ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ 2021-22ನೇ ಸಾಲಿನಲ್ಲಿ ತಲಾ 5 ಸಾವಿರ ಮಣ್ಣು ಪರೀಕ್ಷೆ ಗುರಿ ನಿಗದಿಪಡಿಸಲಾಗಿದೆ. ಈ ವರ್ಷ ಅಧಿಕ ಮಳೆಯ ಕಾರಣ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಶೀಘ್ರ ಆರಂಭಗೊಳ್ಳಲಿದೆ ಎಂದು ಉಭಯ ಜಿಲ್ಲಾ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಪೊಟಾಶಿಯಂ ಕೊರತೆಕರಾವಳಿ ಕೃಷಿ ಮಣ್ಣಿನಲ್ಲಿ ಪೊಟಾಶಿಯಂ ಕೊರತೆ ಆತಂಕ ಮೂಡಿಸುತ್ತಿದೆ ಎಂದು ಮಣ್ಣು ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೆ ಹುಳಿ ಮಣ್ಣಿನ ಸಮಸ್ಯೆಯೂ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚಿನ ಮಣ್ಣು ಪರೀಕ್ಷೆ ಅಧ್ಯಯನದಿಂದ ಈ ಬಗ್ಗೆ ಹೆಚ್ಚಿನ ಅರಿವು ಮೂಡಲು ಸಹಕಾರಿಯಾಗಿದೆ. ಉಭಯ ಜಿಲ್ಲೆಯಲ್ಲಿ ನಿರಂತರ ಜಾಗೃತಿ, ಮಣ್ಣು ಪರೀಕ್ಷೆ, ವಿಶ್ಲೇಷಣೆ, ಶಿಬಿರ, ತರಬೇತಿ ನಡೆಸಲಾಗುತ್ತಿದೆ. ಪರೀಕ್ಷೆಯ ಬಳಿಕ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ.
ರೈತರು ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಲು 3ರಿಂದ 4 ಕಡೆಗಳಲ್ಲಿ “ವಿ’ ಆಕಾರದಲ್ಲಿ ಮಣ್ಣನ್ನು ತೆಗೆದು, ಕೆತ್ತಿರುವ ಮೇಲ್ಮೆ„ ಭಾಗದ ಮಣ್ಣಿನ ಮಾದರಿಯನ್ನು ನೀಡಬೇಕು. ತೋಟಗಾರಿಕೆ ಬೆಳೆಗೆ 30 ಸೆಂ.ಮೀ., ಕೃಷಿ ಬೆಳೆಗೆ 15 ಸೆಂ.ಮೀ. ಕೆಳಗಿನ ಮಣ್ಣಿನ ಮಾದರಿ ಒದಗಿಸಬೇಕು ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಲಸಿಕೆ ವಿತರಣೆ ಶೇ.65.9ರಷ್ಟು ಗುರಿ ಸಾಧನೆ
Related Articles
ಜಿಲ್ಲಾ ಮಟ್ಟದ ಮಣ್ಣು ಪರೀಕ್ಷಾ ಕೇಂದ್ರ ಆದಿ ಉಡುಪಿಯಲ್ಲಿದ್ದು, ದ.ಕ. ಜಿಲ್ಲೆಯ ಕೇಂದ್ರ ಮಂಗಳೂರಿನಲ್ಲಿದೆ. ಮಣ್ಣು ಮಾದರಿ ವಿಶ್ಲೇಷಣೆಗಾಗಿ ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ 13 ಕೇಂದ್ರ, ದ.ಕ. ಜಿಲ್ಲೆಯಲ್ಲಿ 4 ಕೇಂದ್ರಗಳಿವೆ. ಗ್ರಾಮ ಮಟ್ಟದ ಮಣ್ಣು ಪರಿಕ್ಷಾ ಘಟಕ ಸ್ಥಾಪಿಸಲು ಗರಿಷ್ಠಾ ಯೋಜನಾ ವೆಚ್ಚ 5 ಲಕ್ಷ ರೂ. ನೀಡಲಾಗುತ್ತದೆ. ಇದನ್ನು ಗ್ರಾಮದ ಉತ್ಸಾಹಿ ಯುವಕರು ನಡೆಸುವಂತೆ ಸರಕಾರ ಯೋಜನೆ ರೂಪಿಸಿದೆ. ಸಬ್ಸಿಡಿ ಸಹಕಾರದಲ್ಲಿ ಕೇಂದ್ರವನ್ನು ತೆರೆಯಲಾಗಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ 5, ಬೈಂದೂರು 4, ಕುಂದಾಪುರ 4, ಕಾರ್ಕಳದ ನಿಟ್ಟೆಯಲ್ಲಿ 1 ಗ್ರಾಮೀಣ ಮಣ್ಣು ಪರೀಕ್ಷಾ ಕೇಂದ್ರಗಳಿವೆ.
Advertisement
ಮಣ್ಣಿನ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುತ್ತ ಪೂರಕ ಕೃಷಿ ಮಾಡಿದಲ್ಲಿ ಉತ್ಪಾದನೆ ಉತ್ತಮವಾಗಿರುತ್ತದೆ. ಇಲಾಖೆ ವತಿಯಿಂದ ತರಬೇತಿ ಮತ್ತು ಸಾವಯವ ಕೃಷಿಗೆ ಒತ್ತು ನೀಡಲು ನಿರಂತರ ಕಾರ್ಯಕ್ರಮಗಳು ನಡೆಯುತ್ತಿವೆ.– ಡಾ| ಕೆಂಪೇಗೌಡ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಉಡುಪಿ ಕರಾವಳಿ ಮಣ್ಣಿನಲ್ಲಿ ವರ್ಷದಿಂದ ವರ್ಷಕ್ಕೆ ಪೊಟಾಶಿಯಂ ಅಂಶದ ಕೊರತೆ ಕಾಣಿಸುತ್ತಿದೆ. ಕಾಲಕಾಲಕ್ಕೆ ಪರೀಕ್ಷೆಯ ಮೂಲಕ ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಹೆಚ್ಚಿನ ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ.
– ಡಾ| ಜಯಪ್ರಕಾಶ್ ಆರ್. ಮಣ್ಣು ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ