Advertisement

ಮಂಗಳೂರು ಮೊದಲ ಸಜೀವ ಬಾಂಬ್‌ ಪತ್ತೆ ಪ್ರಕರಣ

09:32 AM Jan 23, 2020 | sudhir |

ಮಂಗಳೂರು: ಹುಸಿ ಬಾಂಬ್‌ ಕರೆ, ಶಂಕಿತ ಸೂಟ್‌ಕೇಸ್‌ ಪತ್ತೆ ಪ್ರಕರಣಗಳು ಮಂಗಳೂರು ನಗರದಲ್ಲಿ ಈ ಹಿಂದೆ ಹಲವು ಬಾರಿ ನಡೆದಿವೆ. ಆದರೆ ವಿಮಾನ ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲಿ ಸಜೀವ ಬಾಂಬ್‌ ಪತ್ತೆಯಾಗಿರುವ ಪ್ರಕರಣ ಇದು ಮೊದಲನೆಯದು.

Advertisement

1951ರಲ್ಲಿ ಕಾರ್ಯಾರಂಭ ಗೊಂಡ ಬಜಪೆ ವಿಮಾನ ನಿಲ್ದಾಣ 2012ರಲ್ಲಿ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿತು. ನಿಲ್ದಾಣದ 69 ವರ್ಷಗಳ ಇತಿಹಾಸದಲ್ಲಿ ಬಾಂಬ್‌ ಬೆದರಿಕೆ ಅಥವಾ ಬಾಂಬ್‌ ಪತ್ತೆಯಂ ತಹ ಪ್ರಕರಣಗಳು ನಡೆದಿರಲಿಲ್ಲ.

ಕಳೆದ 13 ವರ್ಷಗಳಲ್ಲಿ ಮಂಗ ಳೂರಿನಲ್ಲಿ ಎರಡು ಬಾರಿ ಹುಸಿ ಬಾಂಬ್‌ ಬೆದರಿಕೆ, ಒಂದು ಬಾರಿ ಶಂಕಿತ ಸೂಟ್‌ಕೇಸ್‌ ಪತ್ತೆ, ವಿಮಾನ ಪ್ರಯಾಣಿಕನ ಬಳಿ ಪವರ್‌ ಬ್ಯಾಂಕ್‌ ಪತ್ತೆ ಮತ್ತು ಒಮ್ಮೆ ಮನೆಯೊಂದ ರಲ್ಲಿ ಬಾಂಬ್‌ ತಯಾರಿಸುವ ಸಾಮಗ್ರಿಗಳು ಪತ್ತೆಯಾದ ಪ್ರಕರಣ ಗಳು ವರದಿಯಾಗಿವೆ.

ಕಚ್ಚಾ ವಸ್ತು ಪತ್ತೆಯಾಗಿತ್ತು
ದೇಶದ ವಿವಿಧೆಡೆ ನಡೆದ ಬಾಂಬ್‌, ಸ್ಫೋಟದಂತಹ ವಿಧ್ವಂಸಕ ಕೃತ್ಯಗಳ ಹಿನ್ನೆಲೆಯಲ್ಲಿ 2007 ಅ. 3ರಂದು ಮಂಗಳೂರು ಮತ್ತು ಮುಂಬಯಿ ಪೊಲೀಸರು ಕರ್ನಾಟಕ ನಕ್ಸಲ್‌ ನಿಗ್ರಹ ಪಡೆಯ ಸಹಕಾರದಲ್ಲಿ ಉಳ್ಳಾಲದ ಮುಕ್ಕಚ್ಚೇರಿ, ತೊಕ್ಕೋಟು ಸಮೀಪದ ಚೆಂಬುಗುಡ್ಡೆ ಮತ್ತು ಬಳಿಕ ಪಾಂಡೇ ಶ್ವರದ ಸುಭಾಸ್‌ನಗರ ಹಾಗೂ ಇತರ ಕಡೆಗಳಲ್ಲಿ ದಾಳಿ ನಡೆಸಿದ ಸಂದರ್ಭ ಬಾಂಬ್‌ ತಯಾರಿ ಸಾಮಗ್ರಿಗಳು ಪತ್ತೆಯಾಗಿದ್ದವು.

2012-13ರಲ್ಲಿ ನಗರದ ಅತ್ತಾವರದ ಬಹು ಮಹಡಿ ಕಟ್ಟಡದಲ್ಲಿ ಇಬ್ಬರು ಶಂಕಿತ ಉಗ್ರರು 2012ರ ಅಕ್ಟೋಬರ್‌ನಿಂದ 2013ರ ಮಾರ್ಚ್‌ ತನಕ 6 ತಿಂಗಳು ವಾಸ್ತವ್ಯವಿದ್ದು, ಬಾಂಬ್‌ ತಯಾರಿಸಿ ಹೈದರಾಬಾದ್‌ ಮತ್ತು ಇತರ ಕಡೆಗಳಲ್ಲಿ ನಡೆದ ಸ್ಫೋಟಕ್ಕೆ ಸರಬರಾಜು ಮಾಡಿದ್ದರು ಎನ್ನುವುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪತ್ತೆಹಚ್ಚಿತ್ತು.

Advertisement

2012ರಲ್ಲಿ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಶಂಕಿತ ಸೂಟ್‌ಕೇಸ್‌ ಪತ್ತೆ, 2013ರ ಸೆ. 26ರಂದು ಇನ್ಫೋಸಿಸ್‌ ಮಂಗಳೂರು ಕೇಂದ್ರಕ್ಕೆ ಹುಸಿ ಬಾಂಬ್‌ ಕರೆ, 2016 ಎ. 22ರಂದು ಮಿಲಾಗ್ರಿಸ್‌ ಚರ್ಚ್‌ಗೆ ಹುಸಿ ಬಾಂಬ್‌ ಕರೆ, 2017 ಸೆ. 19ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬಾೖಗೆ ಹೊರಟ ಪ್ರಯಾಣಿಕನ ಬಳಿ ಪವರ್‌ ಬ್ಯಾಂಕ್‌ ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next