Advertisement

Mangaluru: ಹಾಲಿ ಮೇಯರ್‌ಗೆ 10 ದಿನ ಹೆಚ್ಚುವರಿ ಆಡಳಿತ ಅವಕಾಶ

03:04 PM Sep 10, 2024 | Team Udayavani |

ಮಹಾನಗರ: ಮಂಗಳೂರು ಪಾಲಿಕೆ ಹಾಲಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮತ್ತು ಉಪ ಮೇಯರ್‌ ಸುನೀತಾ ಅವರ ಆಡಳಿತ ಅವಧಿಯು ಸೆ. 8ರಂದು ಮುಕ್ತಾಯವಾಗಿದ್ದು, ಸೆ. 19ಕ್ಕೆ ಚುನಾ ವಣೆಯ ಮೂಲಕ ಮೇಯರ್‌ ಹಾಗೂ ಉಪ ಮೇಯರ್‌ ಸ್ಥಾನಗಳಿಗೆ ಆಯ್ಕೆ ನಡೆಯಲಿದೆ.

Advertisement

ಈ ನಡುವೆ ಹಾಲಿ ಮೇಯರ್‌ ಅವರಿಗೆ ಹೆಚ್ಚುವರಿ 10 ದಿನ ಅವಧಿ ಸಿಗಲಿದೆ. ಮೀಸಲಾತಿ ಬಿಡುಗಡೆಗೆ ವಿಳಂಬವಾದ ಕಾರಣ ಸುಧೀರ್‌ ಶೆಟ್ಟಿ ಕಣ್ಣೂರು ಅವರಿಗೆ ಹೆಚ್ಚುವರಿ ಅವಕಾಶ ಸಿಕ್ಕಿದಂತಾಗಿದೆ. ಸ್ಥಾಯೀ ಸಮಿತಿಗಳ ಅವಧಿ ಪೂರ್ಣಗೊಂಡಿದ್ದು, ಹೊಸ ಮೇಯರ್‌ ಆಯ್ಕೆ ಬಳಿಕವಷ್ಟೇ ಸ್ಥಾಯೀ ಸಮಿತಿಗಳು ಪುನರ್‌ ರಚನೆಯಾಗಲಿದೆ.

ಪ್ರೇಮಾನಂದ ಶೆಟ್ಟಿ, ಅಶ್ರಫ್‌ಗೆ ಹೆಚ್ಚುವರಿ ಅವಕಾಶ
ಹಿಂದೆ ಮೇಯರ್‌ ಆಗಿದ್ದ ಅಶ್ರಫ್‌ ಅವರಿಗೆ ಸುಮಾರು 4 ತಿಂಗಳು, ಪ್ರೇಮಾನಂದ ಶೆಟ್ಟಿ ಅವರಿಗೆ 6 ತಿಂಗಳುಗಳ ಕಾಲ ಹೆಚ್ಚುವರಿ ಅವಕಾಶ ಸಿಕ್ಕಿತ್ತು. ಮೀಸಲಾತಿ ವಿಳಂಬವಾದ ಕಾರಣ ಹೆಚ್ಚುವರಿ ಅವಧಿಗೆ ಮೇಯರ್‌ ಆಗಿ ಮುಂದು ವರಿಯಲು ಸಾಧ್ಯವಾಯಿತು.

ಹಾಲಿ ಮೇಯರ್‌; ಸಭೆ ನಡೆಸಲು ಅವಕಾಶವಿಲ್ಲ!
ಮುಂದಿನ ಹತ್ತು ದಿನಗಳ ಕಾಲ ಸುಧೀರ್‌ ಶೆಟ್ಟಿ ಕಣ್ಣೂರು ಅವರು ಮೇಯರ್‌ ಆಗಿಯೇ ಮುಂದುವರಿಯಲಿದ್ದಾರೆ. ಆದರೆ ಮನಪಾ ಸಾಮಾನ್ಯ ಸಭೆ ನಡೆಸಲು ಅವಕಾಶವಿಲ್ಲ. ತುರ್ತು ಅಗತ್ಯತೆ ಎದುರಾದಲ್ಲಿ ಮಾತ್ರವೇ ಸಭೆ ನಡೆಸಬಹುದು. ಉಳಿದಂತೆ ಶಿಲಾನ್ಯಾಸ, ಶಂಕುಸ್ಥಾಪನೆ, ಇತರ ಕಾರ್ಯಗಳಿಗೆ ಅವಕಾಶವಿದೆ.

ಹೊಸ ಮೇಯರ್‌ಗೆ 6 ತಿಂಗಳವಷ್ಟೇ ಅವಕಾಶ!
ಪ್ರೇಮಾನಂದ ಶೆಟ್ಟಿ ಅವರು ಮೇಯರ್‌ ಆಗಿದ್ದ ಸಂದರ್ಭ ಮೀಸಲಾತಿ ವಿವಾದ ಕಾರಣದಿಂದ ಆರು ತಿಂಗಳು ಹೆಚ್ಚುವರಿ ಅಧಿಕಾರ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿದ ಐದನೇ ಅವಧಿಯ ಹೊಸ ಮೇಯರ್‌- ಉಪಮೇಯರ್‌ ಅವಧಿ ಸುಮಾರು ಆರು ತಿಂಗಳ ಅವಧಿಗೆ ಮಾತ್ರ ಸೀಮಿತಗೊಳ್ಳಲಿದೆ. ಹೀಗಾಗಿ ಮೇಯರ್‌- ಉಪಮೇಯರ್‌ ಚುನಾವಣೆಯ ಬಳಿಕ ಮುಂದಿನ ಫೆ.

Advertisement

28ರವರೆಗೆ ಮಾತ್ರ ಅಧಿಕಾರಾವಧಿ ಸಿಗಲಿದೆ.
ಪ್ರೇಮಾನಂದ ಶೆಟ್ಟಿ ಅವರು ಮೇಯರ್‌ ಆಗಿದ್ದ ಸಂದರ್ಭ ಮೀಸಲಾತಿ ವಿವಾದ ಕಾರಣದಿಂದ ಆರು ತಿಂಗಳು ಹೆಚ್ಚುವರಿ ಅಧಿಕಾರ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿದ ಐದನೇ ಅವಧಿಯ ಹೊಸ ಮೇಯರ್‌- ಉಪಮೇಯರ್‌ ಅವಧಿ ಸುಮಾರು ಆರು ತಿಂಗಳ ಅವಧಿಗೆ ಮಾತ್ರ ಸೀಮಿತಗೊಳ್ಳಲಿದೆ. ಹೀಗಾಗಿ ಮೇಯರ್‌- ಉಪಮೇಯರ್‌ ಚುನಾವಣೆಯ ಬಳಿಕ ಮುಂದಿನ ಫೆ. 28ರವರೆಗೆ ಮಾತ್ರ ಅಧಿಕಾರಾವಧಿ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next