Advertisement

ವಿದ್ಯಾವಂತ ಮಾನವ ಶಕ್ತಿ ಉತ್ಕೃಷ್ಠ ಹಾಗೂ ಕೌಶಲ್ಯ ಕಾರ್ಯಪಡೆಯಾಗಬೇಕು : ವೆಂಕಯ್ಯ ನಾಯ್ಡು

03:47 PM Nov 02, 2019 | Team Udayavani |

ಮಂಗಳೂರು: ವಿದ್ಯಾವಂತ ಮಾನವ ಶಕ್ತಿಯನ್ನು ಉತ್ಕೃಷ್ಠ ಹಾಗೂ ಕೌಶಲ್ಯ ಕಾರ್ಯಪಡೆಯಾಗಿ ಪರಿವರ್ತಿಸುವುದು ಜ್ಞಾನಾಧಾರಿತ 21 ನೇ ಶತಮಾನದ ಅವಶ್ಯಕತೆಯಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

Advertisement

ಅವರು ಶನಿವಾರದಂದು ಸುರತ್ಕಲ್ ಎನ್‌ಐಟಿಕೆಯ(ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ) 17ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ ನಾವು ನಮ್ಮ ದೇಶ ಮಾತ್ರವಲ್ಲ ಇತರ ರಾಷ್ಟ್ರಗಳ ಅವಶ್ಯಕತೆಗಳನ್ನು ಪೂರೈಸುವ ಶಕ್ತಿಯನ್ನು ಹೊಂದಬೇಕು ಎಂದು ಹೇಳಿದರು.

ಸುರತ್ಕಲ್ ಎನ್‌ಐಟಿಕೆ ದೇಶದ ಹತ್ತು ಶ್ರೇಷ್ಠ ಎನ್‌ಐಟಿಕೆಗಳಲ್ಲಿ ಒಂದಾಗಿದೆ. ಇದಕ್ಕಾಗಿ ಇದರ ಆಡಳಿತ ವರ್ಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗವನ್ನು ಅಭಿನಂಧಿಸುತ್ತೇನೆ. ಇದು ಇಲ್ಲಿಗೆ ನಿಲ್ಲದೆ ವಿಶ್ವದ ಅತ್ಯುತ್ತಮ ತಾಂತ್ರಿಕ ವಿಶ್ವ ವಿದ್ಯಾನಿಲಯವಾಗಿ ಮೂಡಿಬರುವಂತಾಗಲಿ ಎಂದರು. ಇದೇ ಸಂದರ್ಭದಲ್ಲಿ ಸುರತ್ಕಲ್ ಎನ್‌ಐಟಿಕೆಯ ಸ್ಥಾಪಕ ದಿ. ಯು.ಶ್ರೀನಿವಾಸ ಮಲ್ಯ ಅವರನ್ನು ವೆಂಕಯ್ಯ ನಾಯ್ಡು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next