Advertisement

Mangalore: ಫ್ಲ್ಯಾಟ್‌ ಮಾರಾಟ- 30 ಲ.ರೂ. ವಂಚನೆ

11:54 PM Nov 30, 2023 | Team Udayavani |

ಮಂಗಳೂರು: ಜಪ್ಪು ಶಾದಿಮಹಲ್‌ ಬಳಿಯ ನಿರ್ಮಾಣ ಹಂತದ ವಸತಿ ಸಮುಚ್ಚಯದಲ್ಲಿ ಫ್ಲ್ಯಾಟ್‌ ನೀಡುವುದಾಗಿ 30 ಲಕ್ಷ ರೂ. ವಂಚಿಸಿರುವ ಕುರಿತಂತೆ ಪಾಲಕ್ಕಾಡ್‌ ಮೂಲದ ದಂಪತಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

Advertisement

ಪಾಲಕ್ಕಾಡ್‌ ಜಿಲ್ಲೆ ಚೆರ್ಪಲ್‌ ಸೇರಿ ನಿವಾಸಿ ರುಕಿಯಾಬಿ ಮೂಡಂಬೈಲ್‌ ಮತ್ತು ಮೊಹಮ್ಮದ್‌ ಆಲಿ ಹಣ ಕಳೆದುಕೊಂಡವರು. 2015ರಲ್ಲಿ ಅಶ್ರಫ್‌ ಹಸನ್‌ ಮತ್ತು ಮೊಹಮ್ಮದ್‌ ಸಲಾಂ ತಮ್ಮನ್ನು ನಿರ್ಮಾಣ ಸಂಸ್ಥೆಯೊಂದರ ಪಾಲುದಾರರೆಂದು ನಂಬಿಸಿ, ಜಪ್ಪು ಶಾದಿಮಹಲ್‌ ಬಳಿಯ ವಸತಿ ಸಮುಚ್ಚಯ ನಿರ್ಮಾಣ ಮಾಡುತ್ತಿದ್ದು, ಅದರಲ್ಲಿ ಮೊದಲನೇ ಮಹಡಿಯನ್ನು 31,75,500 ರೂ.ಗೆ ಮಾರಾಟ ಮಾಡುತ್ತಿದ್ದೇವೆ. 2017ರಲ್ಲಿ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದರು.

ಅವರ ಮಾತನ್ನು ನಂಬಿ 20 ಲಕ್ಷ ರೂ. ಮೌಲ್ಯದ ಚೆಕ್‌ ಹಾಗೂ 10 ಲಕ್ಷ ರೂ. ನಗದು ಪಾವತಿಸಿದ್ದರು. 2017ರಲ್ಲಿ ಅಪಾರ್ಟ್‌ಮೆಂಟ್‌ ಪೂರ್ಣಗೊಳ್ಳದೇ ಇದ್ದುದರಿಂದ ಸಂಸ್ಥೆಯವರನ್ನು ಸಂಪರ್ಕಿಸಿ ಹಣ ವಾಪಸು ಕೇಳಿದ್ದಾರೆ. ಸುಳ್ಳು ನೆಪಗಳನ್ನು ಹೇಳಿ ತಪ್ಪಿಸಿಕೊಂಡಿದ್ದ ಅವರು ಬಳಿಕ ತಲಾ 10 ಲಕ್ಷ ರೂ. ಮೌಲ್ಯದ 3 ಚೆಕ್‌ಗಳನ್ನು ನೀಡಿದ್ದು, ಅದನ್ನು ಬ್ಯಾಂಕ್‌ಗೆ ಹಾಕಿದಾಗ ಅಮಾನ್ಯಗೊಂಡಿವೆ. ಅನಂತರ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next