Advertisement

ಇಲ್ಲಿ ನೆಮ್ಮದಿ ಹಾಳುಮಾಡಿದ್ದು ಸಾಲದೇ ಅಲ್ಲಿಗೆ ಹೋಗಿದ್ದಾರೆ: ಕಲ್ಲಡ್ಕ ವಿರುದ್ಧ ಖಾದರ್ ಕಿಡಿ

04:02 PM Apr 08, 2020 | Naveen |

ಮಂಗಳೂರು: ದೇವರ ಪ್ರತಿಮೆಯನ್ನು ನಿರ್ಮಿಸಲು ಅಡ್ಡಿ ಉಂಟುಮಾಡುವಂತವರ ಮನಸ್ಥಿತಿ ಕೀಳುಮಟ್ಟದ್ದಾಗಿದೆ ಮತ್ತು ಕನಕಪುರದಲ್ಲಿ ಏಸು ಕ್ರಿಸ್ತನ ಪ್ರತಿಮೆಯನ್ನು ನಿರ್ಮಾಣ ಮಾಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರು ಈ ಮೂಲಕ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದಾರೆ ಎಂದು ಮಾಜೀ ಸಚಿವ ಹಾಗೂ ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಅವರು ಕಿಡಿಕಾರಿದ್ದಾರೆ.

Advertisement

ಏಸು ಪ್ರತಿಮೆ ವಿರೋಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ‘ಕನಕಪುರ ಚಲೋ’ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಾದರ್ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಅಲ್ಲಿನ ಸೋದರತೆ ಹಾಳು ಮಾಡುವ ಉದ್ದೇಶದಿಂದಲೇ ಹೋಗಿದ್ದಾರೆ. ಅದಿಲ್ಲವಾದರೆ ಇಲ್ಲಿಂದ ಅಲ್ಲಿಗೆ ಹೋಗಿ ಭಾಷಣ ಮಾಡುವ ಅಗತ್ಯತೆ ಏನಿತ್ತು? ದಕ್ಷಿಣ ಕನ್ನಡ ಜಿಲ್ಲೆಯವರ ನೆಮ್ಮದಿಯನ್ನು ಇವರು ಈಗಾಗಲೇ ಹಾಳು ಮಾಡಿದ್ದಾರೆ. ಕನಕಪುರ, ಬೆಂಗಳೂರಿನವರಾದರೂ ಶಾಂತಿ-ನೆಮ್ಮದಿಯಿಂದ ಇರಲಿ ಎಂದರು.

ಶಾಂತಿ ಸಂದೇಶ ಸಾರಲು ಏಸು ಪ್ರತಿಮೆ ನಿರ್ಮಿಸಲಾಗುತ್ತಿದೆ. ಕ್ರೈಸ್ತ ಸಮುದಾಯದವರ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಸಮಾಜಕ್ಕೆ ಪೂರಕವಾಗಿದೆ. ಕ್ರೈಸ್ತ ಸಮುದಾಯವರು ಯಾವುದನ್ನೂ ಮಿಸ್ ಯೂಸ್ ಮಾಡೋದಿಲ್ಲ. ದೇಶಭಕ್ತಿ ಎಂದು ಹೇಳುವವರು ನಿರ್ಗತಿಕರನ್ನು ನೋಡೋದಿಲ್ಲ ಎಂದು ಖಾದರ್ ಅವರು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಹೆಸರೆತ್ತದೆ ಟೀಕಾಪ್ರಹಾರ ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next