ಮಂಗಳೂರು: ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, 16 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ವ್ಯಕ್ತಿಯನ್ನು ಮುರುಡೇಶ್ವರ ಮೂಲದ ಮೊಹಮ್ಮದ್ ಅವಾನ್ ಎಂದು ಗುರುತಿಸಲಾಗಿದೆ.
ದುಬೈನಿಂದ ಏರ್ ಇಂಡಿಯಾ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಆರೋಪಿ ಮೊಹಮ್ಮದ್ ಅವಾನ್, ಚಿನ್ನವನ್ನು ಟ್ರಾಲಿ ಬ್ಯಾಗ್ ನ ಬೀಡಿಂಗ್ ವೈರ್ ನಲ್ಲಿ ಅವಿತಿಟ್ಟಿದ್ದ. ಖಚಿತ ಮಾಹಿತಿ ಪಡೆದು ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳಿಗೆ 350.00 ಗ್ರಾಂ ತೂಕದ 16,52,000 ರೂ ಮೌಲ್ಯದ ಚಿನ್ನ ದೊರಕಿದೆ.
ಇದನ್ನೂ ಓದಿ: ಉಳ್ಳಾಲ: ಮಹಿಳೆಯ ಸರ ಎಳೆದು ಪರಾರಿ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು
ಇದನ್ನೂ ಓದಿ: ಮಂಜನಾಡಿ: ವಿಷ್ಣುಮೂರ್ತಿ ಜನಾರ್ಧನ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ನಗದು ದೋಚಿದ ಕಳ್ಳರು