Advertisement

Mangaluru: ಅಡಿಕೆ ವ್ಯಾಪಾರಿಗಳಿಗೆ 2 ಕೋ.ರೂ.ಗೂ ಅಧಿಕ ವಂಚನೆ

01:13 AM Jul 23, 2024 | Team Udayavani |

ಮಂಗಳೂರು: ಮಂಗಳೂರಿನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿರುವವರಿಂದ ಒಣ ಅಡಿಕೆ ಖರೀದಿ ಮಾಡಿದವರು 2 ಕೋ.ರೂ.ಗೂ ಅಧಿಕ ಹಣ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ರಾಹುಲ್‌ ಗುಪ್ತಾ ಅವರು ಕಪಿಲ್‌ ಮಟ್ಟಾನಿ ಎಂಬಾತನಿಗೆ ಮಾ. 29ರಂದು 61 ಚೀಲ ಅಡಿಕೆ ಮಾರಾಟ ಮಾಡಿದ್ದು, ಆತ ಅದರ ಹಣ ಪಾವತಿಸಿದ್ದ. ಅದೇ ನಂಬಿಕೆಯ ಮೇಲೆ ಮೇ 17ರಿಂದ ಜೂ. 10ರ ನಡುವೆ ಆತನಿಗೆ ಅಡಿಕೆ ಮಾರಾಟ ಮಾಡಿದ್ದರು. ಆದರೆ 85,47,139 ರೂ. ಬಾಕಿ ಇರಿಸಿಕೊಂಡಿದ್ದ. ಹಣದ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಹಾಕಿದ್ದಾನೆ.

ಕಪಿಲ್‌ ಮಟ್ಟಾನಿ ಮತ್ತು ಕಮಲ್‌ ಮಟ್ಟಾನಿ ಸೇರಿಕೊಂಡು ಅಮಿತ್‌ ಶರ್ಮ, ವಿನಯ್‌ ಶರ್ಮ, ಸಿದ್ಧಾರ್ಥ ಶರ್ಮ ಅವರಿಂದ ಮತ್ತು ಇತರರಿಂದ ಖರೀದಿಸಿದ ಒಣ ಅಡಿಕೆಯ ಒಟ್ಟು 1,34,71,854 ರೂ.ಗಳನ್ನು ಬಾಕಿ ಇರಿಸಿಕೊಂಡು ವಂಚಿಸಿದ್ದಾನೆ.
ಮತ್ತೂಂದು ಪ್ರಕರಣದಲ್ಲಿ ಹಬೀಬ್‌ ರಹಿಮಾನ್‌ ಕೆ. ಮತ್ತು ಸೂಫಿ ಇಬ್ರಾಹಿಂ ಅವರ ಕಂಪೆನಿಯಿಂದ ಒಣ ಅಡಿಕೆ ಪಡೆದುಕೊಂಡಿರುವ ಕಮಲೇಶ್‌ ಪಡಲಿಯಾ 59,61,973 ರೂ.ಗಳನ್ನು ಬಾಕಿ ಇರಿಸಿಕೊಂಡಿದ್ದಾನೆ.

ಆತನ ಮೊಬೈಲ್‌ ಸ್ವಿಚ್‌ಆಫ್ ಆಗಿದೆ. ಇದೇ ರೀತಿ ಕೆ.ಎಸ್‌. ನಾರಾಯಣ ಭಟ್‌ ಅವರಿಗೆ 25,24,639 ರೂ. ಸೇರಿದಂತೆ ಹಲವು ವ್ಯಾಪಾರಿಗಳಿಗೆ ಒಟ್ಟು 1,21,25,362 ರೂ.ಗಳನ್ನು ಬಾಕಿ ಇರಿಸಿ ಆರೋಪಿ ವಂಚಿಸಿದ್ದಾನೆ ಎಂದು ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್‌ ಮೂಲಕ ಲಕ್ಷ ರೂ. ವಂಚನೆ
ಮಣಿಪಾಲ: ಆನ್‌ಲೈನ್‌ ಮೂಲಕ ವ್ಯಕ್ತಿಯೊಬ್ಬರನ್ನು ವಂಚಿಸಿ ಲಕ್ಷ ರೂ. ಎಗರಿಸಿದ ಘಟನೆ ನಡೆದಿದೆ.
ಮಣಿಪಾಲದ ಅಪಾರ್ಟ್‌ಮೆಂಟ್‌ನಲ್ಲಿ ವಾಸಮಾಡಿಕೊಂಡಿದ್ದ ಪರಾಗ್‌ ಪುಷ್ಪನ್‌ ಅವರ ಮೊಬೈಲ್‌ ಸಂಖ್ಯೆಗೆ ಜು. 13ರಂದು ಅಪರಿಚಿತ ಸಂಖ್ಯೆಯಿಂದ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ.

Advertisement

“ತಾನು ಕಸ್ಟಮರ್‌ ಕೇರ್‌ನಿಂದ ಮಾತನಾಡುವುದಾಗಿ ಪರಿಚಯಿಸಿಕೊಂಡು ನಿಮ್ಮ ಸಿಮ್‌ ಅನ್ನು ಇ-ಸಿಮ್‌ ಮಾಡಲು ಇದೆ ಎಂದು ತಿಳಿಸಿ ಅದಕ್ಕೆ ವಾಟ್ಸ್‌ ಆ್ಯಪ್‌ ಸ್ಕ್ರೀನ್‌ ಶೇರ್‌ ಮಾಡುವಂತೆ ಹೇಳಿದ್ದಾನೆ. ಅದರಂತೆ ಅವರು ಶೇರ್‌ ಮಾಡಿದ್ದಾರೆ. ಅನಂತರ ಆ ವ್ಯಕ್ತಿಯು ವಾರದಲ್ಲಿ ಮೂರು ಬಾರಿ ಸಿಮ್‌ ಅನ್ನು ಡಿಯಾಕ್ಟಿವೇಟ್‌ ಮಾಡಿದ್ದು, ಆಕ್ಟಿವೇಟ್‌ ಆದ ಬಳಿಕ ಅವರ ಬ್ಯಾಂಕ್‌ ಖಾತೆಯಿಂದ ಹಂತ-ಹಂತವಾಗಿ ಒಂದು ಲ.ರೂ. ವರ್ಗಾವಣೆಯಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next