Advertisement
ಮಂಗಳೂರು ವಿ.ವಿ.ಯು ಆರ್ಥಿಕ ಸಂಕಷ್ಟದಿಂದ ಪಾರಾಗಲು ವಿವಿಧ ಸೂತ್ರಗಳನ್ನು ಪಾಲಿಸಿಕೊಂಡು ಬಂದಿದ್ದು, ಇದರಂತೆ ಶುಲ್ಕ ಏರಿಸುವ ಮೂಲಕ ವಿ.ವಿ. ಆರ್ಥಿಕ ಬಲ ಹೆಚ್ಚಿಸುವ ಯೋಚನೆಯಲ್ಲಿದೆ. ಆದರೆ ಪರೀಕ್ಷಾ ಶುಲ್ಕದ ಪ್ರಮಾಣ ಸುಮಾರು ಶೇ. 50ರಷ್ಟು ಏರಿಕೆ ಆಗಿರುವುದರಿಂದ ವಿದ್ಯಾರ್ಥಿಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದಂತಾಗಿದೆ.
Related Articles
Advertisement
“ಸರಕಾರದ ಏಕರೂಪದ ಶುಲ್ಕದ ಇತಿಮಿತಿಯೊಳಗೆ ಶುಲ್ಕದಲ್ಲಿ ಕೊಂಚ ಪರಿಷ್ಕರಣೆ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿ ಪರಾಮರ್ಶೆ ನಡೆಸಿದ ಅನಂತರವೇ ಪರಿಷ್ಕರಣೆ ಮಾಡಲಾಗಿದೆ. ಸರಕಾರದ ಆದೇಶದಂತೆ ಪ್ರತೀ ವರ್ಷ ಶೇ. 10ರಷ್ಟು ಶುಲ್ಕ ಏರಿಕೆ ಮಾಡಬಹುದು ಎಂಬ ನಿಯಮ ಇದೆ. ಜತೆಗೆ ಕೊರೊನಾ ಅನಂತರ ಮಂಗಳೂರು ವಿ.ವಿ.ಯಲ್ಲಿ ಯಾವುದೇ ಶುಲ್ಕ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ಈಗ ಏರಿಕೆ ಮಾಡುವ ಅನಿವಾರ್ಯ ಬಂದಿದೆ’ ಎನ್ನುತ್ತಾರೆ ಪರೀಕ್ಷಾಂಗ ಕುಲಸಚಿವ ಪ್ರೊ| ದೇವೇಂದ್ರಪ್ಪ.
ಶುಲ್ಕ ಪರಿಷ್ಕರಣೆ ಅನಿವಾರ್ಯ“ವಿ.ವಿ.ಯ ಖರ್ಚು ವೆಚ್ಚ, ಯುಯುಸಿಎಂಎಸ್ನಿಂದ ಖರ್ಚು ವೆಚ್ಚಗಳು ಅಧಿಕವಾಗಿದೆ. ಸರಕಾರದ ಅನುದಾನ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಹಕಾರವನ್ನು ಪಡೆಯುವ ನೆಲೆಯಿಂದ ಶುಲ್ಕ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ. ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ನಮ್ಮ ಶುಲ್ಕದ ಪ್ರಮಾಣ ಕಡಿಮೆ ಇದೆ. ಸರಕಾರ ಈಗಾಗಲೇ ಯುಯುಸಿಎಂಎಸ್ನಲ್ಲಿ ಶುಲ್ಕ ನಿಗದಿ ಮಾಡಿದೆ. ಆದರೆ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಮ್ಮ ಶುಲ್ಕವಿದೆ. ಮುಂದಿನ ವರ್ಷದಿಂದ ಸರಕಾರವೇ ಏಕರೂಪದ ಪ್ರವೇಶ ಹಾಗೂ ಏಕರೂಪದ ಶುಲ್ಕ ನಿಯಮ ಜಾರಿಗೆ ತರಲಿದೆ.” – ಪ್ರೊ| ಪಿ.ಎಲ್. ಧರ್ಮ, ಕುಲಪತಿ, ಮಂಗಳೂರು ವಿ.ವಿ. – ದಿನೇಶ್ ಇರಾ