Advertisement

ಅಧಿಕಾರಿಗೆ ಮಸಿ ಬಳಿಯಲು ಘೋಷಿಸಿದ್ದ 1 ಲಕ್ಷ ರೂ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ: ಪ್ರತಿಭಾ

08:18 AM Feb 10, 2021 | Team Udayavani |

ಸುರತ್ಕಲ್: ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಹಾಗೂ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ನಿನ್ನೆ ಸಂಜೆ ಮೂಡಬಿದ್ರಿ ಬಳಿಯ ಗರಡಿಯಲ್ಲಿ ಕ್ಷಮೆಯಾಚನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿ ಮುಖಕ್ಕೆ ಮಸಿ ಬಳಿದವರಿಗೆ ಘೋಷಿಸಿದ್ದ 1 ಲಕ್ಷ ರೂ. ಬಹುಮಾನವನ್ನು ಸಮಾಜದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವುದಾಗಿ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.

Advertisement

ಅಧಿಕಾರಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದ ಪ್ರತಿಭಾ ಕುಳಾಯಿ ಅವರು ಪತ್ರಿಕಾಗೋಷ್ಠಿ ಕರೆದು ಅಧಿಕಾರಿ ಕೂಡಲೇ ಕೋಟಿ ಚೆನ್ನಯರ ಗರಡಿಯಲ್ಲಿ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದರು.

ಬಳಿಕ ಫೇಸ್ ಬುಕ್ ಲೈವ್ ನಲ್ಲಿಯೂ,  ಅಧಿಕಾರಿ ಮೂರು ದಿನಗಳ ಒಳಗೆ ಕ್ಷಮೆ ಯಾಚಿಸದಿದ್ದರೆ ಸಮುದಾಯದ ಯಾರಾದರೂ ಯುವಕರು ಅಧಿಕಾರಿ ಮುಖಕ್ಕೆ ಮಸಿ ಬಳಿಯಲು ಮುಂದೆ ಬಂದಲ್ಲಿ ಅವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿದ್ದರು.

ಇದನ್ನೂ ಓದಿ:  ವಿಟ್ಲ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ, ಅಶ್ಲೀಲ ಫೋಟೋ ಬಹಿರಂಗ ಬೆದರಿಕೆ; ಪ್ರಕರಣ ದಾಖಲು

ಈ ಬಗ್ಗೆ ಮಾತಾಡಿದ ಪ್ರತಿಭಾ ಅವರು ಮುಂದಿನ ಮೂರು ದಿನಗಳ ಒಳಗಾಗಿ ಅಧಿಕಾರಿಯನ್ನು ಪಕ್ಷದಿಂದ ಉಚ್ಚಾಟಿಸದಿದ್ದಲ್ಲಿ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next