ಮಂಗಳೂರು: ವಿಯೆಟ್ನಾಂ ಮೂಲದ ಬಾಣಸಿಗರೊಬ್ಬನಿಗೆ ಯಶಸ್ವಿ ಯಾಗಿ ಹೃದಯ ಚಿಕಿತ್ಸೆ ನೀಡುವ ಮೂಲಕ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ವೈದ್ಯರು ಅವರ ಜೀವ ಉಳಿಸಿದ್ದಾರೆ.
19 ಸದಸ್ಯರನ್ನು ಒಳಗೊಂಡ ಹಡಗೊಂದರ ಸಿಬಂದಿ 39 ವರ್ಷದ ವಿಯೆಟ್ನಾಂ ಮೂಲದ ಬಾಣಸಿಗನಿಗೆ ಮಂಗಳೂರಿನ ಬಂದರಿನಲ್ಲಿ ಹಡಗು ಲಂಗರು ಹಾಕಿದ ಸ್ವಲ್ಪ ಸಮಯದಲ್ಲೇ ಹೃದಯಾಘಾತ ಸಂಭವಿಸಿತ್ತು. ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರೋಗಿಯು ರಾತ್ರಿ ವೇಳೆ ಮತ್ತೆ ರಕ್ತದ ಹರಿವಿನ ಸಮಸ್ಯೆಗೆ(ಮರು-ಇನ್‌ಫ್ರಾಕ್ಷನ್) ತುತ್ತಾಗಿದ್ದರಿಂದ ಅವರಿಗೆ ತುರ್ತು ಆಂಜಿಯೋಪ್ಲಾಸ್ಟಿ ಮಾಡಬೇ ಕಾಗಿತ್ತು. ಕೆಎಂಸಿ ಆಸ್ಪತ್ರೆಯ ಹಿರಿಯ ಇಂಟರ್‌ವೆನÒನಲ್ ಕಾರ್ಡಿಯಾಲಜಿಸ್ಟ್ ಡಾ| ಪದ್ಮನಾಭ ಕಾಮತ್ ನೇತೃತ್ವದ ವಿಶೇಷ ವೈದ್ಯಕೀಯ ತಂಡ ಡಾ| ಐಶ್ವರ್ಯಾ ಮತ್ತು ಡಾ| ಲಾವಣ್ಯಾ ಸಹಿತ ನುರಿತ ಅರಿವಳಿಕೆ ತಂಡದೊಂದಿಗೆ ತುರ್ತು ಕಾರ್ಯವಿಧಾನವನ್ನು ನಿರ್ವಹಿಸಿತು.
ಡಾ| ಪದ್ಮನಾಭ ಕಾಮತ್ ಪ್ರತಿಕ್ರಿಯಿಸಿ, ನಾವು ಎದುರಿಸಿದ ಪರಿಸ್ಥಿತಿ ಅತ್ಯಂತ ನಿರ್ಣಾಯಕವಾಗಿತ್ತು. ಆದರೆ ನಮ್ಮ ತಂಡದ ತ್ವರಿತ ಕ್ರಮ ಹಾಗೂ ಕೆಎಂಸಿ ಆಸ್ಪತ್ರೆಯಲ್ಲಿರುವ ಸುಧಾರಿತ ಸೌಲಭ್ಯಗಳ ನೆರವಿನಿಂದ ನಾವು ರೋಗಿಯ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಮತ್ತು ಯಶಸ್ವಿಯಾಗಿ ಆಂಜಿಯೋಪ್ಲಾಸ್ಟಿ ನಡೆಸಲು ಸಾಧ್ಯವಾಯಿತು. ರೋಗಿ ತುರ್ತು ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇಟಿಎ ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ಪಾಲುದಾರ ಸಾಯಿ ಶರಣ್ ಕೊಟ್ಟಾರಿ, ನವಮಂಗಳೂರು ಬಂದರು, ವಲಸೆ, ಕಸ್ಟಮ್ಸ್ ಮತ್ತು ಆರೋಗ್ಯ ಅಧಿಕಾರಿಗಳಾದ ಡಾ| ಪುತ್ರನ್ ಮತ್ತು ಡಾ| ಆಶಿತ್ ಡಿ. ಶೆಟ್ಟಿಯನ್ ನಮಗೆ ಬೆಂಬಲ ನೀಡಿದ್ದಾರೆ ಎಂದರು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಸಿಒಒ ಸಗೀರ್ ಸಿದ್ದಿಕಿ ಮಾತನಾಡಿ, ಅಂತಾರಾಷ್ಟ್ರೀಯ ರೋಗಿ
ಗಳಿಗೆ ನಮ್ಮ ವೈದ್ಯಕೀಯ ವ್ಯವಸ್ಥೆಯು ತುರ್ತುಸ್ಥಿತಿಗಳನ್ನು ನಿಭಾಯಿಸಲು ಸನ್ನದ್ಧವಾಗಿದೆ. ವಿದೇಶಿಗರಿಗೆ ಸಮ
ಯೋಚಿತ ವೈದ್ಯಕೀಯ ಮಧ್ಯಸ್ಥಿಕೆ ಮತ್ತು ಸಮನ್ವಯವು ನಿರ್ಣಾಯಕ ವಾಗಿರುತ್ತದೆ. ಭಾಷಾ ಅಡೆತಡೆಗಳನ್ನು ನಿಭಾಯಿಸುವುದು, ವಿಮಾ ಸೌಲಭ್ಯದ ಪರಿಶೀಲನೆ ಹಾಗೂ ರೋಗಿಯ ವೈದ್ಯಕೀಯ ದಾಖಲೆಗಳ ನಿಖರ ಪರಿಶೀಲನೆ ಸವಾಲಾಗಿದೆ. ಕೆಎಂಸಿಯಲ್ಲಿ ವಿಯೆಟ್ನಾಂ ರೋಗಿಯ ಯಶಸ್ವಿ ಚಿಕಿತ್ಸೆಯು ಅಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ದಕ್ಷತೆ ಮತ್ತು ಸನ್ನದ್ಧತೆಯನ್ನು ಸೂಚಿಸುತ್ತದೆ ಎಂದರು.