Advertisement

ಪಂಪ್ ವೆಲ್ ಗೋಡೆ ಮೇಲೆ ಆಕ್ಷೇಪಾರ್ಹ ಬರಹ  ಪ್ರಕರಣ : ಇಬ್ಬರು ಅಪ್ರಾಪ್ತ ಬಾಲಕರ ಬಂಧನ

03:10 PM Apr 27, 2021 | Team Udayavani |

ಮಂಗಳೂರು : ಪಂಪ್ ವೆಲ್ ನಲ್ಲಿ ಇತ್ತೀಚೆಗೆ ಪತ್ತೆಯಾದ ಲಾಕ್ ಡೌನ್ ಬೇಕು ಹಾಗೂ ಇತರ ಕೆಲವು ಆಕ್ಷೇಪಾರ್ಹ ಸಂದೇಶಗಳಿದ್ದ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ.

Advertisement

ಇವರು ನಗರದ ಕಾಲೇಜೊಂದರ ವಿದ್ಯಾರ್ಥಿಗಳು. ಲಾಕ್ ಡೌನ್ ಆದರೆ ಎಕ್ಸಾಮ್ ಮುಂದಕ್ಕೆ ಹೊಗುತ್ತದೆ ಎಂಬ ಉದ್ದೇಶದಿಂದ ಬರೆದಿದ್ದೇವೆ ಎಂಬುದಾಗಿ ಆರೋಪಿಗಳು ಹೇಳಿದ್ದಾರೆ. ಇದರ ಹಿಂದೆ ಬೇರೆ ಯಾರಾದರೂ ಇದ್ಧಾರೆಯೆ ಎಂಬ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಪಂಪವ್ ವೆಲ್ ಗೋಡೆ ಮೇಲೆ ಲಾಕ್ ಡೌನ್ ಬೇಕು ಎಂದು ಇಂಗ್ಲೀಷಿನಲ್ಲಿ ದೊಡ್ಡದಾಗಿ ಕೆಂಪು ಅಕ್ಷರದಲ್ಲಿ ಬರೆದಿದ್ದರು, ಈ ಸಂಬಂಧ ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next