Advertisement

Mangaluru ಕ್ರೈಸ್ತ ಧರ್ಮಪ್ರಾಂತ; ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆ

11:33 PM Jan 07, 2024 | Team Udayavani |

ಮಂಗಳೂರು: ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ ರವಿವಾರ ಮಿಲಾಗ್ರಿಸ್‌ ಚರ್ಚ್‌ನಿಂದ ರೊಸಾರಿಯೊ ಕೆಥೆಡ್ರಲ್‌ವರೆಗೆ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Advertisement

ಕ್ರಿಸ್ತ ಜಯಂತಿ-2025ರ ಜುಬಿಲಿ ಪ್ರಯುಕ್ತ ಪೋಪ್‌ ಫ್ರಾನ್ಸಿಸ್‌ ಅವರು “2024’ನ್ನು “ಪ್ರಾರ್ಥನೆಯ ವರ್ಷ’ ಎಂದು ಘೋಷಿಸಿರುವುದರಿಂದ “ಪ್ರಾರ್ಥನೆ ಮೂಲಕ ದೇವರೊಡನೆ ಮತ್ತು ಪರರೊಡನೆ ಸಂಬಂಧ ಬೆಳೆಸೋಣ’ ಎಂಬ ಸಂದೇಶವನ್ನು ಈ ಸಂದರ್ಭ ನೀಡಲಾಯಿತು.

ಮೆರವಣಿಗೆಗೆ ಮುನ್ನ ಮಿಲಾಗ್ರಿಸ್‌ ಚರ್ಚ್‌ನಲ್ಲಿ ಮಂಗಳೂರಿನ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಸಾಮೂಹಿಕವಾಗಿ ಬಲಿಪೂಜೆ ಸಲ್ಲಿಸಿದರು. ಬಳಿಕ ಆಶೀರ್ವಚನ ನೀಡಿ, ದೇವರನ್ನು ಮೊದಲು ಪವಿತ್ರಗ್ರಂಥಗಳಲ್ಲಿ ಕಂಡುಕೊಳ್ಳೋಣ. ಅನಂತರ ನಮ್ಮ ಹಾಗೂ ಪರಸ್ಪರ ಹೃದಯಗಳಲ್ಲಿ ಆತನ ಸಾಮೀಪ್ಯವನ್ನು ಗುರುತಿಸೋಣ. ಪವಿತ್ರಗ್ರಂಥ ಬೈಬಲ್‌ ನಮ್ಮ ಕೈಯಲ್ಲಿರುವ ನಕ್ಷತ್ರ. ಆ ನಕ್ಷತ್ರವನ್ನು ನಮ್ಮದಾಗಿಸಿ ನಿತ್ಯ ಧ್ಯಾನಿಸಿದಲ್ಲಿ ಯೇಸುವಿನಲ್ಲಿ ಸೇರುವ ದಾರಿ ಗೋಚರಿಸುತ್ತದೆ ಎಂದರು.

ಮೆರವಣಿಗೆಯ ಜೊತೆ, ಪವಿತ್ರ ಪ್ರಸಾದವನ್ನು ಹೊತ್ತೂಯ್ದ ಅಲಂಕೃತ ವಾಹನ ಮಿಲಾಗ್ರಿಸ್‌ ಚರ್ಚ್‌ನಿಂದ ಪ್ರಾರಂಭವಾಗಿ ಹಂಪನಕಟ್ಟೆ, ಕ್ಲಾಕ್‌ ಟವರ್‌ ಸರ್ಕಲ್‌, ಎ.ಬಿ.ಶೆಟ್ಟಿ ಸರ್ಕಲ್‌ ಮತ್ತು ನೆಹರು ವೃತ್ತದ ಮೂಲಕ ಸಾಗಿ ರೊಸಾರಿಯೊ ಕೆಥೆಡ್ರಲ್‌ ಚರ್ಚ್‌ ಆವರಣದ‌ಲ್ಲಿ ಆರಾಧನೆಯೊಂದಿಗೆ ಸಮಾಪನಗೊಂಡಿತು.

ಪ್ರಾರ್ಥಿಸುವ ಕೈಗಳನ್ನು
ನೆರವಿಗೂ ಬಳಸೋಣ
ರೊಸಾರಿಯೋ ಮೈದಾನದಲ್ಲಿ ಕಾಸರಗೋಡಿನ ವರ್ಕಾಡಿ ಚರ್ಚ್‌ನ ಧರ್ಮಗುರು ವಂ| ಬಾಸಿಲ್‌ ವಾಸ್‌ ಪ್ರವಚನ ನೀಡಿದರು. ನಮ್ಮ ಪ್ರಾರ್ಥಿಸುವ ಕೈಗಳನ್ನು ಕೆಳಕ್ಕೆ ಬಿದ್ದವರನ್ನು ಮೇಲಕ್ಕೆತ್ತಲು, ಸಂಕಷ್ಟದಲ್ಲಿರುವವರಿಗೆ ಸಾಂತ್ವನ ನೀಡಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ವಿಸ್ತರಿಸದಿದ್ದರೆ ಅಂತಹ ಪ್ರಾರ್ಥನೆ ಫಲಹೀನವಾದುದು ಎಂದು ಹೇಳಿದರು.

Advertisement

ರೊಸಾರಿಯೊದಲ್ಲಿ ನಡೆದ ಆರಾಧನೆ ವಿಧಿಯನ್ನು ಕುಲಶೇಖರ ಚರ್ಚ್‌ನ ಧರ್ಮಗುರು ವಂ| ಕ್ಲಿಫರ್ಡ್‌ ಫೆನಾಂìಡಿಸ್‌ ಮತ್ತು ಲೂರ್ಡ್ಸ್‌ ಸೆಂಟ್ರಲ್‌ ಸ್ಕೂಲ್‌ನ ಪ್ರಾಂಶುಪಾಲ ವಂ| ರಾಬರ್ಟ್‌ ಡಿ’ಸೋಜಾ ನೆರವೇರಿಸಿದರು.
ಕೊನೆಯಲ್ಲಿ ಧರ್ಮಪ್ರಾಂತದ “ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ’ದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next