Advertisement
ಶನಿವಾರ ಸಂಜೆಯಿಂದಲೇ ಪೊಲೀ ಸರು ಕಾರ್ಯ ನಿರತರಾಗಿದ್ದು, ಹೊಸದಿಲ್ಲಿ ಯಿಂದ ಆಗಮಿಸಿರುವ ಎಸ್‌ಪಿಜಿ ಅಧಿ ಕಾರಿಗಳು ರೋಡ್ ಶೋ ಸಾಗುವ ಮಾರ್ಗದ ಮೇಲೆ ನಿಗಾ ಇಟ್ಟಿದ್ದಾರೆ. ರ್‍ಯಾಲಿ ನಡೆಯುವ ರಸ್ತೆಯುದ್ದಕ್ಕೂ 25ಕ್ಕೂ ಅಧಿಕ ಸಿಸಿ ಟಿವಿ ಕೆಮರಾ ಅಳವಡಿಸಲಾಗಿದೆ.
Related Articles
ಪ್ರಧಾನಿ ಮೋದಿಯವರ ರೋಡ್ ಶೋ ರೋಡ್ ಶೋ ವೇಳೆ ಎತ್ತರದ ಆಯಕಟ್ಟಿನ ಕಟ್ಟಡಗಳಲ್ಲಿ ಎಸ್‌ಪಿಜಿ ಯ ಸ್ನೆ„ಪರ್‌ಗಳು ಹದ್ದಿನ ಕಣ್ಣು ಇರಿಸ ಲಿದ್ದಾರೆ. ಹಲವು ನೂರು ಮೀಟರ್‌ಗಳಷ್ಟು ದೂರ ಪ್ರಬಲ ಫೋಕಸ್ ಹೊಂದಿರುವ ಲೈಟ್‌ಗಳನ್ನು ಹಾಕಿ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳಲಾಗುತ್ತದೆ.
Advertisement
ಯಾರೆಲ್ಲ ಇರುತ್ತಾರೆ?ಮೋದಿ ಚೆನ್ನೈಯಲ್ಲಿ ರೋಡ್ ಶೋ ನಡೆಸಿದ ರೀತಿಯ ಟೆಂಪೋ ಮಾದರಿಯ ವಾಹನವನ್ನೇ ಮಂಗಳೂರಿಗೂ ತರಿಸಲಾಗಿದೆ. ಇದರಲ್ಲಿ ಮೋದಿಯವರಲ್ಲದೆ ಅಭ್ಯರ್ಥಿಗಳಾದ ಕ್ಯಾ| ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಅವರಿಗೆ ಅವಕಾಶವನ್ನು ಕೋರಿ ಎಸ್‌ಪಿಜಿಗೆ ಪತ್ರ ಬರೆಯಲಾಗಿದ್ದು, ಅಂತಿಮ ಅನುಮೋದನೆ ಸಿಗಬೇಕಿದೆ. ಅಣಕು ರೋಡ್ ಶೋ
ಶನಿವಾರ ರಾತ್ರಿ ವೇಳೆ ಎಸ್‌ಪಿಜಿ ನೇತೃತ್ವದಲ್ಲಿ ಪೊಲೀಸರು ರಿಹರ್ಸಲ್, ಅಣಕು ರೋಡ್‌ಶೋ ನಡೆಸಿದರು. ಈ ಸಂದರ್ಭ ಕೆಂಜಾರು ವಿಮಾನ ನಿಲ್ದಾಣದಿಂದ ಮೋದಿಯವರು ಆಗಮಿಸಿ ನವಭಾರತ ವೃತ್ತದ ವರೆಗೆ ರೋಡ್ ಶೋ ನಡೆಸುವುದನ್ನು ರಿಯಲ್ ಟೈಂ ರೀತಿಯಲ್ಲಿ ನಡೆಸಲಾಯಿತು. ಪ್ರಧಾನಿ ಲೇಡಿಹಿಲ್ ಗೆ ಆಗಮಿಸುವ ಕೊಟ್ಟಾರ, ಅಶೋಕನಗರ ಮಾರ್ಗ ದಲ್ಲಿನ ಹಂಪ್ಸ್‌ಗಳನ್ನು ತೆಗೆಯಲಾಗಿದೆ. ಜತೆಗೆ ರೋಡ್ ಶೋ ಸಾಗುವ ರಸ್ತೆಯ ಬದಿಯಲ್ಲಿನ ತ್ಯಾಜ್ಯಗಳನ್ನು ತೆಗೆದು ಸ್ವತ್ಛಗೊಳಿಸಲಾಗಿದೆ. ಬ್ಯಾನರ್‌ಗಳು, ಇಂಟರ್‌ನೆಟ್ ಕೇಬಲ್‌ಗಳನ್ನೂ ತೆರವುಗೊಳಿಸಲಾಗಿದೆ. ಅಲ್ಲಲ್ಲಿ ಸಾಂಸ್ಕೃತಿಕ ಪ್ರದರ್ಶನಗಳಿರಲಿದ್ದು, ಅದಕ್ಕೂ ಭರದ ಸಿದ್ಧತೆ ನಡೆದಿದೆ. ಹೀಗಿರಲಿದೆ ಪ್ರಧಾನಿ ರೋಡ್ ಶೋ
– ವಿಶೇಷ ವಿಮಾನದಲ್ಲಿ ಮಂಗ ಳೂರು ವಿಮಾನ ನಿಲ್ದಾಣಕ್ಕೆ ಆಗಮನ
– ಕೆಂಜಾರಿನಿಂದ ನೇರವಾಗಿ ಲೇಡಿ ಹಿಲ್ ನಾರಾಯಣ ಗುರು ವೃತ್ತಕ್ಕೆ
– ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ
– ರೋಡ್ ಶೋ ನಡೆಸುವ ವಿಶೇಷ ವಾಹನಕ್ಕೆ ಮೋದಿ
-ಸದ್ಯದ ವೇಳಾಪಟ್ಟಿಯಂತೆ ರಾತ್ರಿ 7.45ಕ್ಕೆ ರೋಡ್ ಶೋ ಆರಂಭ
– ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್ ಮೂಲಕ ರೋಡ್‌ಶೋ
– ನವಭಾರತ ವೃತ್ತದಲ್ಲಿ ಸಮಾಪ್ತಿ
-ಅಲ್ಲಿಂದ ಪ್ರಧಾನಿ ಮಂಗಳೂರು ವಿಮಾನ ನಿಲ್ದಾಣಕ್ಕೆ ನಿರ್ಗಮನ
– ವಿಶೇಷ ವಿಮಾನ ಮೂಲಕ ಕೊಚ್ಚಿಗೆ ಪ್ರಯಾಣ ನರೇಂದ್ರ ಮೋದಿ ಮಂಗಳೂರು ಭೇಟಿಗಳು
-2013ರಲ್ಲಿ ಗುಜರಾತ್ ಸಿಎಂ ಆಗಿದ್ದ ಮೋದಿ ಯವರು ಆಗ ವಿಧಾನಸಭಾ ಚುನಾವಣ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ್ದರು.
-2014ರಲ್ಲಿ ಸಂಸತ್ ಚುನಾವಣ ಪ್ರಚಾರಕ್ಕೂ ಮೋದಿ ಆಗಮಿಸಿ, ಸಮಾವೇಶದಲ್ಲಿ ಮಾತನಾಡಿದ್ದರು.
-ಪ್ರಧಾನಿಯಾದ ಬಳಿಕ 2016ರಲ್ಲಿ ಕೇರಳದ ಕೊಚ್ಚಿಗೆ ತೆರಳುವ ಹಾದಿಯಲ್ಲಿ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾರ್ಯಕರ್ತರನ್ನು ಭೇಟಿಯಾಗಿದ್ದರು.
-2017ರಲ್ಲಿ ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಸಮಾವೇಶ ದಲ್ಲಿ ಭಾಗವಹಿಸಲು ಆಗಮಿಸಿದ್ದರು. ಆಗ ಕೂಡ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ತೆರಳಿದ್ದರು.
-2017ರಲ್ಲಿ ಮೋದಿ ಲಕ್ಷದ್ವೀಪಕ್ಕೆ ಹೋಗುವುದಕ್ಕಾಗಿ ಒಂದು ರಾತ್ರಿ ಮಂಗಳೂರಿನಲ್ಲಿ ಉಳಿದುಕೊಂಡಿದ್ದರು. ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವುದು ಮಧ್ಯರಾತ್ರಿ ಆಗಿತ್ತು. ಅಲ್ಲಿ ಭಾರೀ ಜನ ಸೇರಿತ್ತು.
– 2018ರ ಅಸೆಂಬ್ಲಿ ಚುನಾವಣ ಪ್ರಚಾರಕ್ಕಾಗಿ ಬಂದಿದ್ದ ಮೋದಿ ಕೇಂದ್ರ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು.
-2019ರಲ್ಲಿ ಚುನಾವಣ ಪ್ರಚಾರ ಸಮಾವೇಶಕ್ಕೆ ಬಂದಿದ್ದ ಮೋದಿ, ಕೇಂದ್ರ ಮೈದಾನದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಹಂಪನಕಟ್ಟೆ ಬಳಿ ಭರ್ಜರಿ ಜನ ಸೇರಿತ್ತು. ಜನರ ಉತ್ಸಾಹ ನೋಡಿ ಮೋದಿ ಕಾರಿನ ಬಾಗಿಲು ತೆರೆದು ಜನರ ಕೈ ಕುಲುಕಿದ್ದರು.
-2022ರಲ್ಲಿ ವಿವಿಧ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆಗೆಂದು ಮಂಗಳೂರಿಗೆ ಆಗಮಿಸಿದ್ದರು.
– 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪ್ರಚಾರ ಸಭೆಗಾಗಿ ಮೂಲ್ಕಿಗೆ ಆಗಮಿಸಿದ್ದರು.