Advertisement

Mangaluru: ಮೀಸಲಾತಿ ವ್ಯವಸ್ಥೆ ಕುರಿತು ಅಮೆರಿಕದಲ್ಲಿ ರಾಹುಲ್ ಹೇಳಿಕೆಗೆ ಬಿಜೆಪಿ ಖಂಡನೆ

05:16 PM Sep 13, 2024 | Team Udayavani |

ಮಂಗಳೂರು: ‘ಸೂಕ್ತ ಸಂದರ್ಭದಲ್ಲಿ ದೇಶದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತೇವೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಮಾಡಿರುವ ಭಾಷಣ ಬಿಜೆಪಿ ಖಂಡಿಸುತ್ತದೆ. ರಾಹುಲ್ ಭಾರತಕ್ಕೆ ಬಂದ ತತ್‌ಕ್ಷಣ ದೇಶದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿರುವ ದಲಿತರ ಕ್ಷಮೆ ಯಾಚಿಸುವುದರೊಂದಿಗೆ ಮತ್ತೊಮ್ಮೆ ಇಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಪ್ರಮಾಣ ಮಾಡಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆ ಮನೆ ಆಗ್ರಹಿಸಿದ್ದಾರೆ.

Advertisement

ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಮೊದಲು ವಿದೇಶಗಳಲ್ಲಿ ಕುಳಿತು ಭಾರತದ ಆಡಳಿತ ವ್ಯವಸ್ಥೆ ಕುರಿತು ತಪ್ಪು ಕಲ್ಪನೆ ಮೂಡುವಂತೆ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಅವರು ಹಳೆ ಚಾಳಿ ಮತ್ತೆ ಮುಂದುವರಿಸಿದ್ದು, ಅಮೆರಿಕದಲ್ಲಿ ಕುಳಿತು ಭಾರತದ ಚುನಾವಣೆ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅವರ ತಪ್ಪು ನಡವಳಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು, ದೇಶ ವಿರೋಧಿ ಶಕ್ತಿ ಗಳ ಜತೆ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕ್ಷಣದಿಂದ ದೇಶವಿರೋಧಿ ಮತಾಂಧ ಶಕ್ತಿಗಳು ಬಾಲ ಬಿಚ್ಚಲು ಆರಂಭಿಸಿವೆ. ಸತತ ಎರಡನೇ ವರ್ಷ ನಾಗಮಂಗಲದಲ್ಲಿ ಗಣಪತಿ ವಿಜರ್ಸನೆ ಮೆರವಣೆಗೆ ವೇಳೆ ಮತಾಂಧ ಶಕ್ತಿಗಳು ಧಾಳಿ ಮಾಡಿದ್ದರೂ, ಗೃಹ ಸಚಿವರು ಅದೊಂದು ಸಣ್ಣ ಘಟನೆ ಎಂದು ಹೇಳಿದ್ದಾರೆ. ಇದರ ವಿರುದ್ಧ ಪ್ರತಿ ತಾಲೂಕಿನಲ್ಲಿ ಹಿಂದೂ ಸಂಘಟನೆಗಳ ಜತೆ ಸೇರಿ ಬಿಜೆಪಿ ಪ್ರತಿಭಟನೆ ಮಾಡಲಿದೆ ಎಂದರು.

ಇದನ್ನೂ ಓದಿ: Politics; ರಾಹುಲ್ ಸುಳ್ಳು ಮಾತಿನಿಂದ ಭಾರತ ವಿರೋಧಿಗಳಿಗೆ ಹೊಸ ಶಕ್ತಿ: ತೇಜಸ್ವಿ ಸೂರ್ಯ

Advertisement

Udayavani is now on Telegram. Click here to join our channel and stay updated with the latest news.

Next