ಮಂಗಳೂರು: ಇಲ್ಲಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಬಿ.ಎಸ್ಸಿ. ನರ್ಸಿಂಗ್ 2019-2022 ರ ಬ್ಯಾಚ್ ವಿದ್ಯಾರ್ಥಿಗಳು ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಬಿ.ಎಸ್.ಸಿ. ನರ್ಸಿಂಗ್ ಪರೀಕ್ಷೆಯಲ್ಲಿ ಹಲವಾರು ವಿಷಯವಾರು ಶ್ರೇಣಿಗಳನ್ನು ಪಡೆದುಕೊಂಡಿದ್ದಾರೆ.
ನ್ಯೂಟ್ರಿಷನ್ ಮತ್ತು ಬಯೋಕೆಮಿಸ್ಟ್ರಿಯಲ್ಲಿ ಕುಮಾರಿ ಅಕ್ಜಾ ಸುಧಾ 6ನೇ ಶ್ರೇಣಿ, ಕುಮಾರಿ ಪೂಜಾ 8ನೇ ಶ್ರೇಣಿ, ಕುಮಾರಿ ಅಂಜಲಿ ಸಾಬು 9ನೇ ಶ್ರೇಣಿ ಹಾಗೂ ಕುಮಾರಿ ಸಿಬಿ ಎಲಿಜಬೆತ್ ರ‍್ಗೀಸ್ 10ನೇ ಶ್ರೇಣಿ ಪಡೆದುಕೊಂಡಿದ್ದಾರೆ.
ಕುಮಾರಿ ಅಶ್ವತಿ ಕೆ. ಕುರುಪ್ 7ನೇ ಶ್ರೇಣಿ, ಕುಮಾರಿ ಪೂಜಾ 9ನೇ ಶ್ರೇಣಿ, ಕುಮಾರಿ ಅಂಜಲಿ ಸಾಬು 10ನೇ ಶ್ರೇಣಿ ಹಾಗೂ ಕುಮಾರಿ ರೋಸಮ್ಮ 10ನೇ ಶ್ರೇಣಿ ಪಡೆದುಕೊಂಡಿದ್ದಾರೆ.
ಸೈಕಾಲಜಿಯಲ್ಲಿ ಕುಮಾರಿ ಅಕ್ಜಾ ಸುಧಾ ಅವರು 8ನೇ ಶ್ರೇಣಿ ಮತ್ತು ಕುಮಾರಿ ಸಿಬಿ ಎಲಿಜಬೆತ್ ರ‍್ಗೀಸ್ 10ನೇ ಶ್ರೇಣಿ ಪಡೆದುಕೊಂಡಿದ್ದಾರೆ.
ಫರ‍್ಮಾಕಾಲಜಿ, ಪೆಥಾಲಜಿ, ಜೆನೆಟಿಕ್ಸ್ ವಿಭಾಗದಲ್ಲಿ ಕುಮಾರಿ ಅಕ್ಜಾ ಸುಧಾ 9ನೇ ಶ್ರೇಣಿ, ಕುಮಾರಿ ಪೂಜಾ 9ನೇ ಶ್ರೇಣಿ, ಕುಮಾರಿ ಸಂತ್ರಾ ಬೆಂಜಮಿನ್ 9ನೇ ಶ್ರೇಣಿ ಹಾಗೂ ಕುಮಾರಿ ಶಾಲೆಟ್ ಶಾಜಿ 10ನೇ ಶ್ರೇಣಿ ಪಡೆದುಕೊಂಡಿದ್ದಾರೆ.
ಸಂವಹನ ಮತ್ತು ಶೈಕ್ಷಣಿಕ ತಂತ್ರಜ್ಞಾನದಲ್ಲಿ ಕುಮಾರಿ ಅಕ್ಜಾ ಸುಧಾ 9ನೇ ಶ್ರೇಣಿ ಮತ್ತು ಕುಮಾರಿ ಜೋಸ್ನಾ ಎಲ್ಸಾ ಜೋಸ್ 9ನೇ ಶ್ರೇಣಿ ಪಡೆದುಕೊಂಡಿದ್ದಾರೆ.
ಕುಮಾರಿ ಜೋಸ್ನಾ ಎಲ್ಸಾ ಜೋಸ್ ಸಮುದಾಯ ಆರೋಗ್ಯ ನರ್ಸಿಂಗ್-II ನಲ್ಲಿ 9 ನೇ ಶ್ರೇಣಿ ಗಳಿಸಿದ್ದಾರೆ. ಕುಮಾರಿ ಸಿಬಿ ಎಲಿಜಬೆತ್ ರ‍್ಗೀಸ್ ಮೈಕ್ರೋಬಯಾಲಜಿಯಲ್ಲಿ 9ನೇ ಶ್ರೇಣಿ ಮತ್ತು ಕುಮಾರಿ ಅಕ್ಜಾ ಸುಧಾ ಮೆಡಿಕಲ್ ಸರ್ಜಿಕಲ್ ನರ್ಸಿಂಗ್-II ನಲ್ಲಿ 10ನೇ ಶ್ರೇಣಿ ಗಳಿಸಿದ್ದಾರೆ.