುವ ಡಿಪಿಆರ್‌ಗೆ ರಾಜ್ಯದ ತಾಂತ್ರಿಕ ಸಮಿತಿಯಲ್ಲಿ ಅನುಮೋದನೆ ಲಭಿಸಿದೆ. ಟೆಂಡರ್‌ಗೆ ಕರೆಯಲು ಪೂರ್ವ ಮಂಜೂರಾತಿ ನೀಡಲಾಗಿದ್ದು, ದೊಡ್ಡ ಮೊತ್ತದ ಯೋಜನೆಯಾಗಿರುವುದರಿಂದ ರಾಜ್ಯ ಸರಕಾರದ ಮಟ್ಟದಲ್ಲಿ ಇದರ ಪ್ರಕ್ರಿಯೆ ನಡೆಯಬೇಕಾಗಿದೆ. ಸುಮಾರು 6 ತಿಂಗಳುಗಳಲ್ಲಿ ಘಟಕ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
-ಸುಧೀರ್‌ ಶೆಟ್ಟಿ ಕಣ್ಣೂರು ಮೇಯರ್‌ 109 ಟನ್‌ ಸಾಮರ್ಥ್ಯದ ಘಟಕ

ಪಚ್ಚನಾಡಿಯಲ್ಲಿ ನಿರ್ಮಾಣವಾಗಲಿರುವ ಎಂಆರ್‌ಎಫ್‌ ಘಟಕ ಪ್ರತಿದಿನ 109 ಟನ್‌ ತ್ಯಾಜ್ಯ ನಿರ್ವಹಣೆ ಸಾಮರ್ಥ್ಯ ಹೊಂದಿರಲಿದೆ. 11.04 ಕೋ.ರೂ. ವೆಚ್ಚದಲ್ಲಿ 8.55 ಕೋ.ರೂ. ಘಟಕದ ರಚನೆ, ಸಿವಿಲ್‌ ಕೆಲಸಗಳಿಗೆ ಮೀಸಲಿರಿಸಲಾಗಿದೆ. 2.49 ಕೋ.ರೂ. ಮೊತ್ತವನ್ನು ಘಟಕದಲ್ಲಿ ಕಾರ್ಯಾ ಚರಿಸುವ ವೇ ಬ್ರಿಡ್ಜ್, ಟ್ರೋಮೆಲ್‌ ಯಂತ್ರ, ಕನ್ವೇಯರ್‌, ಮ್ಯಾಗ್ನೆಟಿಕ್‌ ಸೆಪರೇಟರ್‌, ಏರ್‌ ಬ್ಲೋವರ್‌, ಅಟೋಮ್ಯಾಟಿಕ್‌ ಹೊರಿಝಾಂಟಲ್‌ ಬೈಲಿಂಗ್‌ ಮೆಷಿನ್‌, ಶ್ರೇಡ್ಡರ್‌, ಸ್ಟೋರೇಜ್‌ ಬಿನ್‌, ವೀಲ್‌ ಬ್ಯಾರೋ, ಬೇಲರ್‌ ಯಂತ್ರ, ಅಗ್ನಿ ಶಮನ ಯಂತ್ರಗಳು, ಎಲೆಕ್ಟ್ರಿಕಲ್‌ ಉಪಕರಣ, ಲೋಡರ್‌ ಹೊಂದಿರುವ ಟ್ರ್ಯಾಕ್ಟರ್ ಮೊದಲಾದ ಯಂತ್ರಗಳ ಖರೀದಿಗೆ ಮೀಸಲಿರಿಸಲಾಗಿದೆ.

Advertisement

-ಭರತ್‌ ಶೆಟ್ಟಿಗಾರ್‌

 

Advertisement

Udayavani is now on Telegram. Click here to join our channel and stay updated with the latest news.

Next