Advertisement
ಕೆಎಸ್‌ಆರ್‌ಟಿಸಿಯ ಆಡಳಿತ ನಿರ್ದೇಶಕರು ಮಂಗಳೂರು ಕೆಎಸ್‌ಆರ್‌ಟಿ ಬಸ್ ನಿಲ್ದಾಣ ಹಾಗೂ ಸ್ಟೇಟ್‌ಬ್ಯಾಂಕ್‌ನಿಂದ ಬಸ್‌ಗಳ ಓಡಾಟಕ್ಕೆ ಪರವಾನಿಗೆ ನೀಡುವಂತೆ ಕಳೆದ ಹಲವು ವರ್ಷಗಳಿಂದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಹಲವು ಕಾರಣಗಳಿಂದ ಈ ಬೇಡಿಕೆ ಇನ್ನೂ ಈಡೇರಿಲ್ಲ. ಈ ಕುರಿತು ಸಾರ್ವಜನಿಕರು ಕೂಡ ಸಂಬಂಧಪಟ್ಟವರನ್ನು ಆಗ್ರಹಿಸು ತ್ತಲೇ ಬಂದಿದ್ದಾರೆ. ಆರಂಭದಲ್ಲಿ ಕೆಎಸ್‌ಆರ್‌ಟಿಸಿಯು ಮಂಗಳೂರು ನಿಲ್ದಾಣದಿಂದ ಕಾರ್ಕಳಕ್ಕೆ ಬಸ್ ಓಡಿಸಲು ಪರವಾನಿಗೆ ನೀಡುವಂತೆ 2014ರ ಎ. 4ರಂದು ಅರ್ಜಿ ಸಲ್ಲಿಸಿತ್ತು. ಮೇ 9ರಂದು ನಡೆದ ಸಭೆಯಲ್ಲಿ ವಿಷಯ ವನ್ನು ಮುಂದೂಡಲಾಗಿತ್ತು. ಪ್ರಸ್ತುತ ಅ. 31ರಂದು ನಡೆಯುವ ಸಭೆಯಲ್ಲಿ ಪುನರ್ ಪರಿಶೀಲನೆಗೊಳ್ಳುವ ನಿರೀಕ್ಷೆ ಇದೆ. ಕೆಎಸ್‌ಆರ್‌ಟಿಸಿಯು ಮಂಗಳೂರು ನಿಲ್ದಾಣದಿಂದ 8 ಹಾಗೂ ಸ್ಟೇಟ್‌ಬ್ಯಾಂಕ್‌ನಿಂದ 12 ಬಸ್‌ಗಳನ್ನು ಕಾರ್ಕಳಕ್ಕೆ ಓಡಿಸಲು ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದೆ. ಸಭೆಯಲ್ಲಿ 20 ಬಸ್‌ಗಳ ಪರವಾನಿಗೆ ವಿಚಾರವೂ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.
ಕೆಎಸ್‌ಆರ್‌ಟಿಸಿಯು ವಿವಿಧ ರೂಟ್‌ಗಳಲ್ಲಿ ಬಸ್ ಓಡಿಸುವ ಕುರಿತು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ. ಪ್ರಾಧಿಕಾರದ ಸಭೆಯಲ್ಲಿ ಚರ್ಚೆಯಾದ ಬಳಿಕವೇ ಪರವಾನಿಗೆಯ ಕುರಿತು ಚಿಂತಿಸಲಾಗುತ್ತದೆ. ಮೂಡಬಿದಿರೆ, ಕಾರ್ಕಳ ಸೇರಿದಂತೆ ರೆಹಮತ್‌ನಗರ, ಅಮ್ಮೆಂಬಳ ದರ್ಗಾ, ಮುಡಿಪು ರಸ್ತೆಗಳಲ್ಲೂ ಬಸ್ ಓಡಾಟಕ್ಕೆ ಪರವಾನಿಗೆಗೆ ಕೆಎಸ್‌ಆರ್‌ಟಿಸಿ ಅರ್ಜಿ ಸಲ್ಲಿಸಿದೆ.
– ಜಿ.ಎಸ್. ಹೆಗಡೆ, ಕಾರ್ಯದರ್ಶಿ, ಆರ್‌ಟಿಒ.
Related Articles
ಮಂಗಳೂರಿನಿಂದ ಮೂಡಬಿದಿರೆ-ಕಾರ್ಕಳಕ್ಕೆ ಬಸ್ ಓಡಾಟದ ಪರವಾನಿಗೆ ಕುರಿತು ಹಲವು ವರ್ಷಗಳಿಂದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುತ್ತಿದೆ. ಪ್ರಸ್ತುತ 20 ಬಸ್‌ಗಳ ಓಡಾಟಕ್ಕೆ ಅನುಮತಿ ಸಿಕ್ಕಿದರೆ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ಸಿದ್ಧವಿದೆ.
ದೀಪಕ್‌ಕುಮಾರ್, ವಿಭಾಗೀಯ ನಿಯಂತ್ರಕರು, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ
Advertisement
ಕಿರಣ್ ಸರಪಾಡಿ