Advertisement

Mangaluru Airport: ಸುಧಾರಿತ ಉಪಕರಣಗಳೊಂದಿಗೆ ಭದ್ರತೆಯ ವ್ಯವಸ್ಥೆ ಉನ್ನತ ದರ್ಜೆಗೆ

12:25 AM Aug 01, 2024 | Team Udayavani |

ಮಂಗಳೂರು: ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್‌) ಒದಗಿಸಲಾದ ಸುಧಾರಿತ ಉಪಕರಣಗಳನ್ನು ಬುಧವಾರದಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಸ್ತಾಂತರಿಸಲಾಯಿತು. ಆ ಮೂಲಕ ವಿಮಾನ ನಿಲ್ದಾಣದ ಭದ್ರತಾ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.

Advertisement

ಹೊಸ ಉಪಕರಣಗಳಲ್ಲಿ ತ್ವರಿತ ಪ್ರತಿಕ್ರಿಯೆ ತಂಡಕ್ಕೆ ಎರಡನೇ ಗುಂಡು ನಿರೋಧಕ ವಾಹನ ಮತ್ತು ಅತ್ಯಾಧುನಿಕ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್‌) ಉಪಕರಣಗಳು ಸೇರಿವೆ. ಭದ್ರತಾ ಸಾಮರ್ಥ್ಯಗಳ ಗಮನಾರ್ಹ ಹೆಚ್ಚಳದಲ್ಲಿ ವಿಮಾನ ನಿಲ್ದಾಣವು ಶಂಕಿತ ಲಗೇಜ್‌ ಕಂಟೇನ್ಮೆಂಟ್‌ ವಾಹನ, ಮಿನಿಯೇಚರ್‌ ರಿಮೋಟ್‌ ಆಪರೇಟೆಡ್‌ ವೆಹಿಕಲ್‌, ಐಆರ್‌ ಇಲ್ಯುಮಿನೇಟರ್‌ ಮತ್ತು ರೇಂಜ್‌ ಫೈಂಡರ್‌ ಹೊಂದಿರುವ ನೈಟ್‌ ವಿಷನ್‌ ಬೈನಾಕ್ಯುಲರ್‌ಗಳನ್ನು ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ.

ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ರಸ್ತೆಗಳಲ್ಲಿ ಗಸ್ತು ತಿರುಗಲು ಭದ್ರತಾ ತಂಡಕ್ಕೆ ಎರಡು ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ನೀಡಲಾಗಿದೆ. ಅಲ್ಲದೆ ವಿಮಾನ ನಿಲ್ದಾಣದ ಭದ್ರತೆ ನಿರ್ವಹಿಸಲು ಸಿಐಎಸ್‌ಎಫ್‌ಗೆ ಅಗತ್ಯವಿರುವ ಎಲ್ಲ ಸಾಧನಗಳನ್ನು ಒದಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ ಮುಖೇಶ್‌ ನಂಕಣಿ ಅವರು ಸಿಐಎಸ್‌ಎಫ್‌ನ ಹಿರಿಯ ಕಮಾಂಡೆಂಟ್‌ ಮತ್ತು ಮುಖ್ಯ ವಿಮಾನ ನಿಲ್ದಾಣದ ಭದ್ರತಾ ಅ ಧಿಕಾರಿ ವೀರೇಂದ್ರ ಮೋಹನ್‌ ಜೋಷಿ ಅವರಿಗೆ ಎಎಎಚ್‌ಎಲ್‌ ಮುಖ್ಯ ಭದ್ರತಾ ಅಧಿಕಾರಿ ವಿಜಿತ್‌ ಜುಯಾಲ್‌ ಮತ್ತು ವಿಮಾನ ನಿಲ್ದಾಣದ ನಾಯಕತ್ವ ತಂಡದ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಕೀಲಿಯನ್ನು ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next