Advertisement

‘ಅಭಿವ್ಯಕ್ತಿಸ್ವಾತಂತ್ರ್ಯ ಎತ್ತಿಹಿಡಿಯುವಲ್ಲಿ ಮಾಧ್ಯಮಗಳ ಪಾತ್ರಮುಖ್ಯ`

05:19 AM Jan 06, 2019 | Team Udayavani |

ಉರ್ವ: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ ಬದ್ಧತೆಯೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಧ್ವನಿಯಾಗುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಪೊಲೀಸ್‌ ಆಯುಕ್ತ ಟಿ. ಆರ್‌. ಸುರೇಶ್‌ ಹೇಳಿದರು.

Advertisement

ಮಂಗಳೂರು ಪ್ರಸ್‌ ಕ್ಲಬ್‌, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್‌ನ ಆಶ್ರಯದಲ್ಲಿ ಉರ್ವ ಚರ್ಚ್‌ ಸಭಾಂಗಣದಲ್ಲಿ ನಡೆದ ಪ್ರಸ್‌ಕ್ಲಬ್‌ ದಿನಾಚರಣೆಯಲ್ಲಿ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಶನಿವಾರ ಮಾತನಾಡಿದರು.

ಸಮಾಜದ ಆಗುಹೋಗುಗಳನ್ನು ಸುದ್ದಿ ಮಾಡುವ ಕೆಲಸದಲ್ಲಿ ದಿನವಿಡೀ ತೊಡಗಿಸಿಕೊಳ್ಳುವ ಮಾಧ್ಯಮದ ಮಂದಿಗೆ ಬಿಡುವೆಂಬುದು ವಿರಳ. ಪ್ರತಿಭಾ ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆ ಒದಗಿಸುತ್ತದೆ ಎಂದವರು ಅಭಿಪ್ರಾಯಪಟ್ಟರು.

ಉದ್ಘಾಟಿಸಿದ ಸಂಗೀತ ನಿರ್ದೇಶಕ ಗುರುಕಿರಣ್‌ ಮಾತನಾಡಿ, ಸಾಧನೆ ಯ ಛಲದೊಂದಿಗೆ ಮುನ್ನುಗ್ಗಿ ಸ್ವಾಭಿಮಾನ ದಿಂದಲೇ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಮಹಾಲಿಂಗ ನಾಯ್ಕ ಅವರನ್ನು ಗುರುತಿಸಿ ರುವುದು ಶ್ಲಾಘನೀಯ ಎಂದರು.

ಮಂಗಳೂರು ಪ್ರಸ್‌ ಕ್ಲಬ್‌ ಅಧ್ಯಕ್ಷ ಅನ್ನು ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪತ್ರಕರ್ತ ಮುಹಮ್ಮದ್‌ ಆರಿಫ್ ಪಡುಬಿದ್ರಿ ಪ್ರಶಸ್ತಿ ವಿಜೇತ ಅಮೈ ಮಹಾಲಿಂಗ ನಾಯ್ಕರ ಪರಿಚಯ ನೀಡಿದರು.

Advertisement

ಮನೋಹರ್‌ ಪ್ರಸಾದ್‌, ಜಗನ್ನಾಥ ಶೆಟ್ಟಿ ಬಾಳ, ದಿನಕರ ಇಂದಾಜೆ, ಡಾ| ಸೀತಾಲಕ್ಷ್ಮಿ ಕರ್ಕಿಕೋಡಿ, ದಯಾನಂದ ಕುಕ್ಕಾಜೆ, ಗೋವಿಂದರಾಜ ಜವಳಿ, ಜಿತೇಂದ್ರ ಕುಂದೇಶ್ವರ, ಮೌನೇಶ್‌ ವಿಶ್ವ ಕರ್ಮ, ಅಪುಲ್‌ ಇರಾ, ಲಕ್ಷ್ಮೀ ಮಚ್ಚಿನ, ಜಗದೀಶ್ಚಂದ್ರ ಅಂಚನ್‌ ಅವರನ್ನು ಸಮ್ಮಾನಿ ಸಲಾಯಿತು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ, ಪತ್ರಿಕಾ ಭವನ ಅಧ್ಯಕ್ಷ ಕೆ. ಆನಂದ ಶೆಟ್ಟಿ ಉಪಸ್ಥಿತರಿದ್ದರು.

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರ ಸ್ಕಾರವನ್ನು ನೀಡಲಾಯಿತು. ಆರ್‌. ರಾಮಕೃಷ್ಣ ಸಾಧಕರಿಗೆ ಸಮ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿರ್ವಹಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿ, ರವೀಂದ್ರ ಶೆಟ್ಟಿ ನಿರೂಪಿಸಿದರು.

ಪತ್ರಕರ್ತ ದಯಾನಂದ ಕುಡುಪು ಮತ್ತು ಬಳಗದಿಂದ ಸ್ಯಾಕ್ಯೋಫೋನ್‌ ವಾದನ ನಡೆಯಿತು. ಆತ್ಮಭೂಷಣ್‌ ಕಾರ್ಯಕ್ರಮ ನಿರ್ವಹಿಸಿದರು. ನರಕಾಸುರ ಮೋಕ್ಷ , ಮೈಂದ -ದ್ವಿವಿದ ಕಾಳಗ ಯಕ್ಷಗಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನೀರಿಲ್ಲದ ಜಾಗಕ್ಕೆ ಬಂದು ನೀರು ಕುಡಿಯುವಾಗ ಸಮಾಧಾನ 
ಪ್ರಸ್‌ಕ್ಲಬ್‌ 2018ನೇ ಸಾಲಿನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ,’ ಗುಡ್ಡದಲ್ಲಿ ನಾನು ನೀರಿಗಾಗಿ ಸುರಂಗ ಕೊರೆಯುವಾಗ ಅನೇಕರು ಮೂದಲಿಸಿದ್ದರು. ಆದರೆ ಆ ನೀರಿಲ್ಲದ ಪ್ರದೇಶಕ್ಕೆ ಬಂದವರು ನೀರು ಕುಡಿದು ಹೋದಾಗ ನನಗಾಗುವ ಸಂತೃಪ್ತಿ, ಸಾರ್ಥಕ್ಯ ಭಾವ ಹಿರಿದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next