ವೆಲೆನ್ಸಿಯದಿಂದ ನಂದಿಗುಡ್ಡೆಗೆ ಬರುವ ರಸ್ತೆಯಲ್ಲಿ ನೀರಿನ ಪೈಪ್‌ಲೈನ್ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಕಾಂಕ್ರಿಟ್ ರಸ್ತೆಯಲ್ಲಿ ಬೃಹತ್ ಗುಂಡಿ ತೆಗೆಯಲಾಗಿದೆ. ಇಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸದೇ ಇರುವ ಕಾರಣ ಬೈಕ್ ಸವಾರ ಗುಂಡಿಗೆ ಬಿದ್ದಿದ್ದಾರೆ. ಈ ವೇಳೆ ಮಳೆಯೂ ಸುರಿಯುತ್ತಿತ್ತು. ತತ್‌ಕ್ಷಣ ಸ್ಥಳೀಯರು ಸವಾರನನ್ನು ಗುಂಡಿಯಿಂದ ಹೊರತೆಗೆದು ಉಪಚರಿಸಿದರು. ಈ ಗುಂಡಿ ರಸ್ತೆಯ ಮಧ್ಯ ಭಾಗದಲ್ಲಿದ್ದು, ಸುತ್ತ ಯಾವುದೇ ಬ್ಯಾರಿಕೇಡ್ ಅಳವಡಿಸಿಲ್ಲ. ಸ್ಥಳೀಯರು ತತ್‌ಕ್ಷಣ ಪಾಲಿಕೆ ಮೇಯರ್ ಅವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ.
Advertisement
ಕೆಲವು ವಾಹನದವರದ್ದೇ ನಿರ್ಲಕ್ಷ್ಯ: ಮೇಯರ್ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಕೆಲವು ವಾಹನದವರು ಬ್ಯಾರಿಕೇಡ್ ಸರಿಸಿ ಹೋಗಿದ್ದು, ಇದೇ ಅವಘಡಕ್ಕೆ ಕಾರಣವಾಗಿದೆ. ಗಾಯಾಳುವಿನ ಆಸ್ಪತ್ರೆ ವೆಚ್ಚವನ್ನು ಗುತ್ತಿಗೆದಾರನೇ ಭರಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.