Advertisement

ಮಂಗಳೂರು ಏಳು ಪಟ್ಣ  ಮೊಗವೀರ ಸಂಯುಕ್ತ ಮಹಾಸಭಾದಿಂದ ಪೂಜೆ

07:05 AM Aug 08, 2017 | Harsha Rao |

ಪಣಂಬೂರು: ಮಂಗಳೂರು ಏಳು ಪಟ್ಣ ಮೊಗವೀರ ಸಂಯುಕ್ತ ಮಹಾ ಸಭಾ ವತಿಯಿಂದ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಸಾಮೂಹಿಕ ಸಮುದ್ರ ಪೂಜೆ ಕದ್ರಿ ಸುವರ್ಣ ಕದಳೀ ಮಠದ ಶ್ರೀ ರಾಜಾಯೋಗಿ ನಿರ್ಮಲಾನಾಥಜೀ ಮಹಾರಾಜ್‌ ಅವರ ನೇತೃತ್ವದಲ್ಲಿ ಸೋಮವಾರ ನೆರವೇರಿತು.

Advertisement

ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಸುರಕ್ಷಿತ ಮತ್ತು ಸಮೃದ್ಧ ಮೀನುಗಾರಿಕೆ ಕರುಣಿಸೆಂಬ ಪ್ರಾರ್ಥನೆ ಯೊಂದಿಗೆ ಸಮುದ್ರಕ್ಕೆ ಹಾಲೆರೆದು ಪೂಜಿಸಲಾಯಿತು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮೊಗವೀರರು ಶ್ರಮಜೀವಿಗಳು, ಸಮುದ್ರವೇ ಅವರಿಗೆ ಅನ್ನದ ಬಟ್ಟಲು ಹೀಗಾಗಿ ದುಡಿಮೆ ಗಾಗಿ ಕಡಲಿಗೆ ಇಳಿಯುವಾಗ ಯಾವುದೇ ಕಂಟಕ ಬಾರದಿರಲಿ; ಮಾತ್ರವಲ್ಲ , ಅವರ ನಿತ್ಯ ಜೀವನದಲ್ಲಿ ಸಮೃದ್ಧಿ ಪ್ರಾಪ್ತವಾಗಲಿ ಎಂದು ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಏಳು ಪಟ್ಣ ಮೊಗವೀರ ಸಂಯುಕ್ತ ಮಹಾಸಭಾವು ಬೋಳೂರು, ಬೊಕ್ಕಪಟ್ಣ, ಕುದ್ರೋಳಿ, ಹೊಗೆ ಬಜಾರ್‌, ಬೋಳಾರ, ಜಪ್ಪು, ನೀರೇಶ್ವಾಲ್ಯ, ಪಡು ಹೊಗೆ ಮೊಗವೀರ ಗ್ರಾಮ ಸಭೆಗಳು ಒಳಗೊಂಡಿದೆ. 
ಕಾರ್ಯಕ್ರಮದಲ್ಲಿ ಮತೊÕ  éàದ್ಯಮಿ ಅಶ್ವಿ‌ನ್‌ ಬೋಳಾರ, ಬೊಕ್ಕಪಟ್ಣ ಬೆಂಗರೆಯ ಅನಿಲ್‌ ಕುಮಾರ್‌ ಕರ್ಕೇರ, ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾ ಉಪಾಧ್ಯಕ್ಷ ಯಾದವ ಸಾಲ್ಯಾನ್‌, ಅಧ್ಯಕ್ಷ ದಿವಾಕರ ಕಾಂಚನ್‌ ಬೆಂಗರೆ, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಸುವರ್ಣ, ಕೋಶಾಧಿಕಾರಿ ಶ್ಯಾಮ್‌ ಸುಂದರ ಕಾಂಚನ್‌, ಏಳು ಗ್ರಾಮದ ಪ್ರತಿನಿ ಧಿ ಮಾಧವ ಸಾಲಿಯಾನ್‌ ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ಗುರಿಕಾರಾರು, ಪದಾಧಿಕಾರಿಗಳು, ಮೊಗವೀರ ಸಮಾಜದ ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು.
ಮಧ್ಯಾಹ್ನ ಮಹಾಸಭಾದ ವತಿಯಿಂದ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಕದ್ರಿ ಶ್ರೀ ಕ್ಷೇತ್ರ ಸುವರ್ಣ ಕದಳೀ ಮಠದಲ್ಲಿ ಸೀಯಾಳಾಭಿಷೇಕ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next