ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ರಸ್ತೆ ಬದಿಯ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಹಂತ ಹಂತವಾಗಿ ಅನುಮತಿ ನೀಡುತ್ತಿದ್ದು, ಮೊದಲ ಹಂತದಲ್ಲಿ 1800 ಮರಗಳು ತೆರವುಗೊಳ್ಳಲಿದೆ.
Advertisement
ಕುಡುಪು ಗ್ರಾಮದಲ್ಲಿ 4 ಕಿ.ಮೀ ವ್ಯಾಪ್ತಿ ಯಲ್ಲಿ 583 ಮರಗಳು ಮತ್ತು ಗುರುಪುರ ದಿಂದ ಬಡಗ ಎಡಪದವು (ಮಿಜಾರು) ವರೆಗೆ 9.5ಕಿ.ಮೀ ವ್ಯಾಪ್ತಿಯಲ್ಲಿ 1,223ಮರಗಳು ಸೇರಿ ಒಟ್ಟು 13.5 ಕಿ.ಮೀ. ನಲ್ಲಿ 1806 ಮರಗಳು ತೆರವುಗೊಳಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಅರಣ್ಯ ಇಲಾಖೆ ಅನುಮತಿ ಈಗಾಗಲೇ ನೀಡಿದೆ. ಈ ಪೈಕಿ ಕುಡುಪು ಗ್ರಾಮದಲ್ಲಿ 316 ಮರ ಮತ್ತು ಎಡಪದವು ವ್ಯಾಪ್ತಿಯಲ್ಲಿ 448 ಮರಗಳನ್ನು ಅರಣ್ಯ ಇಲಾಖೆ ಸೂಚನೆಯಂತೆ ಹೆದ್ದಾರಿ ಇಲಾಖೆ ಕಡಿದು ವಿಲೇವಾರಿ ಮಾಡಿದೆ.
Related Articles
Advertisement
ರಾ.ಹೆದ್ದಾರಿ ಪ್ರಾಧಿಕಾರ ಭೂ ಸ್ವಾಧೀನ ಪಡಿಸಿಕೊಂಡ ಭಾಗದಲ್ಲಿ ಕಾಮಗಾರಿ ಚುರುಕುಗೊಂಡಿದ್ದು, ಮರಗಳನ್ನು ತೆರವು ಗೊಳಿಸಿ ನೆಲ ಸಮತಟ್ಟುಗೊಳಿಸಿ ಒಂದು ಹಂತದ ಡಾಮರೀಕರಣ ನಡೆಸಲಾಗಿದೆ. ಸುಮಾರು 2-3 ಕಿ.ಮೀ. ನಷ್ಟು ಡಾಮರು ಕಾಮಗಾರಿ ಈ ಭಾಗದಲ್ಲಿ ನಡೆದಿದೆ. ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ವಿಪರೀತ ಧೂಳಿನಿಂದ ಅಂಗಡಿ- ಮನೆಯವರು ಸಂಕಷ್ಟ ಅನುಭವಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ 1,800ರಷ್ಟು ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಮರ ತೆರವುಗೊಳಿಲು ಅರಣ್ಯ ಇಲಾಖೆಗೆ ನಿಗದಿತ ಮೊತ್ತವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಪಾವತಿಸಿದ್ದು, ಪರ್ಯಾಯವಾಗಿ ಗಿಡಗಳನ್ನು ನೆಡುವ ಕುರಿತಂತೆಯೂ ಸೂಚನೆ ನೀಡಲಾಗಿದೆ.-ಡಾ| ದಿನೇಶ್ ಕುಮಾರ್ ವೈ.ಕೆ.,
ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು *ಭರತ್ ಶೆಟ್ಟಿಗಾರ್