Advertisement
ಆದರೆ ಇದಾಗಿ 4 ತಿಂಗಳು ಸಂದರೂ ಪ್ರವಾಸಿಗರಿಗೆ ಖುಷಿ ಮೂಡಿಸುವಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಲಕ್ಷ ದ್ವೀಪಕ್ಕೆ ಪ್ರವಾಸ ಹೋಗುವವರು ಈಗಲೂ ಕೊಚ್ಚಿಗೆ ಹೋಗಿ ಅಲ್ಲಿಂದ ವಿಮಾನ ಅಥವಾ ನೌಕಾ ಮಾರ್ಗವಾಗಿಯೇ ತೆರಳಬೇಕಿದೆ. ಮೋದಿಯವರ ಲಕ್ಷದ್ವೀಪ ಭೇಟಿ ಯಿಂದ ಆ ಕುರಿತು ಬಹಳಷ್ಟು ಪ್ರಚಾರದ ಅಲೆಗಳು ಎದ್ದಿದ್ದವು. ಇದೇ ವೇಳೆ ಮಾಲ್ಡೀವ್ಸ್‌ನಲ್ಲಿ ಭಾರತ ವಿರೋಧಿ ಚಟುವಟಿಕೆ, ಭಾರತ ವಿರೋಧಿ ಹೇಳಿಕೆ ಇತ್ಯಾದಿ ಕಾರಣ
Related Articles
Advertisement
ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸ ತೆರಳಲು ಮುಖ್ಯವಾಗಿ ಬೇಕಾಗಿರು ವುದು ಅನುಮತಿ ನೀಡುವುದಕ್ಕೆ ಒಂದು ವ್ಯವಸ್ಥೆ. ಸದ್ಯ ಇದೆಲ್ಲವನ್ನೂ ಟೂರಿಸಂ ಏಜೆನ್ಸಿಗಳೇ ನಿರ್ವಹಿಸು ತ್ತಿವೆ. ಲಕ್ಷದ್ವೀಪಕ್ಕೆ ಹೋಗಲು ಬೇಕಾದ ಬೋರ್ಡಿಂಗ್ ಪಾಸ್ ಅನ್ನು ಲಕ್ಷದ್ವೀಪ ಆಡಳಿತ ಕೊಚ್ಚಿಯಲ್ಲಷ್ಟೇ ನೀಡುತ್ತಿದೆ. ಅದನ್ನು ಮಂಗಳೂರಿನಲ್ಲಿ ಪ್ರಾರಂಭಿಸಬೇಕು.ಲಕ್ಷದ್ವೀಪಕ್ಕೆ ಪ್ರವಾಸಿಗರು ಮಂಗಳೂರಿನಿಂದ ಹೋಗುವಂತೆ ಮಾಡುವ ಬಗ್ಗೆ ಸಂಸದರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರಾದರೂ ಯಾವುದೇ ಪರಿಣಾಮ ಕಾರಿ ಚರ್ಚೆಗಳು ನಡೆದಿಲ್ಲ.
ಹೈಪ್ ಮರೆತರೇ ಜನ?:
ಒಂದೊಮ್ಮೆ ಮಾಲ್ಡೀವ್ಸ್ ಎಂದರೆ ಮೂಗುಮುರಿಯುತ್ತಿದ್ದ ಜನರ ನೆನಪು ಈಗ ಮಾಸಿದಂತೆ ಕಾಣುತ್ತದೆ. ಮತ್ತೆ ನಿಧಾನವಾಗಿ ಮಾಲ್ಡೀವ್ಸ್‌ನತ್ತ ಹೋಗುವ ವರ ಸಂಖ್ಯೆ ಬೆಳೆಯುತ್ತಿದೆ ಎನ್ನುತ್ತಾರೆ ಪ್ರವಾಸಿ ಸಂಸ್ಥೆಯವರು.
ಮಾಲ್ಡೀವ್ಸ್, ಲಕ್ಷದ್ವೀಪ ಎರಡಕ್ಕೂ ಹೋಗುವವರಿದ್ದಾರೆ, ಜನ ಬಹಳ ಬೇಗನೆ ವಿಚಾರಗಳನ್ನು ಮರೆಯು ತ್ತಾರೆ. ಲಕ್ಷದ್ವೀಪಕ್ಕೆ ಹೋಗುವವರಿಗೆ ಬೇಕಾದಷ್ಟು ಮೂಲಸೌಕರ್ಯವನ್ನು ನಮ್ಮ ಸರಕಾರಗಳು ಸೃಷ್ಟಿಸಿಲ್ಲ, ಹಾಗಾಗಿ ದೊಡ್ಡ ಬೇಡಿಕೆ ಕಂಡುಬರುತ್ತಿಲ್ಲ ಎನ್ನುತ್ತಾರೆ ವಿಕ್ರಂ ಟ್ರಾವೆಲ್ಸ್‌ನ ಶಿವಾನಂದ್.
ಲಕ್ಷದ್ವೀಪಕ್ಕೆ ತೆರಳುವುದಕ್ಕೆ ದೊಡ್ಡ ಬೇಡಿಕೆಯೇನೂ ಕಂಡುಬಂದಿಲ್ಲ, ಯಥಾಸ್ಥಿತಿಯಲ್ಲೇ ಇದೆ ಎನ್ನುತ್ತಾರೆ ವತಿಕಾ ಟ್ರಾವೆಲ್ಸ್‌ನ ವತಿಕಾ ಪೈ.
ಹೆಚ್ಚುತ್ತಿದೆ ಮೂಲಸೌಕರ್ಯ:
ವಿಲಾಸೀ ಸೌಲಭ್ಯಗಳು ಮಾಲ್ಡೀವ್ಸ್‌ನಲ್ಲಿರುವಷ್ಟರ ಮಟ್ಟಿಗೆ ಲಕ್ಷದ್ವೀಪದಲ್ಲಿ ಲ್ಲಿಲ್ಲ, ಪ್ರಶಾಂತ ವಾತಾವರಣ ಬಯಸುವವರಿಗೆ ಇದು ಸೂಕ್ತ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆ ಇಟ್ಟರೆ ನಿರ್ವಹಿಸುವುದು ಕಷ್ಟ ಎನ್ನುವುದು ಸದ್ಯ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷದ್ವೀಪ ನಿವಾಸಿ ರಮೀಜ್ ಹೇಳುವ ಮಾತು.
ಪ್ರಸ್ತುತ ಲಕ್ಷದ್ವೀಪ ಆಡಳಿತ ಬೀಚ್‌ಗಳ ಸೌಂದರ್ಯ ವರ್ಧನೆ, ಮೂಲಸೌಕರ್ಯ ಸುಧಾರಣೆ ಕೆಲಸದಲ್ಲಿ ತೊಡಗಿದೆ ಎಂದೂ ಅವರು ತಿಳಿಸುತ್ತಾರೆ.
ಲಕ್ಷದ್ವೀಪಕ್ಕೆ ಹೈಸ್ಪೀಡ್ ನೌಕೆಯಲ್ಲಿ 7-8 ಗಂಟೆಯಲ್ಲೇ ಹೋಗಬಹುದು ಎನ್ನುವುದು ನಿಜಕ್ಕೂ ದೊಡ್ಡ ಅವಕಾಶ. ಯಾವ ರೀತಿ ಮಂಗಳೂರಿನ ಮೂಲಕ ಪ್ರವಾಸಿಗರು ಹೋಗಬಹುದು ಎಂದು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. – ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದ.ಕ.