Advertisement

ಮಂಗಳೂರು ಕುಕ್ಕರ್‌ ಪ್ರಕರಣ: ಕೊಚ್ಚಿಯಲ್ಲಿ ಎನ್‌ಐಎ ತನಿಖೆ

01:10 AM Dec 01, 2022 | Team Udayavani |

ಕೊಚ್ಚಿ: ಮಂಗಳೂರು ಕುಕ್ಕರ್‌ ಪ್ರಕರಣ ಮತ್ತು ಕೊಯಮತ್ತೂರು ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ಕೇರಳದ ಕೊಚ್ಚಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.

Advertisement

ದಕ್ಷಿಣ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಕೈಗೊಳ್ಳಲು ಕೇರಳದಲ್ಲಿ ನಿಧಿ ಸಂಗ್ರಹಿಸಲಾಗುತ್ತಿತ್ತು. ಜತೆಗೆ ಚಿನ್ನ ಮತ್ತು ಡ್ರಗ್ಸ್‌ ಕಳ್ಳಸಾಗಣೆಯಿಂದ ಬಂದ ಲಾಭವನ್ನು ಉಗ್ರ ಚಟುವಟಿಕೆಗಳಿಗೆ ಬಳಸಿಕೊಂಡಿರುವ ಅನುಮಾನವನ್ನು ಎನ್‌ಐಎ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಮಂಗಳೂರು ಕುಕ್ಕರ್‌ ಪ್ರಕರಣದ ಆರೋಪಿ ಮೊಹಮ್ಮದ್‌ ಶಾರೀಕ್‌ ಕೊಚ್ಚಿ ಮತ್ತು ಅಲೆಪ್ಪಿ ನಗರದ ಹಲವು ಕಡೆ ವಾಸವಿದ್ದ. ಡ್ರಗ್ಸ್‌ ವ್ಯವಹಾರ ಕುದುರಿಸಲು ಇಲ್ಲಿಗೆ ಆಗಮಿಸಿದ್ದ. ಇವನ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ ತೆರೆಯ ಹಿಂದಿನ ವ್ಯಕ್ತಿಯೂ ಕೊಚ್ಚಿಯಲ್ಲಿ ನೆಲೆಸಿರುವ ಅನುಮಾನವನ್ನು ಎನ್‌ಐಎ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಜತೆಗೆ ಕೊಚ್ಚಿಯಲ್ಲಿ ವಾಸವಿದ್ದಾಗ ಶಾರೀಕ್‌ ಯಾರ್ಯಾರನ್ನು ಸಂಪರ್ಕಿಸಿದ್ದ ಎಂಬ ಮಾಹಿತಿಯನ್ನು ಎನ್‌ಐಎ ಕಲೆಹಾಕುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next