Advertisement

Mangaluru; ಲಾರಿ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿ ಮೃತ್ಯು

07:40 PM Jul 11, 2024 | Team Udayavani |

ಮಂಗಳೂರು: ನಗರ ಕುಂಟಿಕಾನ ಎ.ಜೆ ಆಸ್ಪತ್ರೆ ಬಳಿ ರಾ.ಹೆ. 66 ರಲ್ಲಿ ಲಾರಿ ಢಿಕ್ಕಿಯಾದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ಮೃತಪಟ್ಟಿರುವ ವ್ಯಕ್ತಿಯ ಮಾಹಿತಿ ಲಭ್ಯವಾಗಿಲ್ಲ. ಕೊಟ್ಟಾರ ಕಡೆಯಿಂದ ಕೆಪಿಟಿ ಕಡೆಗೆ ಹೋಗುತ್ತಿದ್ದ ಲಾರಿ ಢಿಕ್ಕಿ ಯಾಗಿದೆ. ಲಾರಿಯ ಚಕ್ರ ಗಳು ಹರಿದು ತಲೆ ಸಂಪೂರ್ಣ ವಾಗಿ ಜಜ್ಜಿ ಹೋಗಿದ್ದು, ಗುರುತು ಸಿಗದಂತಾಗಿದೆ. ಮೃತ ದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next