Advertisement
ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೆ. 30ರಂದು ಸಂಜೆ 4 ಗಂಟೆಗೆ ವೈಭವದ “ಮಂಗಳೂರು ದಸರಾ’ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಸಮಾರಂಭ ನಡೆಯಲಿದೆ. ಮೆರವಣಿಗೆಯಲ್ಲಿ ಶ್ರೀ ಶಾರದಾ ಮಾತೆ, ಮಹಾಗಣಪತಿ, ನವದುರ್ಗೆಯರ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು 75ಕ್ಕಿಂತಲೂ ಅಧಿಕ ಟ್ಯಾಬ್ಲೋಗಳು ಭಾಗವಹಿಸಲಿವೆ.
ಜಿಲ್ಲೆ ಹಾಗೂ ಹೊರಜಿಲ್ಲೆಯ ಜಾನಪದ ತಂಡ ಗಳು ಮೆರವಣಿಗೆಗೆ ವಿಶೇಷ ಸೊಬಗನ್ನು ನೀಡ ಲಿವೆ. ಸುಮಾರು 500ಕ್ಕೂ ಹೆಚ್ಚು ಆಲಂಕಾರಿಕ ಕೊಡೆಗಳ ಮೂಲಕ ಮೆರವಣಿಗೆಗೆ ಮೆರುಗು ದೊರೆಯಲಿದೆ ಎಂದರು. ನವರಾತ್ರಿ ಹಾಗೂ ದಸರಾ ಕಾರ್ಯಕ್ರಮಗಳ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ನಗರವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗುತ್ತಿದೆ. ಶೋಭಾಯಾತ್ರೆ ಕುದ್ರೋಳಿ ದೇವಸ್ಥಾನದಿಂದ ಹೊರಟು ಲೇಡಿಹಿಲ್, ಬಲ್ಲಾಳ್‌ಬಾಗ್, ಕೊಡಿಯಾಲ್ ಬೈಲ್, ಹಂಪನಕಟ್ಟೆ, ವಿ.ವಿ. ಕಾಲೇಜು, ಗಣಪತಿ ಹೈಸ್ಕೂಲ್ ರಸ್ತೆ, ರಥಬೀದಿ, ನ್ಯೂಚಿತ್ರ ಮಾರ್ಗವಾಗಿ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಬಂದು ಪುಷ್ಕರಣಿಯಲ್ಲಿ ವಿಸರ್ಜನೆಗೊಳ್ಳಲಿದೆ ಎಂದು ವಿವರಿಸಿದರು.
Related Articles
Advertisement
ಭಾವುಕರಾದ ಪೂಜಾರಿಪತ್ರಿಕಾಗೋಷ್ಠಿ ಸಂದರ್ಭ ಜನಾರ್ದನ ಪೂಜಾರಿ ಭಾವುಕರಾಗಿ ಮಾತನಾಡಿದರು. “ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನನ್ನ ಮಾತುಗಳನ್ನು ಕೇಳುವಾಗಲೇ ನಿಮಗೆ ಮನವರಿಕೆ ಆಗಿರ ಬಹುದು. ಮುಂದಿನ ಮಂಗಳೂರು ದಸರಾ ವನ್ನು ನಾನು ನೋಡುತ್ತೇನೆ ಎಂಬ ವಿಶ್ವಾಸವೂ ನನಗಿಲ್ಲ. ಅಲ್ಲಿಯವರೆಗೆ ನಾನು ಬದು ಕಿರುತ್ತೇನೆ ಎಂಬ ನಂಬಿಕೆ ಕೂಡ ನನಗಿಲ್ಲ. ಹಾಗಾಗಿ ಈ ಪತ್ರಿಕಾಗೋಷ್ಠಿಯೇ ನನ್ನ ಕೊನೆಯ ಪತ್ರಿಕಾಗೋಷ್ಠಿ ಆಗಿರಲೂ ಬಹುದು’ ಎಂದು ಜನಾರ್ದನ ಪೂಜಾರಿ ಭಾವುಕರಾಗಿ ಹೇಳಿದರು.