Advertisement

ಚರಿತ್ರೆ ಹೇಳುವ ಚಿತ್ರಗಳ ಪ್ರದರ್ಶನ

11:57 AM Dec 23, 2018 | Team Udayavani |

ಮಹಾನಗರ : ಕರಾವಳಿ ಉತ್ಸವದ ಅಂಗವಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಥಿಯೋಲಾಜಿಕಲ್‌ ಕಾಲೇಜು ಸಹಕಾರದೊಂದಿಗೆ ನಗದರ ಕದ್ರಿ ಉದ್ಯಾನವನದಲ್ಲಿ ಶನಿವಾರದಿಂದ ಮೂರುದಿನಗಳ ಕಾಲ ‘ಚರಿತ್ರೆ ಹೇಳುವ ಚಿತ್ರಗಳು’ ಚಿತ್ರಕಲಾ ಪ್ರದರ್ಶನ ಆರಂಭಗೊಂಡಿದೆ.

Advertisement

ಈ ಚಿತ್ರಕಲಾ ಪ್ರದರ್ಶನದಲ್ಲಿನ ಸ್ವಾತಂತ್ರ್ಯ ಪೂರ್ವ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದ್ದು, ಸ್ವಾತಂತ್ರ್ಯ ಪೂರ್ವ ಸಾಹಿತ್ಯಕ್ಕೆ ಕರಾವಳಿಯ ಕೊಡುಗೆಗಳನ್ನು ಬಿಂಬಿಸುವ ಚಿತ್ರಗಳು ಇರಲಿವೆ. ವಿವಿಧ ಛಾಯಾಗ್ರಾಹಕರು ಕ್ಲಿಕ್ಕಿಸಿದ ಉತ್ತಮ ಫೋಟೊಗಳನ್ನು ಪ್ರದರ್ಶನಕ್ಕಿಡಲಾಗಿವೆ.

1861-1890ರ ಅವಧಿಯ ಲಾಲ್‌ಬಾಗ್‌, ಹೂವಿನ ಮಾರುಕಟ್ಟೆ, ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ, ಮಂಗಳೂರು ನಗರದ ಬೀದಿ, ಕದ್ರಿ ಮಂಜುನಾಥ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಮಂಗಳೂರು ವಿ.ವಿ. ಕಾಲೇಜು, ಮಂಗಳೂರು ಜೆಟ್ಟಿ, 1901-1920 ಅವಧಿಯ ಸುಲ್ತಾನ್‌ ಬತ್ತೇರಿ, 1927-1944ರ ಅವಧಿಯ ಮಂಗಳೂರಿನ ಮೊದಲ ಬಸ್‌, ಕೂಳೂರು ಕಟ್ಟೆ ಚೆಕ್‌ಪೋಸ್ಟ್‌, 1858-1890ರ ಅವಧಿಯಲ್ಲಿದ್ದ ಅಂಚೆ ಕಚೇರಿ ಸಹಿತ ಮತ್ತಿತರ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next