Advertisement

ಮಂಗಳೂರು-ಮಣಿಪಾಲ : ಎಸಿ ವೋಲ್ವೊ ಬಸ್‌ ಇನ್ನು ನೆನಪು ಮಾತ್ರ

12:46 AM Sep 25, 2021 | Team Udayavani |

ಉಡುಪಿ: ಸುಮಾರು 11 ವರ್ಷಗಳ ಹಿಂದೆ ಮಂಗಳೂರು – ಮಣಿಪಾಲ ನಡುವೆ, ಬಳಿಕ ಭಟ್ಕಳ- ಮಂಗಳೂರು, ಮಣಿಪಾಲ- ಕಾಸರಗೋಡು ನಡುವೆ ಆರಂಭಗೊಂಡ ಕೆಎಸ್ಸಾರ್ಟಿಸಿ ಹವಾನಿಯಂತ್ರಿತ ವೋಲ್ವೊ ಬಸ್‌ ಇನ್ನು ಆರಂಭಗೊಳ್ಳುವ ಲಕ್ಷಣಗಳಿಲ್ಲ.

Advertisement

ಮಂಗಳೂರು- ಮಣಿಪಾಲ ಮತ್ತು ಭಟ್ಕಳ- ಮಂಗಳೂರು ನಡುವಿನ ವೋಲ್ವೊಗೆ ಜನರ ಬೇಡಿಕೆಯೂ ಹೆಚ್ಚಿಗೆ ಇತ್ತು. 2020ರ ಕೊರೊನಾದ ಮೊದಲ ಅಲೆಯ ವೇಳೆ  ಮತ್ತು 2021ರ 2ನೇ ಅಲೆಯ ವೇಳೆ ನಿಲುಗಡೆಗೊಂಡ ವೋಲ್ವೊ ಇನ್ನು ಸಂಚರಿಸುವುದು ಸಾಧ್ಯವಿಲ್ಲ ಎಂಬ ಸ್ಥಿತಿ ಇದೆ.

2020 ಮತ್ತು 2021ರ ಸಾಲಿನಲ್ಲಿ ಕೊರೊನಾ ಅಲೆ ಮುಗಿದ ಬಳಿಕ ನಾನ್‌ ಎಸಿ ಬಸ್ಸನ್ನು ಮಣಿಪಾಲ ಮಂಗಳೂರು ಮಾರ್ಗದಲ್ಲಿ ಓಡಿಸಿದರೂ ಪ್ರಯಾಣಿಕರ ಬೇಡಿಕೆ ತಕ್ಕಷ್ಟು ಇರಲಿಲ್ಲ. ಹೀಗಾಗಿ ಟೋಲ್‌ ಶುಲ್ಕ ಕಟ್ಟುವುದೂ ಕಷ್ಟವಾಯಿತು ಎಂದು ತಿಳಿದುಬಂದಿದೆ. ಈ ಮಾರ್ಗದಲ್ಲಿ ಎರಡು ಟೋಲ್‌ ಗೇಟ್‌ಗಳಿದ್ದು ಪ್ರತಿ ಟ್ರಿಪ್‌ಗೆ 600 ರೂ. ಶುಲ್ಕ ಕಟ್ಟಬೇಕಿತ್ತು.

ಬಸ್ಗಳು ಗುಜರಿಗೆ?:

ಈ ಬಸ್‌ಗಳು ಈಗ ಗುಜರಿಗೆ ಹೋಗಲು ಸಿದ್ಧತೆ ನಡೆಸಿದಂತಿವೆ. ಬಸ್‌ 10 ಲಕ್ಷ ಕಿ.ಮೀ. ಓಡಿದರೆ ಅದನ್ನು ಸಾðಪ್‌ಗೆ ಬಳಸುತ್ತಾರೆ. ನಿರ್ವಹಣ ವೆಚ್ಚ ಮತ್ತು ಆದಾಯವನ್ನೂ ಇಲ್ಲಿ ಪರಿಗಣಿಸಲಾಗುತ್ತದೆ.

Advertisement

ಮಣಿಪಾಲ – ಮಂಗಳೂರು  ನಡುವೆ ಓಡಿದ 10 ಬಸ್‌ಗಳು ಡಿಪೋದಲ್ಲಿದ್ದು ಸಾðಪ್‌ಗೆ ಹಾಕಲು ಅನುಮತಿ ಸಿಕ್ಕಿದೆ ಎನ್ನಲಾಗುತ್ತಿದೆ.  ಹಳೆಯ ಬಸ್‌ಗಳು ಸ್ಟಾಪ್‌ ಆದರೆ ಹೊಸ ಬಸ್‌ಗಳನ್ನು ಖರೀದಿಸಿ ಬಸ್‌ ಓಡಿಸುವುದೂ ಕಷ್ಟ. ಎರಡು ವರ್ಷ ಕೊರೊನಾ ಸೋಂಕು ನೀಡಿದ ಆರ್ಥಿಕ ಹೊಡೆತದಿಂದಾಗಿ ಹೊಸ ಸಿಟಿ ವೋಲ್ವೊ ಬಸ್‌ ಖರೀದಿ ಅಸಂಭವ ಎನ್ನಲಾಗುತ್ತಿದೆ. ಇನ್ನೇನಾ ದರೂ ಭವಿಷ್ಯದಲ್ಲಿ ಆಶಾವಾದ ಮೂಡಿಸುವುದಿದ್ದರೆ ರಾಜ್ಯದ ರಾಜಧಾನಿಯಲ್ಲಿ ಸದ್ದು ಮಾಡಿದ ಎಲೆಕ್ಟ್ರಿಕ್‌ ಬಸ್‌ಗಳು ಮಾತ್ರ.

2010ರ ಮಾರ್ಚ್‌ 27ರಂದು ಮಂಗಳೂರು ಮತ್ತು ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣ ಪಾಲೆಮಾರ್‌ ಮತ್ತು ಡಾ| ವಿ.ಎಸ್‌. ಆಚಾರ್ಯ ಅವರು ವೋಲ್ವೊ ಬಸ್‌ ಸಂಚಾರವನ್ನು ಉದ್ಘಾಟಿಸಿದ್ದರು.

ಹವಾನಿಯಂತ್ರಿತ ವೋಲ್ವೊ ಬಸ್‌ ಪ್ರತೀ ಲೀಟರ್‌ಗೆ 2.5 ಕಿ.ಮೀ. ಮಾತ್ರ ಓಡುತ್ತವೆ. ಬೇರೆ ಬಸ್‌ಗಳು 5ರಿಂದ 5.5 ಕಿ.ಮೀ. ಓಡುತ್ತವೆ. ಎಸಿ ಬಸ್‌ಗಳಿಗೆ ಡೀಸೆಲ್‌ ಹೆಚ್ಚಿಗೆ ಬೇಕು. ಒಂದೊಂದು ರೂಟಿನಲ್ಲಿಯೂ ದಿನಕ್ಕೆ 2 ಲ.ರೂ. ನಷ್ಟವಾಗುತ್ತಿತ್ತು. ಪ್ರತೀ ಕಿ.ಮೀ. ವೆಚ್ಚ 60-65 ರೂ., ಆದಾಯ 30-32 ರೂ., ನಷ್ಟ 28-30 ರೂ. ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ.

ಈಗ ಬಸ್‌ ಸಂಚಾರ ಆರಂಭವಾಗಿದ್ದರೂ ಜನ ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ಜನಸಂಚಾರ ಎಂದಿನಂತೆ ಆದ ಬಳಿಕ ಕೆಎಸ್ಸಾರ್ಟಿಸಿ ಮತ್ತು ಕಂದಾಯ ಇಲಾಖೆ ಡಿಸಿಯವರು ಸಭೆ ನಡೆಸಿ ಜಿಲ್ಲಾ ಕೇಂದ್ರದಿಂದ ಬಸ್‌ಗಳನ್ನು ಓಡಿಸಲು ಕ್ರಮ ಕೈಗೊಳ್ಳುತ್ತಾರೆ. ವಿ. ಸುನಿಲ್ ಕುಮಾರ್,ರಾಜ್ಯ ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next