ಮಲ್ಲಿಕಟ್ಟೆ : ಶಾಸಕರನ್ನು ಸೆಳೆಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ನಡೆಸಿರುವ ಸಂಭಾಷಣೆಯ ಆಡಿಯೋದ ಧ್ವನಿ ಪರೀಕ್ಷೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಒತ್ತಾಯಿಸಿದ್ದಾರೆ.
ಯಡಿಯೂರಪ್ಪ ಅವರು ಸಂವಿಧಾನ ವಿರೋಧಿ ಕೃತ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಆಪರೇಶನ್ ಕಮಲ, ಶಾಸಕರ ಖರೀದಿ ಖಂಡಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶದ ಮೇರೆಗೆ ಜಿಲ್ಲಾ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿಭಟನ ಸಭೆಯಲ್ಲಿ ಮಾತನಾಡಿದರು.
ಅಸಾಂವಿಧಾನಿಕ ನಡೆಯ ಮೂಲಕ ಸಮ್ಮಿಶ್ರ ಸರಕಾರವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಯಡಿಯೂರಪ್ಪ ಹಾಗೂ ಬಿಜೆಪಿಯವರು ಮಾಡುತ್ತಿದ್ದಾರೆ. ಶಾಸಕರಿಗೆ ಹಣದ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ಮಾಡಿರುವುದಲ್ಲದೆ, ಸ್ಪೀಕರ್ ಮತ್ತು ನ್ಯಾಯಾ ಧೀಶರೊಂದಿಗೂ ಮಾತುಕತೆ ನಡೆಸಲಾಗಿದೆ ಎಂದು ದೂರವಾಣಿ ಕರೆ ಮಾಡಿ ಶಾಸಕರಿಗೆ ಹೇಳುತ್ತಾರೆ. ಆದರೆ ಮುಖ್ಯಮಂತ್ರಿಯವರು ಆಡಿಯೋ ಬಿಡುಗಡೆ ಮಾಡಿದ ಬಳಿಕ ಆಡಿಯೋದಲ್ಲಿರುವ ಧ್ವನಿ ತಮ್ಮದಲ್ಲ ಎನ್ನುತ್ತಿದ್ದು, ಧ್ವನಿ ಪರೀಕ್ಷೆ ನಡೆಸಿದರೆ ಯಾರದ್ದು ಎಂದು ತಿಳಿಯುತ್ತದೆ ಎಂದರು.
ಅಧಿಕಾರದಾಹ ಯಾಕೆ?
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಬಿಜೆಪಿಯವರದ್ದು ನಾಚಿಕೆಗೇಡಿನ ರಾಜ ಕಾರಣ. ಯಡಿಯೂರಪ್ಪ ಅವರು ಕುದುರೆ ವ್ಯಾಪಾರಕ್ಕೆ ಮುಂದಾಗಿರುವುದನ್ನು ನೋಡಿ ದರೆ ಅವರ ರಾಜಕೀಯ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದು ಗೊತ್ತಾಗುತ್ತದೆ. ಬಿಜೆಪಿ ಯವರಿಗೆ ಇಂತಹ ಅಧಿಕಾರದಾಹ ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅವರು ಟೀಕಿಸಿದರು.
ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯಕುಮಾರ ಸೊರಕೆ, ಮಾಜಿ ಶಾಸಕ ಜೆ.ಆರ್. ಲೋಬೋ, ಸಂದೀಪ್, ಯು.ಆರ್. ಸಭಾಪತಿ, ಜಿ.ಎ. ಬಾವಾ, ಟಿ.ಎಂ. ಶಹೀದ್, ಸಾಹುಲ್ ಹಮೀದ್, ಸದಾಶಿವ ಉಳ್ಳಾಲ, ವಿಶ್ವಾಸ್‌ದಾಸ್, ಟಿ.ಕೆ. ಸುಧೀರ್, ಅಪ್ಪಿ, ಆಶಾ ಡಿ’ಸಿಲ್ವ, ಪುರುಷೋತ್ತಮ ಚಿತ್ರಾಪುರ, ಜೆಸಿಂತಾ ಆಲ್ಫ್ರೆಡ್, ಜಯ ಶೀಲ ಅಡ್ಯಂತಾಯ, ಮಿಥುನ್ ರೈ ಮೊದಲಾದವರಿದ್ದರು.