Advertisement

Mangaluru: ಸ್ಟೇಟ್‌ಬ್ಯಾಂಕ್‌ ಅಡ್ಡರಸ್ತೆ ಬಳಿ ಬಿದ್ದಿದ್ದ ಅಪರಿಚಿತ ವ್ಯಕ್ತಿ ಸಾವು

09:13 PM Aug 20, 2024 | Team Udayavani |

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್‌ 3ನೇ ಅಡ್ಡರಸ್ತೆಯಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ 50ರಿಂದ 55 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯನ್ನು ಸೋಮವಾರ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.

Advertisement

ಸುಮಾರು 5.6 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ಕಪ್ಪು ತಲೆಕೂದಲು ಮತ್ತು ಗಡ್ಡ ಮೀಸೆ ಹೊಂದಿದ್ದು, ಬಲಕಣ್ಣಿನ ಪಕ್ಕ ಮತ್ತು ಹೊಟ್ಟೆಯ ಹೊಕ್ಕುಳಿನ ಬಳಿ ಎಳ್ಳುಗಾತ್ರದ ಕಪ್ಪು ಮಚ್ಚೆ ಇದೆ. ಕಾಫಿ ಬಣ್ಣದ ಅರ್ಧ ತೋಳಿನ ಶರ್ಟ್‌ ಮತ್ತು ಕಪ್ಪು ಕಲರ್‌ ನೈಟ್‌ ಪ್ಯಾಂಟ್‌ ಧರಿಸಿದ್ದಾರೆ. ಈ ವ್ಯಕ್ತಿಯ ಮಾಹಿತಿ ಇದ್ದಲ್ಲಿ ಬಂದರು ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next