Advertisement
ಘಟನೆಯ ವಿವರ:ಎ. 5ರಂದು ಮಧ್ಯಾಹ್ನ 12ಗಂಟೆಗೆ ಜೀವನ್ ಅವರು ಪೆಟ್ರೋಲ್ ತುಂಬಿಸಲೆಂದು ಪೆಟ್ರೋಲ್ ಪಂಪ್‌ಗೆ ತೆರಳಿದ್ದರು. ಪೆಟ್ರೋಲ್ ಟ್ಯಾಂಕ್‌ನ ಕ್ಯಾಪ್ ಮೇಲೆ ಪೆಟ್ರೋಲ್ ಎಂದು ನಮೂದಿಸಿದ್ದರೂ ಸಿಬಂದಿ ಅಚಾತುರ್ಯದಿಂದ ಡಿಸೇಲ್ ತುಂಬಿಸಿದ್ದಾರೆ. ಸಿಬಂದಿಯ ಎಡವಟ್ಟಿನಿಂದಾಗಿ ಕಾರಿನ ಎಂಜಿನ್ ಸಂಪೂರ್ಣ ಸೀಜ್ ಆಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಆರೋಪಿಸಲಾಗಿದೆ.