ಚಿಕ್ಕಮಗಳೂರು: ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಚಿನ್ನದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇನೆ ಎಂದು ನಂಬಿಸಿ ನಕಲಿ ಚಿನ್ನದ ನಾಣ್ಯಗಳ ನೀಡಿ ವಂಚಿಸಿದ ಆರೋಪಿಯ ಬಂಧಿಸುವಲ್ಲಿ ಬೀರೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಮಧುರೈ ನಿವಾಸಿ ವೆಂಕಟೇಶ್ ಎಂಬವರಿಗೆ ರವಿ ದೂರವಾಣಿ ಕರೆ ಮಾಡಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಚಿನ್ನದ ನಾಣ್ಯಗಳು ಸಿಕ್ಕಿವೆ ಅವುಗಳನ್ನು ಕಡಿಮೆ ಬೆಲೆಗೆ ಮಾರುತ್ತೇನೆಂದು ನಂಬಿಸಿದ್ದಾನೆ. ಈತನ ಮಾತು
ನಂಬಿ ವೆಂಕಟೇಶ್ ಬೀರೂರಿಗೆ ಆಗಮಿಸಿದ್ದು, ಅಸಲಿ ಒಂದು ಚಿನ್ನದ ನಾಣ್ಯ ಸ್ಯಾಂಪಲ್ ನೀಡಿದ್ದಾನೆ. ನ್ಯಾಣ ಅಸಲಿ ಎಂದು ತಿಳಿದ ಮೇಲೆ ವೆಂಕಟೇಶ್ ತನ್ನ ಸ್ನೇಹಿತರ ಬಳಿ ಎರಡು ಲಕ್ಷ ರೂ. ಸಾಲ ಮಾಡಿ 200 ಗ್ರಾಂ ನಷ್ಟು ಚಿನ್ನದ ನಾಣ್ಯ ಖರೀದಿ ಮಾಡಿದ್ದಾನೆ.
ನಂತರ ಈ ನಾಣ್ಯಗಳ ಪರಿಶೀಲಿಸಿದಾಗ ಇವುಗಳು ನಕಲಿ ಚಿನ್ನದ ನಾಣ್ಯಗಳು ಎಂಬುದು ತಿಳಿದಿದೆ. ತಾನು ಮೋಸ ಹೋಗಿ ರುವುದು ಗೊತ್ತಾಗುತ್ತಿದ್ದಂತೆ ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಆರೋಪಿಯ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾವಣಗೆರೆ ಜಿಲ್ಲೆಯ ಹಲಕನಹಾಳ್ ರಾಜಪ್ಪ ಎಂಬಾತನ ಬಂಧಿಸಿ ಆತನಿಂದ ಎರಡು ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಶ್ಲಾಘಿಸಿದ್ದಾರೆ.