Advertisement

Mangaluru ಟೆಂಪೋ ಟ್ರಾವೆಲರ್‌ ಕಳವು: ದೂರು ದಾಖಲು

10:04 PM Sep 16, 2023 | Team Udayavani |

ಮಂಗಳೂರು: ಕುಂಟಿಕಾನ ಫ್ಲೈಓವರ್ ಅಡಿ ಭಾಗದಲ್ಲಿ ಸೆ.14ರಂದು ರಾತ್ರಿ 8.30ರ ವೇಳೆಗೆ ನಿಲ್ಲಿಸಿದ್ದ ಟೆಂಪೋ ಟ್ರಾವೆಲರ್‌ ವಾಹನವನ್ನು ಯಾರೋ ಕಳವು ಮಾಡಿದ್ದಾರೆ ಎಂದು ಉರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ನೀತಾ ಚರಣ್‌ ಎನ್ನುವವರಿಗೆ ಸೇರಿದ ವಾಹನವಾಗಿದ್ದು,ಅಲೆಕ್ಸ್‌ ಡಿ’ಸೋಜಾ ಎನ್ನುವವರು ಬಾಡಿಗೆ ಮಾಡುತ್ತಿದ್ದರು. ಅಲೆಕ್ಸ್‌ ಅವರು ಸೆ.14ರಂದು ರಾತ್ರಿ ಕುಂಟಿಕಾನದ ಫ್ಲೈಓವರ್ ಅಡಿಬಾಗದಲ್ಲಿ ನಿಲ್ಲಿಸಿ ಮನೆಗೆ ಹೋಗಿದ್ದಾರೆ.

ಶನಿವಾರ ಮಧ್ಯಾಹ್ನ 12.30ರ ವೇಳೆಗೆ ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಿದಾಗ ಟೆಂಪೋ ಟ್ರಾವೆಲರ್‌ ಅಲ್ಲಿ ಇರಲಿಲ್ಲ. ಎಲ್ಲ ಕಡೆ ಹುಡುಕಾಡಿ, ಇತರ ಚಾಲಕರಲ್ಲಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಯಾರೋ ಕಳ್ಳರು ವಾಹನದ ಲಾಕ್‌ ಒಡೆದು ಕಳವು ಮಾಡಿರಬಹುದು. ವಾಹನದ ಅಂದಾಜು ಮೌಲ್ಯ 10 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next