Advertisement

Mangaluru: ಅರುಣ್‌ ಉಳ್ಳಾಲ ವಿರುದ್ಧ ಪ್ರಕರಣ: ದಾಖಲು ಖಂಡನೀಯ

01:23 AM Oct 07, 2024 | Team Udayavani |

ಮಂಗಳೂರು: ಉಳ್ಳಾಲದಲ್ಲಿ ಅನೇಕ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿಯ ಜತೆಗೆ ಧರ್ಮ ಶಿಕ್ಷಣದ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಅರುಣ್‌ ಉಳ್ಳಾಲ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಆರೋಪಿಸಿದ್ದಾರೆ.

Advertisement

ನವದಂಪತಿಗಳ ಸಮಾವೇಶದಲ್ಲಿ ಹಿಂದೂ ವಿಚಾರ ಪದ್ಧತಿಗಳ ಮತ್ತು ಕೌಟುಂಬಿಕ ಸಂಗತಿಗಳ ಬಗ್ಗೆ ಬೋಧನೆ ಮಾಡುತ್ತ, ಹಿಂದೂ ಸಮಾಜದ ಮಕ್ಕಳು ಹಿಂದೂ ಸಂಸ್ಕೃತಿಯ ಸಂಸ್ಕಾರ ನೀಡುವ ಶಾಲೆಗಳಿಗೆ ಹೋದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನೆಪ ಮಾಡಿಕೊಂಡು ಅವರ ಮೇಲೆ ಕೇಸು ದಾಖಲಿಸಿರುವುದು, ಅವರು ಉಪನ್ಯಾಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯು ಕ್ರಮ ತೆಗೆದುಕೊಂಡಿರುವುದು ಖಂಡನೀಯವಾಗಿದೆ ಎಂದವರು ಹೇಳಿದರು.

ಹಿಂದೂ ಸಂಸ್ಕೃತಿ ಬಗ್ಗೆ ಮಾತನಾಡಿದ ಉಪನ್ಯಾಸಕರ ಮೇಲೆ ಕೇಸು ದಾಖಲು ಮಾಡುವ ಮೂಲಕ, ಸರಕಾರ ಕೂಡ ಸಮಾಜದಲ್ಲಿ ಅಶಾಂತಿ, ಅಸಮಾನತೆಗೆ ಪ್ರೋತ್ಸಾಹಿಸುವವರ ಪರವಾಗಿ ನಿಂತಿರುವುದು ಖಂಡನೀಯ. ತತ್‌ಕ್ಷಣವೇ ಕೇಸ್‌ ವಾಪಸ್‌ ತೆಗೆದುಕೊಂಡು ಸರಕಾರ ಕೂಡ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next