Advertisement

ಮಂಗಳೂರು: ಇನ್ನೆರಡು ದಿನ ನೀರಿಲ್ಲ

01:14 AM May 14, 2019 | Team Udayavani |

ಮಂಗಳೂರು: ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಷ್ಕರಿತ ರೇಷನಿಂಗ್‌ ನಿಯಮದ ಪ್ರಕಾರ ಮೇ 14 ಹಾಗೂ 15ರಂದು ನೀರು ಸರಬರಾಜು ಸ್ಥಗಿತವಾಗಲಿದೆ. ನೀರಿನ ಮಟ್ಟ ಕುಸಿದಿರುವುದರಿಂದ ತುಂಬೆಯ ಹಳೆ ಡ್ಯಾಂ ಕಾಣಿಸುತ್ತಿದೆ.

Advertisement

ಸೋಮವಾರ ಬೆಳಗ್ಗೆ 6 ಗಂಟೆಯಿಂದ ನೀರು ಸರಬರಾಜು ಸ್ಥಗಿತಗೊಳಿಸಲಾಗಿದ್ದು, ಇದು ಮೇ 16ರ ಬೆಳಗ್ಗೆ 6ರವರೆಗೆ ಮುಂದುವರಿಯಲಿದೆ. ಮೇ 16ರ ಬೆಳಗ್ಗೆ 6ರಿಂದ ಮೇ 20ರ ವರೆಗೆ ನೀರು ಸರಬರಾಜು ಇರಲಿದೆ. ಅಂದರೆ ಮೂರು ದಿನ ಸ್ಥಗಿತ ಹಾಗೂ ನಾಲ್ಕು ದಿನ ನೀರು ಸರಬರಾಜು. ರೇಷನಿಂಗ್‌ ಪರಿಣಾಮ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ.

ಈ ವಾರದಲ್ಲಿ ಉತ್ತಮ ಮಳೆಯಾಗದಿದ್ದರೆ ರೇಷನಿಂಗ್‌ ನಿಯಮದಲ್ಲಿ ಮತ್ತೆ ಬದಲಾವಣೆ ಮಾಡಲಾಗುತ್ತದೆ. ಇದರಂತೆ 4 ದಿನ ನೀರು ಹಾಗೂ 4 ದಿನ ಸ್ಥಗಿತ ಮಾಡಲಾಗುತ್ತದೆ. ಮೇ 20ರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆಯವರೆಗೆ ನೀರು ಸ್ಥಗಿತಗೊಳ್ಳಲಿದೆ.

ಸೋಮವಾರ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 3.86 ಮೀ. ಇದೆ. ಕಳೆದ ವರ್ಷ ಇದೇ ದಿನದಂದು 5.93 ಮೀ ಹಾಗೂ 2017ರಲ್ಲಿ 4.78 ಮೀ. ನೀರು ಸಂಗ್ರಹವಿತ್ತು.

ಮಳೆಗಾಗಿ ದೇವರಿಗೆ ಮೊರೆ
ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಸೀಯಾಳಾಭಿಷೇಕ ಮೇ 14ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ ಎಂದು ಪ್ರದೀಪ್‌ ಕುಮಾರ್‌ ಕಲ್ಕೂರ ತಿಳಿಸಿದ್ದಾರೆ.

Advertisement

ಎಲ್ಲ ಜಾತಿ, ಮತ, ಪಂಗಡ, ಧರ್ಮದ ನಾಗರಿಕರು ಮೇ 15ರಂದು ತಮ್ಮ ಶ್ರದ್ಧಾ ಕೇಂದ್ರ, ಧಾರ್ಮಿಕ ಕೇಂದ್ರಗಳಲ್ಲಿ ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಮಾಡುವಂತೆ ಶಾಸಕ ವೇದವ್ಯಾಸ ಕಾಮತ್‌ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next