Advertisement

ಮಂಗಳೂರಿನಲ್ಲಿ ಉಭಯಚರ ವಿಮಾನ!

10:24 AM Aug 31, 2019 | Team Udayavani |

ಮಂಗಳೂರು: ನೀರು ಮತ್ತು ನೆಲ – ಎರಡೂ ಕಡೆ ಇಳಿಯುವ ಸಾಮರ್ಥ್ಯವುಳ್ಳ ವಿಶೇಷ ತಂತ್ರಜ್ಞಾನದ ಸೀ ಪ್ಲೇನ್‌ ಗುರುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.

Advertisement

ಕೊಲಂಬೋದಿಂದ ಅಬುಧಾಬಿಗೆ ಪ್ರಯಾಣಿಸುತ್ತಿದ್ದ ಈ ವಿಶೇಷ ವಿಮಾನವು ಇಂಧನ ತುಂಬಿಸಿಕೊಳ್ಳಲು ಮಧ್ಯಾಹ್ನ 1.30ರ ವೇಳೆಗೆ ಆಗಮಿಸಿತ್ತು.

ಖಾಸಗಿ ಸೀ ಪ್ಲೇನ್‌ ಆಗಿದ್ದು, ಪೈಲಟ್‌ ಮಾತ್ರ ಇದ್ದರು. ಅಬುಧಾಬಿಯಿಂದ ವ್ಯಕ್ತಿಯೊಬ್ಬರನ್ನು ಕೊಲಂಬೋಗೆ ಕರೆದೊಯ್ದ ಬಳಿಕ ಅದು ಅಲ್ಲಿಂದ ಮರಳಿ ಹೊರಟಿತ್ತು. ಪ್ರಯಾಣದ ಮಧ್ಯೆ ಇಂಧನ ತುಂಬಿಸಲು ಅವಕಾಶ ಮಾಡಿಕೊಡುವಂತೆ ಕೆಲವು ದಿನ ಹಿಂದೆಯೇ ಇದರ ಸಿಬಂದಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮನವಿ ಮಾಡಿ ಅನುಮತಿ ಪಡೆದಿದ್ದರು. ಲ್ಯಾಂಡಿಂಗ್‌ ಮತ್ತು ಪಾರ್ಕಿಂಗ್‌ ವೆಚ್ಚಗಳನ್ನು ಸಂಬಂಧಿತ ವ್ಯಕ್ತಿ ಪಾವತಿಸಿದ್ದಾರೆ.

ವಿದೇಶಗಳಲ್ಲಿ ಇಂತಹ ವಿಮಾನಗಳು ಸಾಮಾನ್ಯವಾಗಿ ಬಳಕೆಯಲ್ಲಿವೆ. ಕೇರಳದಲ್ಲೂ ಇಂತಹ ವಿಮಾನದ ಮೂಲಕ ಪ್ರವಾಸೋದ್ಯಮ ಯೋಜನೆ ರೂಪಿಸಲಾಗಿದೆ. ನಮ್ಮ ಕರಾವಳಿ ಭಾಗದಲ್ಲಿಯೂ ಸೀ ಪ್ಲೇನ್‌ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಚರ್ಚೆ ಈ ಹಿಂದೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next