Advertisement

“ಮುಡಾ’ಅದಾಲತ್:‌ 25ಕ್ಕೂ ಅಧಿಕ ಅರ್ಜಿ ವಿಲೇವಾರಿ

09:41 PM Oct 21, 2020 | mahesh |

ಮಹಾನಗರ: ಏಕನಿವೇಶನ ಶುಲ್ಕ ಕಡಿಮೆಗೊಳಿಸಬೇಕು ಎಂದು ಬುಧವಾರ ನಡೆದ “ಮುಡಾ’ದ (ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ಅದಾಲತ್‌ನಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

“ಮುಡಾ’ ಅಧ್ಯಕ್ಷ ರವಿಶಂಕರ್‌ ಮಿಜಾರು ಅವರು ಅದಾಲತ್‌ನಲ್ಲಿ 25ಕ್ಕೂ ಅಧಿಕ ಅಹವಾಲು/ಅರ್ಜಿಗಳನ್ನು ಸ್ವೀಕರಿಸಿದರು. ಈ ಪೈಕಿ ಬಹುತೇಕ ಅರ್ಜಿ ಗಳ ವಿಲೇವಾರಿ ನಡೆಸಲಾಯಿತು. ಇತರ ಅರ್ಜಿಗಳ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿ ಒಂದೆರಡು ದಿನಗಳಲ್ಲಿ ದೂರ ವಾಣಿ ಮೂಲಕ ಮಾಹಿತಿ ನೀಡುವುದಾಗಿ ತಿಳಿಸಲಾಯಿತು. ಏಕ ನಿವೇಶನ ಶುಲ್ಕ ಹೆಚ್ಚಳವಾಗಿರುವುದರಿಂದ ಹೊರೆಯಾಗಿದೆ ಎಂದು ಹಲವು ಮಂದಿ ಅಹವಾಲು ಸಲ್ಲಿಸಿದರು. ಅಲ್ಲದೆ, ಸರಕಾರದಿಂದ ಹಕ್ಕುಪತ್ರ ಮೂಲಕ ನಿವೇಶನ ಪಡೆದಿರುವ ಬಡವರ್ಗದವರಿಗೆ ಏಕ ನಿವೇಶನದಿಂದ ವಿನಾಯಿತಿ ನೀಡಬೇಕು ಎಂಬ ಬೇಡಿಕೆ ಸಲ್ಲಿಸಲಾಯಿತು.

ನಕ್ಷೆಯಲ್ಲಿ ಗೊಂದಲ
ಹಕ್ಕುಪತ್ರದ ಮೂಲಕ ನೀಡಲಾದ ಸರಕಾರಿ ನಿವೇಶನಗಳನ್ನು ಪ್ರಾಧಿಕಾರದ ನಕ್ಷೆಯಲ್ಲಿ ಪಾರ್ಕ್‌ ಮತ್ತು ತೆರೆದ ಸ್ಥಳ ಎಂದು ಗುರುತಿಸಲಾಗಿದೆ. ಇದರಿಂದಾಗಿ ಈಗಾಗಲೇ ಸರಕಾರದಿಂದ ಹಕ್ಕುಪತ್ರ ಪಡೆದು ವಾಸಿಸುತ್ತಿರುವವರಿಗೆ ಆತಂಕ ಉಂಟಾಗಿದೆ ಎಂದು ಹಲವರು ಅಹ ವಾಲು ಸಲ್ಲಿಸಿದರು. ಈ ಬಗ್ಗೆ ಗೊಂದಲ ಇರುವವರೆಲ್ಲರೂ ಒಟ್ಟಾಗಿ ಅರ್ಜಿ ಸಲ್ಲಿಸಿ ದರೆ ಪ್ರಾಧಿಕಾರದಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷ ರವಿಶಂಕರ್‌ ಮಿಜಾರು ತಿಳಿಸಿದರು.

ರಸ್ತೆ ಕಾಮಗಾರಿಯಿಂದ ತೊಂದರೆಯಾಗದಿರಲಿ
“ಪ್ರಾಧಿಕಾರದ ಮಾಸ್ಟರ್‌ಪ್ಲ್ರಾನ್‌ 3’ರ ಅಡಿಯಲ್ಲಿ ನಗರದ ಹೊರವಲಯದ ಶಕ್ತಿನಗರ, ಬಜಾಲ್‌ ಮೊದಲಾದೆಡೆ ರಸ್ತೆ ಅಗಲಗೊಳಿಸುವಾಗ ಹೆಚ್ಚು ಜಾಗವನ್ನು ಸ್ವಾಧೀನಪಡಿಸಿಕೊಂಡರೆ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ಸ್ಥಳೀಯರು ಮನವಿಯಲ್ಲಿ ತಿಳಿಸಿದರು. ಸಾರ್ವಜನಿಕರ ಮನೆಗಳಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವುದಾಗಿ ಅಧ್ಯಕ್ಷರು ಭರವಸೆ ನೀಡಿದರು. ಮುಡಾ ಆಯುಕ್ತ ದಿನೇಶ್‌ ಕುಮಾರ್‌ ಉಪಸ್ಥಿತರಿದ್ದರು.

2 ತಿಂಗಳಿಗೊಮ್ಮೆ ಅದಾಲತ್‌
ಮುಡಾ ವ್ಯಾಪ್ತಿಯ ವಿವಿಧ ಮೂಲಸೌಕರ್ಯಗಳ ಕುರಿತಾದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ “ಮುಡಾ’ ಅದಾಲತ್‌ ನಡೆಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಅದಾಲತ್‌ ನಡೆದಿತ್ತು. ಮುಂದಿನ ದಿನಗಳಲ್ಲಿ ಪ್ರತಿ 2 ತಿಂಗಳಿಗೊಮ್ಮೆ ಅದಾಲತ್‌ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶವಿದೆ ಎಂದು ರವಿಶಂಕರ್‌ ಮಿಜಾರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next