ಮಹಾನಗರ: ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರು ಮಣ್ಣಗುಡ್ಡ, ಹೊಯಿಗೆ ಬಜಾರ್ ವಾರ್ಡ್ ಹಾಗೂ ಸುತ್ತಲಿನ ಪರಿಸರದಲ್ಲಿ ಗುರುವಾರ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಅಭೂತಪೂರ್ವ ಸ್ಪಂದನೆ ಇನ್ನಷ್ಟು ಉತ್ಸಾಹ ತುಂಬಿದೆ.
ಸಾಮರಸ್ಯ ಬಯಸದ ಕಾಂಗ್ರೆಸ್ ಪಕ್ಷಕ್ಕೆ ಇನ್ನೆಂದೂ ಬೆಂಬಲ ನೀಡಲಾರೆವು ಎಂದು ಹಿರಿಯರು ಹೇಳುತ್ತಿದ್ದಾರೆ. ಹೀಗಿರುವಾಗ, ಈ ಬಾರಿ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಮತದಾನದ ಮೂಲದ ಹೊರ ಹಾಕಲಿದ್ದಾರೆ ಎಂದು ಅವರು ಹೇಳಿದರು.
ಮಂಗಳೂರು ನಗರ ವಿಶ್ವದಲ್ಲೇ ‘ಎಜುಕೇಶನ್ ಹಬ್’ ಎನ್ನುವ ಖ್ಯಾತಿ ಪಡೆದಿದೆ. ಈ ಮನ್ನಣೆಗೆ ಇನ್ನಷ್ಟು ಗರಿಗಳು ಸೇರಬೇಕು. ಮಂಗಳೂರು ದೇಶದಲ್ಲೇ ಅತ್ಯಂತ ಸುಂದರ, ಸುರಕ್ಷಿತ, ಸುಶಿಕ್ಷಿತ ನಗರವಾಗ ಬೇಕು ಎನ್ನುವುದು ನಮ್ಮ ಆಸೆ. ಮಂಗಳೂರು ನಗರ ಸ್ಮಾರ್ಟ್ ಸಿಟಿಯೊಂದಿಗೆ ಸಿಲಿಕಾನ್ ನಗರವಾಗಬೇಕು. ಇಲ್ಲಿನ ಜನರ ಬದುಕ ಹಸನಾಗಬೇಕು ಎನ್ನುವುದು ಮೂಲ ಆಶಯ ಎಂದರು.
ಅದರೊಂದಿಗೆ ಮೇ 5 ರಂದು ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಗರದ ಕೇಂದ್ರ ಮೈದಾನದಲ್ಲಿ ನಾಗರಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ದಿನಗಣನೆ ಆರಂಭವಾಗಿದೆ ಎಂದು ಅವರು ತಿಳಿಸಿದರು.ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್
ರವಿಶಂಕರ್ ಮಿಜಾರ್, ಮನಪಾ ಸದಸ್ಯೆ ಜಯಂತಿ ಆಚಾರಿ, ವಿನೋದ್ ಮೆಂಡನ್, ಶ್ರೀನಿವಾಸ್ ಶೇಟ್, ಮೋಹನ್ ಆಚಾರಿ, ಚೇತನ್ ಕೋಟ್ಯಾನ್, ವಸಂತ್ ಜೆ. ಪೂಜಾರಿ, ಸುನಿಲ್ ಮೆಂಡನ್, ಸುಮಿತ್ ಪುತ್ರನ್, ಗುಲ್ಷನ್, ಅಶ್ವಿನ್, ಪ್ರಿಯಾ ವಿನೋದ್, ಸೋನಿಯಾ, ರೇವತಿ ಶ್ಯಾಮ ಸುಂದರ್, ನಮಿತ್, ದೀಪಕ್ ಪೈ ಮೊದಲಾದವರು ಉಪಸ್ಥಿತರಿದ್ದರು.